ಮನೆ ಬಿಟ್ಟು ಓಡಿ ಹೋಗಿ.. ಹಲವು ರಾತ್ರಿಗಳನ್ನು ಬೀದಿಯಲ್ಲಿ ಕಳೆದು.. ಡ್ರಗ್ಸ್‌ ಸೇವನೆಗೆ ತುತ್ತಾಗಿದ್ದ ನಟಿ ಈಕೆ!

Bollywood Actress: ಸಾಧನೆಯ ಹಾದಿ ಎಂದಿಗೂ ಸುಲಭವಿರುವುದಿಲ್ಲ.. ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಮನೆ ಮತ್ತು ಕುಟುಂಬವನ್ನೇ ತೊರೆದ ಅನೇಕ ಸ್ಟಾರ್‌ ನಟ-ನಟಿಯರಿದ್ದಾರೆ.. ಇಂದು ಅಂತಹ ಸ್ಟಾರ್‌ ನಟಿಯ ಬಗ್ಗೆ ನಿಮಗೆ ಹೇಳಲಿದ್ದೇವೆ..   

Written by - Savita M B | Last Updated : Feb 24, 2024, 10:11 AM IST
  • ಖ್ಯಾತ ನಟಿಯೊಬ್ಬರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ಓಡಿ ಹೋಗಿ.. ಹಲವು ರಾತ್ರಿಗಳನ್ನು ಬೀದಿಯಲ್ಲಿ ಕಳೆದಿದ್ದಾರೆ.
  • ಮುಂಬೈ ತಲುಪಿದ ನಂತರ ಒಂಟಿಯಾಗಿ ಸಾಕಷ್ಟು ಸವಾಲುಗನ್ನು ಎದುರಿಸಿದ ಈಕೆ ಈಗ ಸ್ಡಾರ್‌ ಹಿರೋಯಿನ್..‌
ಮನೆ ಬಿಟ್ಟು ಓಡಿ ಹೋಗಿ.. ಹಲವು ರಾತ್ರಿಗಳನ್ನು ಬೀದಿಯಲ್ಲಿ ಕಳೆದು.. ಡ್ರಗ್ಸ್‌ ಸೇವನೆಗೆ ತುತ್ತಾಗಿದ್ದ ನಟಿ ಈಕೆ!  title=

Kangana ranaut: ಖ್ಯಾತ ನಟಿಯೊಬ್ಬರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ಓಡಿ ಹೋಗಿ.. ಹಲವು ರಾತ್ರಿಗಳನ್ನು ಬೀದಿಯಲ್ಲಿ ಕಳೆದಿದ್ದಾರೆ.. ಮುಂಬೈ ತಲುಪಿದ ನಂತರ ಒಂಟಿಯಾಗಿ ಸಾಕಷ್ಟು ಸವಾಲುಗನ್ನು ಎದುರಿಸಿದ ಈಕೆ ಈಗ ಸ್ಡಾರ್‌ ಹಿರೋಯಿನ್..‌ 

ಇಂದು ನಾವು ಮಾತನಾಡುತ್ತಿರುವ ನಟಿ ಬೇರೆ ಯಾರೂ ಅಲ್ಲ.. 4 ಬಾರಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಬಾಲಿವುಡ್‌ನ 'ಕ್ವೀನ್‌' ಕಂಗನಾ ರಣಾವತ್.. ಹಲವು ಸಂಕಷ್ಟಗಳ ನಡುವೆ ಜೀವನವನ್ನು ಕಟ್ಟಿಕೊಂಡ ನಟಿ ಈಕೆ.. 

ಇದನ್ನೂ ಓದಿ-ಕೋಟಿಗಟ್ಟಲೇ ಸಂಭಾವನೆ ಪಡೆದ ಭಾರತದ ಮೊದಲ ನಟಿ ಇವರೇ.. ಬಾಲಿವುಡ್‌ನ ಲೇಡಿ ಸೂಪರ್‌ ಸ್ಟಾರ್!!‌

ಕಂಗನಾ ತನ್ನ ಮನೆಯಿಂದ ಓದಿ ಹೋಗಿ ಮುಂಬೈ ತಲುಪಿದಾಗ ಆಕೆಗೆ ಕೇವಲ 15 ವರ್ಷ. ಅಂದಿನಿಂದ ಅನೇಕ ಕಷ್ಟಗಳನ್ನು ಎದುರಿಸಿದ ನಟಿ.. ಸಿನಿಮಾ ಪ್ರವೇಶಿಸಿದ ಕೆಲ ದಿನಗಳಲ್ಲೇ ಡ್ರಗ್ಸ್ ಸೇವನೆಗೆ ತುತ್ತಾಗಿದ್ದರು. ವೃತ್ತಿ ಜೀವನದ ಅಡೆತಡೆಗಳಲ್ಲದೇ ಹಲವು ರಾತ್ರಿಗಳನ್ನು ಬೀದಿಯಲ್ಲೇ ಕಳೆದಿದ್ದಾರೆ.. ಅನೇಕ ಸಂದರ್ಶನಗಳಲ್ಲಿ ನಟಿ ಆ ಕರಾಳ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.. 

ಇದನ್ನೂ ಓದಿ-ಪೊಲೀಸ್‌ ಠಾಣೆ ಮೆಟ್ಟಿಲೇರುತ್ತಾ ದರ್ಶನ್ V/S ಉಮಾಪತಿ ವಾರ್..?

ಇನ್ನು ಕಂಗನಾ 2006 ರಲ್ಲಿ ಇಮ್ರಾನ್ ಹಶ್ಮಿ ಜೊತೆಗಿನ ಥ್ರಿಲ್ಲರ್ 'ಗ್ಯಾಂಗ್‌ಸ್ಟರ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದ ಹಾಡುಗಳು ಭರ್ಜರಿ ಹಿಟ್‌ ಆದವು... ಅಲ್ಲದೇ ಈ ಚಿತ್ರದಲ್ಲಿ ಕಂಗನಾ ಅಭಿನಯಕ್ಕೂ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. 

 ಈ ಚಿತ್ರದ ನಂತರ ಕಂಗನಾ ಅನೇಕ ಚಿತ್ರಗಳಲ್ಲಿ ನಟಿಸಿ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಹೆಸರು ಮಾಡಿದರು.. ಕಂಗನಾ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. ಇವರ ಚಿತ್ರಕ್ಕೆ ವಿದೇಶದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ನಟಿ  4 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.  
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News