Brahmastra: ಬಿಡುಗಡೆಯಾದ 4 ದಿನಗಳಲ್ಲಿ 6 ದಾಖಲೆ ಮುರಿದ ರಣಬೀರ್-ಆಲಿಯಾರ ‘ಬ್ರಹ್ಮಾಸ್ತ್ರ’!

ಭಾರತದಲ್ಲಿ 'ಬ್ರಹ್ಮಾಸ್ತ್ರ' ಚಿತ್ರವು 124.49 ಕೋಟಿ ರೂ. ಬ್ಯುಸಿನೆಸ್ ಮಾಡಿದ್ರೆ, ವಿಶ್ವದಾದ್ಯಂತ ಸುಮಾರು 226.75 ಕೋಟಿ ರೂ.ಗಳಷ್ಟು ವ್ಯಾಪಾರ ಮಾಡಿದೆ.

Written by - Puttaraj K Alur | Last Updated : Sep 13, 2022, 01:37 PM IST
  • ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡುತ್ತಿರುವ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್‍ರ ‘ಬ್ರಹ್ಮಾಸ್ತ್ರ’
  • ಮಿಶ‍್ರ ಪ್ರತಿಕ್ರಿಯೆಗಳ ನಡುವೆ ಬಿಡುಗಡೆಯಾದ ಎಲ್ಲಾ ಕಡೆ ಉತ್ತಮ ಗಳಿಕೆ ಮಾಡಿದ ಚಿತ್ರ
  • ಬಾಲಿವುಡ್ ಚಿತ್ರರಂಗದ ಗಳಿಕೆಯ ಬರ ನೀಗಿಸಿದ ಅಯಾನ್ ಮುಖರ್ಜಿ ನಿರ್ದೇಶನದ ಚಿತ್ರ
Brahmastra: ಬಿಡುಗಡೆಯಾದ 4 ದಿನಗಳಲ್ಲಿ 6 ದಾಖಲೆ ಮುರಿದ ರಣಬೀರ್-ಆಲಿಯಾರ ‘ಬ್ರಹ್ಮಾಸ್ತ್ರ’! title=
ಅತ್ಯುತ್ತಮ ಗಳಿಕೆ ಮಾಡಿದ ‘ಬ್ರಹ್ಮಾಸ್ತ್ರ’

ನವದೆಹಲಿ: ನಿರ್ದೇಶಕ ಅಯನ್ ಮುಖರ್ಜಿಯವರ ‘ಬ್ರಹ್ಮಾಸ್ತ್ರ’ ಹಲವು ವರ್ಷಗಳ ಶ್ರಮದ ನಂತರ ಬಿಡುಗಡೆಯಾಗಿದೆ. ಸೆಪ್ಟೆಂಬರ್ 9ರಂದು ಈ ಸಿನಿಮಾ ದೇಶದಾದ್ಯಂತ ರಿಲೀಸ್ ಆಯ್ತು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ಈ ಚಿತ್ರವು ಮಿಶ್ರ ವಿಮರ್ಶೆಗಳ ನಂತರವೂ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡಿದೆ.  ದಕ್ಷಿಣ ಭಾರತೀಯರ ಸಿನಿಮಾಗಳ ಹವಾದಿಂದ ಬಾಲಿವುಡ್‌ಗೆ ಬರಗಾಲ ಎದುರಾಗಿತ್ತು.

