ಧ್ರುವ ಸರ್ಜಾ-ಪ್ರೇಮ್ ‘KD’ ಅಡ್ಡಾಗೆ ಎಂಟ್ರಿ ಕೊಟ್ಟ ಬಾಲಿವುಡ್ ಬ್ಯೂಟಿ ಯಾರು!

ಜೋಗಿ ಪ್ರೇಮ್ ಸಿನಿಮಾಗಳು ಅಂದ್ರೆ ಸೌಂಡ್ ಸ್ವಲ್ಪ ಜಾಸ್ತಿನೇ ಇರುತ್ತೆ. ವಾಟ್ಸಾಪ್, ಫೇಸ್ಬುಕ್ ಬರೋಕು ಮುಂಚೆನೇ ಜೋಗಿ ಮೂಲಕ ನ್ಯಾಷನಲ್ ಲೆವಲ್ ನಲ್ಲಿ ಹವಾ ಎಬ್ಬಸಿದ್ದ ನಿರ್ದೇಶಕ ಜೋಗಿ ಪ್ರೇಮ್. ಹೀಗಿರುವಾಗ ಪ್ಯಾನ್ ಇಂಡಿಯಾ ಟ್ರೆಂಡ್ ಜೋರಾಗಿ ನಡೆಯುವಾಗ, ನೇಷನ್ ವೈಡ್ ಅಬ್ಬರ ಎಬ್ಬಿಸ್ಲಿಲ್ಲ ಅಂದ್ರೆ ಹೆಂಗೆ? ಹೀಗಾಗಿನೇ ಕೆಡಿ ಅಡ್ಡಾದಲ್ಲಿ ದೇಶವಾಸಿಗಳಿಗೆ ಪರಿಚಯ ಇರೋ ಮುಖಗಳಿಗೆ ಹೆಚ್ಚು ಆಧ್ಯತೆ ಕೊಡ್ತಿದ್ದಾರೆ ನಿರ್ದೇಶಕ ಪ್ರೇಮ್.

Written by - YASHODHA POOJARI | Edited by - Bhavishya Shetty | Last Updated : Nov 28, 2022, 09:44 AM IST
    • ಕೆಡಿ ಅಡ್ಡಾದಲ್ಲಿ ಗ್ಲಾಮರ್ ರಂಗು ಚೆಲ್ಲಲು ಬಾಲಿವುಡ್ ನ ಬ್ಯೂಟಿ ಎಂಟ್ರಿ
    • ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘KD’ ಚಿತ್ರ
    • ಜೋಗಿ ಪ್ರೇಮ್, ಧ್ರುವ ಜೊತೆ ಸೇರಿ ಯುದ್ದ ಮಾಡೊದು ಪಕ್ಕಾ ಆಗಿದೆ
ಧ್ರುವ ಸರ್ಜಾ-ಪ್ರೇಮ್ ‘KD’ ಅಡ್ಡಾಗೆ ಎಂಟ್ರಿ ಕೊಟ್ಟ ಬಾಲಿವುಡ್ ಬ್ಯೂಟಿ ಯಾರು! title=
Dhruva Sarja

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘KD’ ಚಿತ್ರದ ಹವಾ ಸಖತ್ ಜೋರಾಗಿದೆ. ಜೋಗಿ ಪ್ರೇಮ್, ಧ್ರುವ ಜೊತೆ ಸೇರಿ ಯುದ್ದ ಮಾಡೊದು ಪಕ್ಕಾ ಆಗಿದೆ. ಈ ಯುದ್ದಭೂಮಿಯಲ್ಲಿ ಈಗಾಗಲೇ ಧ್ರುವ ಜೊತೆ ಕೆಜಿಎಫ್ ಅಧೀರ ತೊಡೆ ತಟ್ಟೋದು ಕೂಡ ನಿಮ್ಗೆಲ್ಲಾ ಗೊತ್ತೇ ಇದೆ. ಈಗ ಹೊಸ ವಿಷಯ ಏನಪ್ಪ ಅಂತಂದ್ರೆ ಕೆಡಿ ಅಡ್ಡಾದಲ್ಲಿ ಗ್ಲಾಮರ್ ರಂಗು ಚೆಲ್ಲಲು ಬಾಲಿವುಡ್ ನ ಬ್ಯೂಟಿ ಒಬ್ರು ಬರ್ತಾ ಇದ್ದಾರೆ.

