ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆಹೊಡೆದ 'ಜುಮಾಂಜಿ-ದಿ ನೆಕ್ಸ್ಟ್ ಲೆವೆಲ್, ಗಳಿಸಿದ್ದೇಷ್ಟು?

ರವಿವಾರ ಕಲೆಕ್ಷನ್ ನಲ್ಲಿ ಬಾಕ್ಸ್ ಆಫೀಸ್ ಕೊಳ್ಳೆಹೊಡೆದಿರುವ ಈ ಚಿತ್ರ ಮುಂಬರುವ ದಿನಗಳಲ್ಲಿಯೂ ಕೂಡ ಜಬರ್ದಸ್ತ್ ಗಳಿಕೆ ಮಾಡಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

Last Updated : Dec 16, 2019, 07:49 PM IST
ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆಹೊಡೆದ 'ಜುಮಾಂಜಿ-ದಿ ನೆಕ್ಸ್ಟ್ ಲೆವೆಲ್, ಗಳಿಸಿದ್ದೇಷ್ಟು? title=

ಹೊಸದೆಹಲಿ: ಬಿಡುಗಡೆಗೂ ಮುನ್ನವೇ ಹಾಲಿವುಡ್ ನಲ್ಲಿ ಭಾರಿ ಹವಾ ಸೃಷ್ಟಿಸಿದ್ದ ಹಾಲಿವುಡ್ ಚಿತ್ರ 'ಮುಮಾಂಜಿ: ದಿ ನೆಕ್ಸ್ಟ್
ಲೆವಲ್'ಗೆ  ಭಾರತೀಯ ಗಲ್ಲಾ ಪೆಟ್ಟಿಗೆಯಲ್ಲಿ ಜಬರ್ದಸ್ತ್ ಪ್ರತಿಕ್ರಿಯೆ ಸಿಕ್ಕಿದೆ. ಗಳಿಕೆಯ ವಿಷಯದಲ್ಲಿ ಈ ಚಿತ್ರ ಬಾಲಿವುಡ್ ನ
ಖ್ಯಾತ ನಟಿ ರಾಣಿ ಮುಖರ್ಜಿ ಅಭಿನಯದ 'ಮರ್ದಾನಿ 2' ಹಾಗೂ ಇಮ್ರಾನ್ ಹಾಷ್ಮಿ ಮತ್ತು ರಿಷಿ ಕಪೂರ್ ಅಭಿನಯದ 'ಬಾಡಿ'
ಚಿತ್ರಗಳನ್ನು ಮೊದಲ ದಿನವೇ ಹಿಂದಿಕ್ಕಿದೆ. ಅಷ್ಟೇ ಅಲ್ಲ ಮೊದಲ ವಾರಾಂತ್ಯಕ್ಕೆ ಈ ಚಿತ್ರ ಉಳಿದೆಲ್ಲ ಚಿತ್ರಗಳಿಗಿಂತ ಅದ್ಭುತ
ಕಲೆಕ್ಷನ್ ಮಾಡಿದೆ. 

ಬಾಲಿವುಡ್ ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ ಪ್ರಕಾರ, ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಗುರುವಾರ ಈ ಚಿತ್ರ ಪೇಡ್ ಪ್ರಿವ್ಯೂ
ಮೂಲಕ 1.15ಕೋಟಿ ರೂ. ಹಣ ಸಂಪಾದಿಸಿದೆ. ಶುಕ್ರವಾರ ಅಂದರೆ ಚಿತ್ರ ಬಿಡುಗಡೆಯಾದ ಮೊದಲನೆಯ ದಿನ 5.05ಕೋಟಿ
ರೂ. ಹಾಗೂ ಶನಿವಾರ 8.35ಕೋಟಿ ರೂ.ನಷ್ಟು ಜಬರ್ದಸ್ತ್ ಹಣಗಳಿಕೆ ಮಾಡಿದೆ. 

ಇನ್ನೊಂದೆಡೆ ರವಿವಾರ ಈ ಚಿತ್ರ ಗಳಿಸಿರುವ ಹಣದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ನಿನ್ನೆ ರವಿವಾರ ಈ ಚಿತ್ರ ಒಟ್ಟು 10.10
ಕೋಟಿ ರೂ.ಗಳ ಕಲೆಕ್ಷನ್ ಮಾಡಿದ್ದು, ವಾರದಲ್ಲಿ ಅತಿ ಹೆಚ್ಚು ಕಲೆಕ್ಷನ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದುವರೆಗೆ ಈ ಚಿತ್ರ ಒಟ್ಟು 24.96 ಕೋಟಿ ರೂ.ಗಳಷ್ಟು ಹಣ ಕೊಳ್ಳೆಹೊಡೆದಿದೆ. ಅಷ್ಟೇ ಅಲ್ಲ ಮುಂಬರುವ ದಿನಗಳಲ್ಲಿಯೂ
ಕೂಡ ಈ ಚಿತ್ರ ತನ್ನ ಉತ್ತಮ ಪ್ರದರ್ಶನ ಮುಂದುವರೆಸಲಿದೆ ಎಂದು ಚಿತ್ರ ವಿಮರ್ಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡ್ವೇನ್ ಜಾನ್ಸನ್, ಕೆವಿನ್ ಹಾರ್ಟ್, ಜ್ಯಾಕ್ ಬ್ಲಾಕ್, ಕರೆನ್ ಗಿಲಾನ್, ನಿಕ್ ಜೋನಾಸ್ ಹಾಗೂ ಅಕ್ವಫಿನಾ ಅಭಿನಯದ
'ಜುಮಾಂಜಿ: ದಿ ನೆಕ್ಸ್ಟ್ ಲೆವಲ್' ಚಿತ್ರ ವಿಶ್ವಾದ್ಯಂತ ಭರ್ಜರಿ ತೆರೆ ಕಾಣುತ್ತಿದೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಒಂದುವೇಳೆ ತನ್ನ
ನಾಗಾಲೋಟ ಇದೆ ರೀತಿ ಮುಂದುವರೆಸಿದರೆ 'ದಬಂಗ್-3' ಬಿಡುಗಡೆಗೂ ಮುನ್ನವೇ ಭಾರತದಲ್ಲಿ 50ಕೋಟಿ ರೂ. ಹಣ ಗಳಿಕೆ
ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ.

Trending News