ಹಲವು ಬಿಗ್ ಬಜೆಟ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡದೆ ಮಕಾಡೆ ಮಲಗಿದ್ದವು. ಆದರೆ ಅಯಾನ್ ಮುಖರ್ಜಿ ಚಿತ್ರ ಬಾಕ್ಸ್ ಆಫೀಸ್‌ ಕೊಳ್ಳೆ ಹೊಡೆದಿದೆ. ಮೊದಲ 3 ದಿನದಲ್ಲಿಯೇ 'ಬ್ರಹ್ಮಾಸ್ತ್ರ' ಹಿಂದಿ ಭಾಷೆಯಲ್ಲಿ 112.20 ಕೋಟಿ ರೂ. ವ್ಯವಹಾರ ಮಾಡಿದೆ. ಭಾರತದಲ್ಲಿ ಈ ಚಿತ್ರವು 124.49 ಕೋಟಿ ರೂ. ಬ್ಯುಸಿನೆಸ್ ಮಾಡಿದ್ರೆ, ವಿಶ್ವದಾದ್ಯಂತ ಸುಮಾರು 226.75 ಕೋಟಿ ರೂ.ಗಳಷ್ಟು ವ್ಯಾಪಾರ ಮಾಡಿದೆ. ಆರಂಭದಿಂದಲೂ ವಿವಾದಗಳಿಂದ ಸುತ್ತುವರಿದಿದ್ದ 'ಬ್ರಹ್ಮಾಸ್ತ್ರ' ಚಿತ್ರದ ಕಲೆಕ್ಷನ್ ಅದ್ಭುತವಾಗಿದೆ. ಕೆಲವೇ ದಿನಗಳಲ್ಲಿ ಚಿತ್ರ ಹಲವು ದಾಖಲೆಗಳನ್ನು ಮಾಡಿದೆ.  

ಅತ್ಯುತ್ತಮ ಗಳಿಕೆ ಮಾಡಿದೆ

'RRR' ಮತ್ತು 'KGF 2' ಶುಕ್ರವಾರ ಬಿಡುಗಡೆಯಾಗಿರಲಿಲ್ಲ. ಆದರೆ ವಾರದ ಕೊನೆಯ 3 ದಿನಗಳು ಬಾಕ್ಸ್ ಆಫೀಸ್‌ನಲ್ಲಿ ಸಾಮಾನ್ಯ ವಾರಾಂತ್ಯವಾಗಿದ್ದು, ಇದರಲ್ಲಿ 'ಬ್ರಹ್ಮಾಸ್ತ್ರ' ಭಾರತದಲ್ಲಿ ಮಾತ್ರ 124.49 ಕೋಟಿ ಕಲೆಕ್ಷನ್ ಮಾಡಿದೆ. ಅಂದರೆ ಸಾಮಾನ್ಯ ವಾರಾಂತ್ಯದ ಪ್ರಕಾರ ಅಯಾನ್ ಮುಖರ್ಜಿಯವರ ಚಿತ್ರದ ಗಳಿಕೆ ಹಿಂದಿ ಭಾಷೆಯಲ್ಲಿ 4ನೇ ಅತ್ಯುತ್ತಮ ಆರಂಭಿಕ ವಾರಾಂತ್ಯವಾಗಿದೆ. ಈ ಹಿಂದೆ ಪ್ರಭಾಸ್ ಅಭಿನಯದ 'ಬಾಹುಬಲಿ 2' 128 ಕೋಟಿ ವ್ಯವಹಾರ ಮಾಡಿತ್ತು. ರಣಬೀರ್ ಕಪೂರ್ ಅಭಿನಯದ 'ಸಂಜು' ಮೊದಲ ವಾರಾಂತ್ಯದಲ್ಲಿ 120.6 ಕೋಟಿ ಕಲೆಕ್ಷನ್ ಮಾಡಿತ್ತು. ಸಲ್ಮಾನ್ ಖಾನ್ ಅಭಿನಯದ 'ಟೈಗರ್ ಜಿಂದಾ ಹೈ' 114.93 ಕೋಟಿ ವ್ಯವಹಾರ ಮಾಡಿದ್ದು, 111.20 ಕೋಟಿ ಕಲೆಕ್ಷನ್ ಮಾಡಿದ 'ಬ್ರಹ್ಮಾಸ್ತ್ರ' 4ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Golden Visa: ದುಬೈನಲ್ಲಿ ಗೋಲ್ಡನ್ ವೀಸಾ ಪಡೆದ ಕಿಚ್ಚ ಸುದೀಪ್! ಏನಿದರ ಲಾಭ?