ಜೋಗಿ ಪ್ರೇಮ್ ಸಿನಿಮಾಗಳು ಅಂದ್ರೆ ಸೌಂಡ್ ಸ್ವಲ್ಪ ಜಾಸ್ತಿನೇ ಇರುತ್ತೆ. ವಾಟ್ಸಾಪ್, ಫೇಸ್ಬುಕ್ ಬರೋಕು ಮುಂಚೆನೇ ಜೋಗಿ ಮೂಲಕ ನ್ಯಾಷನಲ್ ಲೆವಲ್ ನಲ್ಲಿ ಹವಾ ಎಬ್ಬಸಿದ್ದ ನಿರ್ದೇಶಕ ಜೋಗಿ ಪ್ರೇಮ್. ಹೀಗಿರುವಾಗ ಪ್ಯಾನ್ ಇಂಡಿಯಾ ಟ್ರೆಂಡ್ ಜೋರಾಗಿ ನಡೆಯುವಾಗ, ನೇಷನ್ ವೈಡ್ ಅಬ್ಬರ ಎಬ್ಬಿಸ್ಲಿಲ್ಲ ಅಂದ್ರೆ ಹೆಂಗೆ? ಹೀಗಾಗಿನೇ ಕೆಡಿ ಅಡ್ಡಾದಲ್ಲಿ ದೇಶವಾಸಿಗಳಿಗೆ ಪರಿಚಯ ಇರೋ ಮುಖಗಳಿಗೆ ಹೆಚ್ಚು ಆಧ್ಯತೆ ಕೊಡ್ತಿದ್ದಾರೆ ನಿರ್ದೇಶಕ ಪ್ರೇಮ್.

ಇದನ್ನೂ ಓದಿ: ಕುತೂಹಲ ಮೂಡಿಸಿದೆ‌ "ಇನಾಮ್ದಾರ್" ಚಿತ್ರದ ಟೀಸರ್

ನೀವೆಲ್ಲಾ ಕೆಜಿಎಫ್ 2 ನೋಡಿದ್ದೀರಿ. ಉತ್ತರ ಭಾರತದಲ್ಲಿ ದೊಡ್ಡ ಮಟ್ಟಕ್ಕೆ ಕೆಜಿಎಫ್ ರೀಚ್ ಆಗುವಲ್ಲಿ ಅಧೀರನ ಪಾತ್ರ ಕೂಡ ಸಾಕಷ್ಟಿತ್ತು. ಅಧೀರನಾಗಿ ಬಾಲಿವುಡ್ ನ ಖಳನಾಯಕ ಖದರ್ ತೋರಿಸಿದ್ರು. ಈಗ ಅದೇ ಅಧೀರ ಕೆಡಿ ಅಡ್ಡಾಗೂ ಬರ್ತಿರೋದು ನಿಮಗೆಲ್ಲಾ ಗೊತ್ತೇ ಇದೆ. ಧೃವ ಎದುರು ತೊಡೆ ತಟ್ಟೋದು ಪಕ್ಕ ಅಂತ ನಾವು ಈಗಾಗಲೆ ನಿಮ್ಗೆ ಹೇಳಿ ಆಗಿದೆ. ಈಗ ಮತ್ತೊಂದು ಸೆನ್ಸೇಷನಲ್ ವಿಷಯ ಅಂತಂದ್ರೆ ಕೆಡಿ ಅಡ್ಡಕ್ಕೆ ಮತ್ತೊಬ್ರು ಗ್ಲಾಮರ್ ಚೆಲುವೆ ಎಂಟ್ರಿಕೊಡೋದು ಫಿಕ್ಸ್ ಆಗಿದೆ.

