ನ್ಯೂಯಾರ್ಕ್ ಮ್ಯೂಸಿಕ್ ಕಾನ್ಸರ್ಟ್ ವೇಳೆ ನಿಕ್ ಜೊನಾಸ್ ಮೇಲೆ ಬ್ರಾ ಎಸೆತ..ನಟನ ಪ್ರತಿಕ್ರಿಯೆ ಹೀಗಿತ್ತು!

Bra thrown at Nick Jonas : ಶನಿವಾರ ನ್ಯೂಯಾರ್ಕ್‌ನ ಯಾಂಕಿ ಸ್ಟೇಡಿಯಂನಲ್ಲಿ ನಡೆದ ಜೋನಸ್‌ ಬ್ರದರ್ಸ್ ಮ್ಯೂಸಿಕ್ ಕಾನ್ಸರ್ಟ್ನಲ್ಲಿ ಗಾಯಕ ನಿಕ್ ಜೊನಾಸ್ ಅವರು ಸಹೋದರ ಕೆವಿನ್ ಜೊನಾಸ್ ಮತ್ತು ಜೋ ಜೊನಾಸ್ ಅವರೊಂದಿಗೆ ಪ್ರದರ್ಶನ ನೀಡಿದ್ದಾರೆ. ಇದೇ ವೇಳೆ ಪ್ರೇಕ್ಷಕರ ಬಳಿಯಿಂದ ಯಾರೋ ಒಬ್ಬರು ನಿಕ್ ಜೊನಾಸ್ ಮೇಲೆ ಬ್ರಾ ಎಸೆದಿದ್ದಾರೆ.

Written by - Savita M B | Last Updated : Aug 13, 2023, 03:35 PM IST
  • ನ್ಯೂಯಾರ್ಕ್‌ನ ಮ್ಯೂಸಿಕ್ ಕಾನ್ಸರ್ಟ್ ವಿಡಿಯೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿವೆ.
  • ಯಾರೋ ಒಬ್ಬರು ನಿಕ್ ಜೊನಸ್ ಮೇಲೆ ಬ್ರಾ ಎಸೆದಿರುವ ದೃಶ್ಯ ಸೆರೆಯಾಗಿದೆ.
  • ಇದಕ್ಕೆ ನಿಕ್‌ ಜೋನಸ್‌ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯೂಯಾರ್ಕ್ ಮ್ಯೂಸಿಕ್ ಕಾನ್ಸರ್ಟ್ ವೇಳೆ ನಿಕ್ ಜೊನಾಸ್ ಮೇಲೆ ಬ್ರಾ ಎಸೆತ..ನಟನ ಪ್ರತಿಕ್ರಿಯೆ ಹೀಗಿತ್ತು! title=

New York music concert : ನ್ಯೂಯಾರ್ಕ್‌ನ ಮ್ಯೂಸಿಕ್ ಕಾನ್ಸರ್ಟ್ ವಿಡಿಯೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿವೆ. ಆದರೆ ಅದರ ಒಂದು ಸಣ್ಣ ವಿಡಿಯೋ ತುಣುಕಿನಲ್ಲಿ ಪ್ರೇಕ್ಷಕರಲ್ಲಿ ಯಾರೋ ಒಬ್ಬರು ನಿಕ್ ಜೊನಸ್ ಮೇಲೆ ಬ್ರಾ ಎಸೆದಿರುವ ದೃಶ್ಯ ಸೆರೆಯಾಗಿದೆ. ಇದಕ್ಕೆ ನಿಕ್‌ ಜೋನಸ್‌ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನಿಕ್‌ ಜೋನಸ್‌ ಅವರ ಅಭಿಮಾನಿಗಯ ಇನಸ್ಟಾಗ್ರಾಂ ಅಕೌಂಟ್‌ನಿಂದ ಹಂಚಿಕೊಳ್ಳಲಾದ ವಿಡಿಯೋದಲ್ಲಿ,  ಗಾಯಕ ನಿಕ್‌ ಜೋನಸ್‌ ನೀಲಿ ಶರ್ಟ್‌ ಮತ್ತು ಮೆರೂನ್‌ ಬಣ್ಣದ ಪ್ಯಾಂಟ್‌ ಧರಿಸಿ ಹಾಡುಹಾಡುತ್ತಿದ್ದಾರೆ. ಅವರು ಪ್ರೇಕ್ಷಕರ ಕಡೆನೋಡಿದಾಗ ಯಾರೋ ಗುಂಪಿನಲ್ಲಿದ್ದವರು ಕಪ್ಪು ಬ್ರಾವನ್ನು ಅವರ ಮೇಲೆ ಎಸೆದಿದ್ದಾರೆ. 

ಇದನ್ನೂ ಓದಿ-ಆಲಿಯಾ ಭಟ್‌ ಮೊದಲ ಸಿನಿಮಾ ಯಾವುದು ಗೊತ್ತೇ? ಸ್ಟೂಡೆಂಟ್‌ ಆಫ್‌ ದಿ ಇಯರ್‌ ಅಲ್ಲವೇ ಅಲ್ಲ!

ಎಸೆದಿರುವ ಬ್ರಾ ನಿಕ್‌ ಅವರ ಕಾಲಿನ ಬಳಿ ಬಂದು ಬಿದ್ದಿತ್ತು. ಸ್ವಲ್ಪ ಹೊತ್ತು ಹಾಡುವುದನ್ನು ನಿಲ್ಲಿಸಿ ಕಾಲಿನ ಬಳಿ ನೋಡಿಕೊಂಡು ನಂತರ ಹಾಡನ್ನು ಮುಂದುವರೆಸಿದ್ದಾರೆ. ನಂತರ ಆ ಮ್ಯೂಸಿಕ್ ಕಾನ್ಸರ್ಟ್ ಯಾವುದೇ ಅಡೆತಡೆಯಿಲ್ಲದೇ ಮುಂದುವರಿಯಿತು. 

ಇನ್ನು ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅದರಲ್ಲಿ ಒಬ್ಬರು.."ಅವರಿಗೆ ಹಾಗೂ ಅವರ ಕುಟುಂಬಕ್ಕೆ ಅಗೌರವಿದೆ..... ಒಬ್ಬ ಕಲಾವಿದನನ್ನು ಹೇಗೆ ಗೌರವಿಸಬೇಕೆಂಬುದನ್ನು ಕಲಿಯಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು "ಇದು ತುಂಬಾ ಮುಜುಗರ ವೆನ್ನಿಸುವ ದೃಶ್ಯ...ದೊಡ್ಡ ಅಗೌರವ ಹಾಗೂ ಅಸಹ್ಯಕರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ-ʼಹಾಸ್ಟೆಲ್‌ ಹುಡುಗರಿಗೆʼ ಡಿಮ್ಯಾಂಡ್‌..! ತೆಲುಗು ರಾಜ್ಯಗಳಲ್ಲಿ ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಸಿನಿಮಾ ರಿಲೀಸ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News