ಒಂದೇ ದಿನದಲ್ಲಿ ಬಂಪರ್ ಗಳಿಕೆ

ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯದ 'ವಾರ್' ಹಿಂದಿ ಚಿತ್ರಗಳಲ್ಲಿಯೇ ಮೊದಲ ದಿನ ಹೆಚ್ಚು ಗಳಿಸಿತ್ತು. ಇದು ಆರಂಭಿಕ ದಿನದಲ್ಲಿ 53.35 ಕೋಟಿ ವ್ಯವಹಾರ ಮಾಡಿದೆ. ಈ ಪಟ್ಟಿಯಲ್ಲಿ 'ಬ್ರಹ್ಮಾಸ್ತ್ರ' 8ನೇ ಸ್ಥಾನದಲ್ಲಿದೆ. ಮೊದಲ ದಿನವೇ ಇದು 41.20 ಕೋಟಿ ಬ್ಯುಸಿನೆಸ್ ಮಾಡಿದೆ.

ಅಗ್ರ ಆರಂಭಿಕ ವಾರಾಂತ್ಯ

'ಬ್ರಹ್ಮಾಸ್ತ್ರ' ಚಿತ್ರದ ಮೊದಲ 3 ದಿನಗಳ ಗಳಿಕೆ ಬಾಲಿವುಡ್‌ನ ಟಾಪ್ ಲೀಗ್‌ನಲ್ಲಿ ಸ್ಥಾನ ಗಳಿಸಿದೆ. ಈ ವರ್ಷದ ಮೊದಲ ವಾರಾಂತ್ಯದ ದಾಖಲೆಯಲ್ಲಿ 'ಕೆಜಿಎಫ್ 2' 380.15 ಕೋಟಿ ವ್ಯವಹಾರದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 'ಬ್ರಹ್ಮಾಸ್ತ್ರ' ಈ ಸಂದರ್ಭದಲ್ಲಿ 124.49 ಕೋಟಿ ಗಳಿಸುವ ಮೂಲಕ 3ನೇ ಸ್ಥಾನದಲ್ಲಿದೆ. ಅದೇ ರೀತಿ ಎಸ್.ಎಸ್.ರಾಜಮೌಳಿಯವರ 'RRR' 324 ಕೋಟಿ ಗಳಿಸಿ 2ನೇ ಸ್ಥಾನದಲ್ಲಿದೆ.

ಹಿಂದಿಯಲ್ಲಿ ಉತ್ತಮ ಆರಂಭಿಕ ವಾರಾಂತ್ಯ

ಹಿಂದಿ ಚಿತ್ರಗಳ ಮೊದಲ ವಾರಾಂತ್ಯದ ಕಲೆಕ್ಷನ್ ನಲ್ಲಿ 'ಬ್ರಹ್ಮಾಸ್ತ್ರ' ಟಾಪ್ 10ರಲ್ಲಿ ಸ್ಥಾನ ಪಡೆದಿದೆ. 'ಕೆಜಿಎಫ್ 2' 193.99 ಕೋಟಿ ವ್ಯವಹಾರ ಮಾಡಿದ್ದರೆ, 180.36 ಕೋಟಿ ಕಲೆಕ್ಷನ್ ಮಾಡಿದ 'ಸುಲ್ತಾನ್' 2ನೇ ಸ್ಥಾನದಲ್ಲಿದೆ. ನಂತರ ಹೃತಿಕ್-ಟೈಗರ್ ಅಭಿನಯದ 'ವಾರ್' 166.25 ಕೋಟಿ ಕಲೆಕ್ಷನ್ ಮಾಡುವ ಮೂಲಕ 3ನೇ ಸ್ಥಾನದಲ್ಲಿದೆ. ಸಲ್ಮಾನ್-ಕತ್ರಿನಾ ಅವರ 'ಭಾರತ್' 150.10 ಕೋಟಿ ವ್ಯವಹಾರ ಮಾಡಿದ್ದರೆ, ಸಲ್ಮಾನ್ ಅಭಿನಯದ 'ಪ್ರೇಮ್ ರತನ್ ಧನ್ ಪಾಯೋ' ಚಿತ್ರ 129.77 ಕೋಟಿ ಕಲೆಕ್ಷನ್ ಮಾಡಿ 5ನೇ ಸ್ಥಾನದಲ್ಲಿದೆ. 128 ಕೋಟಿ ಬ್ಯುಸಿನೆಸ್ ಮಾಡಿದ ಪ್ರಭಾಸ್ ಅವರ 'ಬಾಹುಬಲಿ 2' 6ನೇ ಸ್ಥಾನದಲ್ಲಿದೆ. 123 ಕೋಟಿ ಬ್ಯುಸಿನೆಸ್ ಮಾಡಿದ ಅಮೀರ್ ಖಾನ್ ಅಭಿನಯದ 'ಥಗ್ಸ್ ಆಫ್ ಹಿಂದೂಸ್ತಾನ್' 7ನೇ ಸ್ಥಾನದಲ್ಲಿದ್ದರೆ, ರಣಬೀರ್ ಕಪೂರ್ ಅಭಿನಯದ 'ಸಂಜು' ಚಿತ್ರ 120.6 ಕೋಟಿ ಕಲೆಕ್ಷನ್ ಮಾಡಿ 8ನೇ ಸ್ಥಾನದಲ್ಲಿದೆ. 114.93 ಕೋಟಿ ಕಲೆಕ್ಷನ್ ಮಾಡಿರುವ 'ಟೈಗರ್ ಜಿಂದಾ ಹೈ' ಚಿತ್ರ 9ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: BBK Season 9 : ಬಿಗ್ ಬಾಸ್ ಮನೆಗೆ ನಟ ಅನಿರುದ್ಧ!

