ಐಶ್ವರ್ಯ ರೈ ಅತ್ತಿಗೆ ಯಾರು ಗೊತ್ತಾ? ಬ್ಯೂಟಿಯಲ್ಲಿ ವಿಶ್ವ ಸುಂದರಿಯನ್ನೇ ಮೀರಿಸ್ತಾಳೆ ಈ ಚೆಲುವೆ!

Aishwarya Rai Sister in law: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ನಟಿ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ.. ಮಾಡೆಲ್..‌ ನಟಿಯಾಗಿ ಗುರುತಿಸಿಕೊಂಡಿರುವ ಇವರು ತಮ್ಮ ಕುಟುಂಬದಲ್ಲಿ ಪರಿಪೂರ್ಣ ತಾಯಿ, ಮಗಳು, ಸಹೋದರಿ ಆಗಿದ್ದಾರೆ.. 

Written by - Savita M B | Last Updated : Mar 14, 2024, 08:23 AM IST
  • ಮಾಡೆಲ್‌-ನಟಿಯಾಗಿ ಚಿತ್ರರಂಗದಲ್ಲಿ ಹೆಜ್ಜೆ ಮೂಡಿಸಿರುವ ಐಶ್ವರ್ಯಾ ರೈ
  • ಐಶ್ವರ್ಯಾ ರೈ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರನ್ನು 2007 ರಲ್ಲಿ ವಿವಾಹವಾದರು..
  • ನಟಿ ತಮ್ಮ ಅತ್ತಿಗೆ ಶ್ರೀಮಾ ರೈ ಅವರೊಂದಿಗೂ ಉತ್ತಮ ಭಾಂದವ್ಯ ಹೊಂದಿದ್ದಾರೆ..
 ಐಶ್ವರ್ಯ ರೈ ಅತ್ತಿಗೆ ಯಾರು ಗೊತ್ತಾ? ಬ್ಯೂಟಿಯಲ್ಲಿ ವಿಶ್ವ ಸುಂದರಿಯನ್ನೇ ಮೀರಿಸ್ತಾಳೆ ಈ ಚೆಲುವೆ!  title=

Shrima Rai Life Story: ಮಾಡೆಲ್‌-ನಟಿಯಾಗಿ ಚಿತ್ರರಂಗದಲ್ಲಿ ಹೆಜ್ಜೆ ಮೂಡಿಸಿರುವ ಐಶ್ವರ್ಯಾ ರೈ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರನ್ನು 2007 ರಲ್ಲಿ ವಿವಾಹವಾದರು.. ದಂಪತಿಗೆ ಆರಾಧ್ಯ ಎಂಬ ಮಗಳಿದ್ದಾಳೆ..  

ಐಶ್ವರ್ಯ ರೈ ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.. ತಾಯಿ, ಸಹೋದರಿಯೊಂದಿಗೆ ಮಾತ್ರವಲ್ಲ.. ನಟಿ ತಮ್ಮ ಅತ್ತಿಗೆ ಶ್ರೀಮಾ ರೈ ಅವರೊಂದಿಗೂ ಉತ್ತಮ ಭಾಂದವ್ಯ ಹೊಂದಿದ್ದಾರೆ.. ಶ್ರೀಮಾ ಐಶ್ವರ್ಯಾ ಅವರ ಸಹೋದರ ಆದಿತ್ಯ ರೈ ಅವರ ಪತ್ನಿ.. ಅಲ್ಲದೇ ಗ್ಲಾಮರ್‌ ಜಗತ್ತಿಗೆ ಗೊತ್ತಿರುವವರಲ್ಲಿ ಒಬ್ಬರು.. 

 
 
 
 

 
 
 
 
 
 
 
 
 
 
 

A post shared by Shrima Rai | Beauty Fashion Momlife (@shrimarai)

ಇದನ್ನೂ ಓದಿ-Salman Khan : ಸಲ್ಮಾನ್‌ ಖಾನ್‌ಗೆ 2013ರಲ್ಲೇ ಈ ಯುವತಿ ಜೊತೆ ಮದುವೆ ಆಗಿತ್ತಂತೆ..!
 
ಶ್ರೀಮ ರೈ ಹುಟ್ಟಿದ್ದು ಮಂಗಳೂರಿನಲ್ಲಿ, ಬೆಳೆದದ್ದು ಅಮೆರಿಕದ ಫಿಲಡೆಲ್ಫಿಯಾದಲ್ಲಿ. ಇವರ ತಂದೆ USA ಯಲ್ಲಿ ವಿಜ್ಞಾನಿ, ತಾಯಿ USA ನಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದರು ಕೆಲಸ ಮಾಡುತ್ತಿದ್ದರು... ಸೋಷಿಯಲ್‌ ಮಿಡಿಯಾದಲ್ಲಿ ಇವರ ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

ಐಶ್ವರ್ಯ ರೈ ಅವರಂತೆಯೇ ಶ್ರೀಮಾ ರೈ ಕೂಡ ಗ್ಲಾಮರ್‌ ಲೋಕದಲ್ಲಿ ಮಿಂಚಿದವರೇ.. ಇವರು ತಮ್ಮ ವೃತ್ತಿಜೀವನವನ್ನು ಮಾಡೆಲ್ ಆಗಿ ಪ್ರಾರಂಭಿಸಿದರು.. ನಂತರ ಮಿಸೆಸ್ ಇಂಡಿಯಾ ಗ್ಲೋಬ್ 2009 ರಲ್ಲಿ ಭಾಗವಹಿಸಿ ಮೊದಲ ರನ್ನರ್ ಅಪ್ ಆಗಿದ್ದರು... ಅಲ್ಲದೇ ಈಕೆ ಮೋಸ್ಟ್ ಬ್ಯೂಟಿಫುಲ್ ಫೇಸ್ ಎಂಬ ಬಿರುದನ್ನು ಕೂಡ ಗೆದ್ದಿದ್ದಾಳೆ. ಅನೇಕ ಮ್ಯಾಗಜೀನ ಪೇಜ್‌ಗಳಲ್ಲಿ ಕಾಣಿಸಿಕೊಂಡ ಇವರು ಮುಂಬೈನ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನಲ್ಲಿಯೂ ಕೆಲಸ ಮಾಡಿದ್ದಾರೆ.. ಶ್ರೀಮಾ ಮತ್ತು ಆದಿತ್ಯ ರೈ ದಂಪತಿಗೆ ಶಿವಾಂಶ್ ರೈ ಮತ್ತು ವಿಹಾನ್ ರೈ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. 

ಇದನ್ನೂ ಓದಿ-ಸೋಷಿಯಲ್ ಮೀಡಿಯಾ ಸೆನ್ಸೇಷನ್ ಹುಡುಗಿ ಈಗ ದೊಡ್ಡ ಪರದೆಯ ಮೇಲೆ! ಯಾರಿದು? ಯಾವುದು ಆ ಸಿನಿಮಾ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News