ಇಲ್ಲೂ ಸಹ ಕೆಜಿಎಫ್ 2 ಸೂತ್ರವನ್ನೇ ಪ್ರೇಮ್ ಪಾಲಿಸ್ತಿದ್ದಾರೆ. ಅಲ್ಲಿ ಅಧೀರ ಇದ್ದಂತೆ, ಇಲ್ಲೂ ಸಹ ಅಧೀರ ಬೇರೆ ಪಾತ್ರದ ಮೂಲಕ ಅಬ್ಬರಿಸಲಿದ್ದಾರೆ. ಹಾಗೆ ಅಲ್ಲಿ ರೀನಾ ಪಾತ್ರದಲ್ಲಿ ರವೀನಾ ಟಂಡನ್ ಕಮಾಲ್ ಮಾಡಿದ್ರು. ರೀನಾ ಪಾತ್ರ ಕೆಜಿಎಫ್ 2 ಗೆ ಬೇರೆಯದ್ದೇ ಆದ ಮೈಲೆಜ್ ಕೊಟ್ಟಿತ್ತು. ಅದರಂತೆ ಕೆಡಿ ಚಿತ್ರದಲ್ಲೂ ಒಂದು ಪವರ್ ಫುಲ್ ಪಾತ್ರ ಕ್ರಿಯೇಟ್ ಮಾಡಲಾಗಿದೆ. ಅದಕ್ಕಾಗಿ ಬಾಲಿವುಡ್ ನ ಬಿಗ್ಗೆಸ್ಟ್ ಸ್ಟಾರ್ ನಟಿಯನ್ನೇ ಕರೆತರಲು ಎಲ್ಲಾ ರೀತಿಯ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

ಕೆಡಿ 80ರ ದಶಕದ ರಕ್ತ ಸಿಕ್ತ ಕಥೆಯನ್ನ ತೆರೆ ಮೇಲೆ ಹೇಳಲು ಹೊರಟಿರೋ ಸಿನಿಮಾ. ಈಗಾಗಲೇ ಟೈಟಲ್ ಟೀಸರ್ ನ ಮೂಲಕವೇ ಈ ಸಿನಿಮಾ ಯಾವ ಮಟ್ಟಿಗೆ ಇಂಟೆನ್ಸ್ ಅಂಡರ್ ವರ್ಲ್ಡ್ ಕಥೆಯನ್ನ ದೃಶ್ಯರೂಪದಲ್ಲಿ ಹೇಳಲಿದೆ ಅನ್ನೋದನ್ನ ತೋರಿಸಿಕೊಟ್ಟಿದೆ. ಟೀಸರ್ ನಲ್ಲಿನ ಧ್ರುವ ರೌಧ್ರವತಾರವನ್ನ ಕಂಡವರು ಇದು ನೆಕ್ಸ್ಟ್ ಲೆವಲ್ ಸಿನಿಮಾ ಗುರು ಅಂತ ಹುಬ್ಬೇರಿಸಿದ್ದಾರೆ. ಅಷ್ಟೇ ಅಲ್ಲದೆ ಧ್ರುವ ಎದುರು ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿಯೂ ಸೆಲೆಕ್ಟ್ ಆಗಿದ್ದಾರೆ.

ಈಗ ಹೊಸ ಸೇರ್ಪಡೆಯಾಗಿ ಕರಾವಳಿಯ ಚೆಲುವೆ, ಬಾಲಿವುಡ್ ನ ಬ್ಯೂಟಿ ಶಿಲ್ಪಾ ಶೆಟ್ಟಿಯನ್ನ ಕರೆತರಲು ಪ್ರೇಮ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಎಂಬತ್ತರ ದಶಕದ ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ರೆಟ್ರೋ ಲುಕ್ ನಲ್ಲಿ ಕಂಗೋಳಿಸೋಕೆ ವೇದಿಕೆ ಸಿದ್ದಪಡಿಸಿರುವ ಪ್ರೇಮ್ ಶಿಲ್ಪಾ ಶೆಟ್ಟಿಗಾಗಿ ಪವರ್ ಫುಲ್ ಪಾತ್ರ ಕಟ್ಟಿದ್ದಾರಂತೆ. ಅಂದ್ಹಾಗೆ ಅದ್ಧೂರಿ ಮುಹೂರ್ತ, ಗ್ರ್ಯಾಂಡ್ ಆಗಿ ಟೈಟಲ್ ಟೀಸರ್ ರಿಲೀಸ್ ಮಾಡಿರೋ ಕೆಡಿ ಚಿತ್ರತಂಡ ಜನವರಿಯಿಂದ ಚಿತ್ರದ ಶೂಟಿಂಗ್ ಶುರು ಮಾಡಲು ಸಿದ್ದತೆ ಮಾಡಿಕೊಳ್ತಿದೆ.