ದಕ್ಷಿಣದಲ್ಲಿ ಬಾಲಿವುಡ್‍ನ ಬಂಪರ್ ಗಳಿಕೆ

ದಕ್ಷಿಣ ಭಾರತದಲ್ಲಿ 'ಬ್ರಹ್ಮಾಸ್ತ್ರ' ವಾರಾಂತ್ಯದಲ್ಲಿ 34.70 ಕೋಟಿ ರೂ.ವ್ಯವಹಾರ ಮಾಡಿದೆ. ಈ ಚಿತ್ರ ಕರ್ನಾಟಕದಲ್ಲಿ 8.5 ಕೋಟಿ ಕಲೆಕ್ಷನ್ ಮಾಡಿದ್ರೆ, ಆಂಧ್ರಪ್ರದೇಶ/ತೆಲಂಗಾಣದಲ್ಲಿ 19.2 ಕೋಟಿ, ತಮಿಳುನಾಡಿನಲ್ಲಿ 5.3 ಕೋಟಿ ಮತ್ತು ಕೇರಳದಲ್ಲಿ 1.65 ಕೋಟಿ ರೂ. ಗಳಿಸಿದೆ.

ಆಲಿಯಾ-ರಣಬೀರ್ ಅತ್ಯುತ್ತಮ ಚಿತ್ರ

ಮೊದಲ ವಾರಾಂತ್ಯದಲ್ಲೂ 'ಬ್ರಹ್ಮಾಸ್ತ್ರ' ಭರ್ಜರಿ ಪ್ರದರ್ಶನ ನೀಡಿದೆ. ಹೀಗಾಗಿ ಇದು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್‍ರ ಅತ್ಯುತ್ತಮ ಚಿತ್ರವಾಗಿದೆ. ಈ ಹಿಂದೆ ರಣಬೀರ್ ಅಭಿನಯದ ‘ಸಂಜು’ ಸಿನಿಮಾ ಮೊದಲ ವಾರಾಂತ್ಯದಲ್ಲಿ 120.6 ಕೋಟಿ ಬ್ಯುಸಿನೆಸ್ ಮಾಡಿತ್ತು. ಅದೇ ರೀತಿ 'ಬ್ರಹ್ಮಾಸ್ತ್ರ' 124.49 ಕೋಟಿ ಬ್ಯುಸಿನೆಸ್ ಮಾಡಿದೆ. ಆಲಿಯಾ ಭಟ್‍ರ ಚಿತ್ರಗಳ ಬಗ್ಗೆ ಮಾತನಾಡುವುದಾದರೆ, ‘ಕಳಂಕ್’ ಮೊದಲ ವಾರಾಂತ್ಯದಲ್ಲಿ 62.75 ಕೋಟಿ ವ್ಯವಹಾರ ಮಾಡಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News