/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Buddha Kannada film : ವರ್ತನ್‌ ಪಿಕ್ಚರ್ಸ್ ಲಾಂಛನದಲ್ಲಿ ಸುರೇಶ್ ಭಾರದ್ವಾಜ್ ಕನಕಪುರ ನಿರ್ಮಿಸುತ್ತಿರುವ, ರಾಮ್ ಪೆರಿಯಸಾಮಿ ನಿರ್ದೇಶನದಲ್ಲಿ ಮಹೇಶ್ ಬಾಬು ಹಾಗೂ ವಿದ್ಯಾರಾಜ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ ʼಬುದ್ದʼ ಚಿತ್ರದ ಫಸ್ಟ್ ಲುಕ್ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಚಿತ್ರದ  ಫಸ್ಟ್ ಲುಕ್ ಕನ್ನಡ ಜನತೆಯ ಮೆಚ್ಚುಗೆಯನ್ನು ಗಳಿಸಿದೆ. 

ಎಂಜಿನಿಯರಿಂಗ್ ವ್ಯಾಸಂಗ ಮಾಡಿ, ಅಭಿನಯದ ಬಗ್ಗೆ ತರಭೇತಿ ಪಡೆದಿರುವ ಮಹೇಶ್ ಬಾಬು ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಕಾಶಿಯಲ್ಲಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾಡುವ ಯೋಜನೆಯಿದೆ. "ಬುದ್ದ" ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಎಲ್ಲಾ ಚಿತ್ರದಲ್ಲಿ ಕಳೆದು ಹೋದವರನ್ನು ನಾಯಕ ಹುಡುಕಿ ಕೊಡುತ್ತಾನೆ. ಈ ಚಿತ್ರದ ಕಥೆಯಲ್ಲಿ ನಾಯಕನೆ ಕಳೆದು ಹೋಗುತ್ತಾನೆ. ಮುಂದೇನು? ಎಂಬುದೆ ಕುತೂಹಲ ಎಂದು ಚಿತ್ರದ ಕಥೆಯ ತಿರುಳನ್ನು ಹೇಳಿರುವ ನಾಯಕ ಮಹೇಶ್ ಬಾಬು, ಇದೊಂದು ಕೌಟುಂಬಿಕ ಚಿತ್ರ ಎನ್ನುತ್ತಾರೆ. 

ಇದನ್ನೂ ಓದಿ:  2 ಲಕ್ಷಕ್ಕೆ ಮಾರಾಟವಾಯ್ತು ʼಕಡಲತೀರದ ಭಾರ್ಗವʼ ಚಿತ್ರದ ಫಸ್ಟ್‌ ಟಿಕೆಟ್..!

ಚಿತದಲ್ಲಿ ಐದು ಹಾಡುಗಳಿದೆ. ಒಂದು ಹಾಡನ್ನು ಡಾ||ವಿ.ನಾಗೇಂದ್ರ ಪ್ರಸಾದ್, ನಾಲ್ಕು ಹಾಡುಗಳನ್ನು ಚೇತನ್ ಕುಮಾರ್ ಬರೆಯತ್ತಿದ್ದಾರೆ. ರಾಘವೇಂದ್ರ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ನಾಗ ಶೆಟ್ಟಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಹೇಶ್ ಬಾಬು, ವಿದ್ಯಾರಾಜ್, ರಾಮಕೃಷ್ಣ (ತಮಿಳು), ತಬಲನಾಣಿ, ಸಿದ್ಲಿಂಗು ಶ್ರೀಧರ್, ಅರುಣಾ ಬಾಲರಾಜ್ ಮುಂತಾದವರು ಈ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟಿ ಪವಿತ್ರ ಲೋಕೇಶ್ ಅವರು ಸಹ ಎರಡನೇ ಹಂತದಲ್ಲಿ ನಟಿಸುವ ಸಾಧ್ಯತೆಯಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
buddha kannada film trailer released
News Source: 
Home Title: 

ʼಬುದ್ದʼನಾಗಿ ತೆರೆಗೆ ಬರುತ್ತಿದ್ದಾರೆ ಕನ್ನಡದ ಮಹೇಶ್ ಬಾಬು..!

ʼಬುದ್ದʼನಾಗಿ ತೆರೆಗೆ ಬರುತ್ತಿದ್ದಾರೆ ಕನ್ನಡದ ಮಹೇಶ್ ಬಾಬು..!
Yes
Is Blog?: 
No
Tags: 
Facebook Instant Article: 
Yes
Highlights: 

ʼಬುದ್ದʼ ಚಿತ್ರದ ಫಸ್ಟ್ ಲುಕ್ ಬಿಡುಗಡೆ.

ʼಬುದ್ದʼನಾಗಿ ತೆರೆಗೆ ಬರುತ್ತಿದ್ದಾರೆ ಕನ್ನಡದ ಮಹೇಶ್ ಬಾಬು.

ವರ್ತನ್‌ ಪಿಕ್ಚರ್ಸ್ ಲಾಂಛನದಲ್ಲಿ ಸುರೇಶ್ ಭಾರದ್ವಾಜ್ ಕನಕಪುರ ನಿರ್ಮಿಸುತ್ತಿದ್ದಾರೆ.

Mobile Title: 
ʼಬುದ್ದʼನಾಗಿ ತೆರೆಗೆ ಬರುತ್ತಿದ್ದಾರೆ ಕನ್ನಡದ ಮಹೇಶ್ ಬಾಬು..!
Krishna N K
YASHODHA POOJARI
Publish Later: 
No
Publish At: 
Wednesday, February 15, 2023 - 19:11
Created By: 
Krishna Kumar
Updated By: 
Krishna Kumar
Published By: 
Krishna Kumar
Request Count: 
2
Is Breaking News: 
No