ಇನ್ನು ಶಿಲ್ಪಾ ಶೆಟ್ಟಿಗೆ ಇದು ಕನ್ನಡದಲ್ಲಿ ನಾಲ್ಕನೇ ಸಿನಿಮಾ. ಈ ಹಿಂದೆ ಮೂರು ಬಾರಿ ಸ್ಯಾಂಡಲ್ ವುಡ್ ತೆರೆಮೇಲೆ ನಗು ಚೆಲ್ಲಿ, ನಡು ಬಳುಕಿಸಿ, ಪ್ರೇಕ್ಷಕರ ಎದೆಗೆ ಕಿಚ್ಚು ಹಚ್ಚಿದ್ದಾರೆ ಶಿಲ್ಪಾ. ಅದರಲ್ಲೂ ಪ್ರೀತ್ಸೋದ್ ತಪ್ಪಾ ಚಿತ್ರದಲ್ಲಿನ ಶಿಲ್ಪಾ ಶೆಟ್ಟಿಯ ಗ್ಲಾಮರಸ್ ನೋಟವನ್ನ ಅದ್ಯಾರು ತಾನೆ ಮರೆಯಲು ಸಾಧ್ಯ. ಇದೀಗ ನಾಲ್ಕನೇ ಬಾರಿಗೆ ದಂಡಯಾತ್ರೆ ಹೊರಟಿದ್ದಾರೆ. ಈ ಬಾರಿ ಅದ್ಯಾವ ರೀತಿಯಲ್ಲಿ ಮೋಡಿ ಮಾಡಲಿದ್ದಾರೆ ಅನ್ನೋ ಕುತೂಹಲ ಚಿತ್ರರಸಿಕರಲ್ಲಿ ಹುಟ್ಕೊಂಡಿದೆ.

ಇದನ್ನೂ ಓದಿ: Disha Patani Viral Video: ದಿಶಾ ಪಾಟ್ನಿಯ ಇಂತಹ ಅವತಾರ ನೀವು ಈ ಹಿಂದೆ ಎಂದಿಗೂ ನೋಡಿರಲು ಸಾಧ್ಯವೇ ಇಲ್ಲ

ಕೇಡಿ ಸಿನಿಮಾ ಬಾರಿ ಬಜೆಟ್ ನ ಚಿತ್ರವಾಗಿದ್ದು, ಈ ಚಿತ್ರವನ್ನ ಪ್ರೊಡಕ್ಷನ್ ಅದ್ದೂರಿಯಾಗಿ ತೆರೆಮೇಲೆ ತರಲು ಪ್ಲ್ಯಾನ್ ಮಾಡಿಕೊಂಡಿದೆ. ಅದೇ ಹಾದಿಯಲ್ಲಿ ಚಿತ್ರಕ್ಕಾಗಿ ಕೋಟಿಗಟ್ಟಲ್ಲೆ ಖರ್ಚು ಮಾಡಿ 18 ಎಕರೆಯಲ್ಲಿ ಹಳೆ ಬೆಂಗಳೂರಿನ ಸೆಟ್ ಹಾಕಿಸಲಾಗಿದೆ. ಚಿತ್ರದ ಬಹುತೇಕ ಶೂಟಿಂಗ್ ಅನ್ನು ಸೆಟ್ ನಲ್ಲಿ  ಕಂಪ್ಲೀಟ್ ಮಾಡಲು ಪ್ಲಾನ್ ಮಾಡಿದ್ದಾರೆ. ಪ್ರೇಮ್ ಈಗಾಗಲೇ ಸಂಗೀತದ ಕೆಲಸ ಮುಗಿಸಿ ಧ್ರುವ ಆಗಮನಕ್ಕೆ ಕಾಯ್ತಿರುವ ಪ್ರೇಮ್ ಧ್ರುವಗೆ ರೆಟ್ರೋ ಲುಕ್ ಕೊಟ್ಟು ಕೇಡಿ ಅಡ್ಡಕ್ಕೆ ಕರ್ಕೊಂಡ್ ಹೋಗಿ ಚಿತ್ರವನ್ನು ಮುಗಿಸೋ ಅಲೋಚನೆಯಲ್ಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News