Arshad Warsi life : ಬದುಕಿನ ಹೋರಾಟದಲ್ಲಿ ಸೇಲ್ಸ್ ಮ್ಯಾನ್, ಫೋಟೋ ಲ್ಯಾಬ್ ಅಸಿಸ್ಟೆಂಟ್, ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಮಾಡಿ ಇಂದು ಬಾಲಿವುಡ್ ಸ್ಟಾರ್ ಎಂಬ ಕಿರೀಟ ತೊಟ್ಟು, ತಮ್ಮ ನಟನೆಯಿಂದಲೇ ಅಪಾರ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ನಟರೊಬ್ಬರ ಬದುಕಿನ ರೋಚಕ ಕಥೆ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.. ಆ ನಟ ಯಾರು? ಅವರ ಜೀವನದಲ್ಲಿ ಅವರು ಎದುರಿಸಿದ ಕಷ್ಟಗಳನ್ನು ಎನು ಅಂತ ತಿಳಿಯೋಣ.
ಹೌದು.. ನಾವು ಮಾತನಾಡುತ್ತಿರುವುದು ಬೇರೆಯಾರೂ ಅಲ್ಲ ಬಾಲಿವುಡ್ ನಟ ಅರ್ಷದ್ ವಾರ್ಸಿ. ಅವರ ತಂದೆ ಅಹ್ಮದ್ ಅಲಿ ಖಾನ್ ಕವಿ ಮತ್ತು ಗಾಯಕ. ಅಲಿ ಖಾನ್ ಸೂಫಿ ಸಂತ ವಾರಿಸ್ ಪಾಕ್ನ ಅನುಯಾಯಿಯಾಗಿದ್ದರು. ಆದ್ದರಿಂದ ವಾರ್ಸಿ ಎಂಬ ಉಪನಾಮವನ್ನು ಅಳವಡಿಸಿಕೊಳ್ಳಲಾಯಿತು.
ಇದನ್ನೂ ಓದಿ:‘ಕಾಟೇರ’ದಲ್ಲಿ ದರ್ಶನ್ ಜೊತೆ ನಟಿಸಲು ಮಾಲಾಶ್ರೀ ಮಗಳು ಆರಾಧನಾ ಪಡೆದ ಸಂಭಾವನೆ ಎಷ್ಟು?
ಅರ್ಷದ್ 18 ವರ್ಷದವನಾಗಿದ್ದಾಗ, ಅವನ ತಂದೆ ಮೂಳೆ ಕ್ಯಾನ್ಸರ್ನಿಂದ ನಿಧನರಾದರು. ತಂದೆಯ ಮರಣದ ಎರಡು ವರ್ಷಗಳ ನಂತರ ಅರ್ಷದ್ ಅವರ ತಾಯಿ ಮೂತ್ರಪಿಂಡ ವೈಫಲ್ಯದಿಂದ ನಿಧನರಾದರು. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಅನಾಥರಾದರು.
ತನ್ನ ಹೆತ್ತವರ ಮರಣದ ನಂತರ, ಅರ್ಷದ್ ಮುಂಬೈನ ಗ್ರಾಂಟ್ ರೋಡ್ನಲ್ಲಿರುವ ತನ್ನ ಎರಡು ಬಂಗಲೆಗಳನ್ನು ಕಳೆದುಕೊಂಡನು. ಒಂದು ಕಾನೂನು ಸಮಸ್ಯೆಯಿಂದಾಗಿ ಮತ್ತು ಇನ್ನೊಂದನ್ನು ಅವರ ಮನೆಯ ಬಾಡಿಗೆದಾರರು ವಶಪಡಿಸಿಕೊಂಡರು. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಅವರು ತನ್ನ ಸಹೋದರನೊಂದಿಗೆ ಒಂದೇ ಕೋಣೆಯಲ್ಲಿ ವಾಸಿಸುವಂತಾಯಿತು.
ಇದನ್ನೂ ಓದಿ: Year End 2023: ಈ ವರ್ಷ ನಾಯಕರನ್ನೂ ಮೀರಿ ಮಿಂಚಿದ ಖಳನಾಯಕರು..!
10ನೇ ತರಗತಿಯ ನಂತರ, ಅರ್ಷದ್ ಶಾಲೆಯನ್ನು ತೊರೆದು ಸೇಲ್ಸ್ ಮ್ಯಾನ್ ಕೆಲಸ ಪ್ರಾರಂಭಿಸಿದರು. ಬಾಂದ್ರಾ ಮತ್ತು ಬೊರಿವಲಿ ನಡುವೆ ಸಂಚರಿಸುವ ಬಸ್ಗಳಲ್ಲಿ ಲಿಪ್ಸ್ಟಿಕ್ ಮತ್ತು ನೇಲ್ ಪಾಲಿಷ್ಗಳನ್ನು ಮಾರಾಟ ಮಾಡುತ್ತಿದ್ದರು. ಫೋಟೋ ಲ್ಯಾಬ್ನಲ್ಲಿ ಸಹಾಯಕರಾಗಿಯೂ ಕೆಲಸ ಮಾಡುತ್ತಿದ್ದರು.
ನಂತರ ಅರ್ಷದ್ ಅಕ್ಬರ್ ಸಾಮಿ ಅವರ ನೃತ್ಯ ತಂಡಕ್ಕೆ ಸೇರಿಕೊಂಡರು. ನೃತ್ಯದ ಮೇಲಿನ ಪ್ರೀತಿ ಅವರನ್ನು ನೃತ್ಯ ನಿರ್ದೇಶಕರನ್ನಾಗಿ ಮಾಡಿತು. ತದನಂತರ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಟನೆಯ ʼತೇರೆ ಮೇರೆ ಸಪ್ನೆʼ ಚಿತ್ರದ ಮೂಲಕ ನಟನಾಗಿ ವೃತ್ತಿ ಜೀವನ ಆರಂಭಿಸಿದರು.
ಅರ್ಷದ್ ನಂತರ ಮಾರಿಯಾ ಗೊರೆಟ್ಟಿ ಅವರನ್ನು ವಿವಾಹವಾದರು. ಅವರಿಗೆ ಜೆಕೆ ವಾರ್ಸಿ ಮತ್ತು ಜೀನ್ ಜೋ ವಾರ್ಸಿ ಎಂಬ ಇಬ್ಬರು ಮಕ್ಕಳಿದ್ದಾರೆ. ಮುನ್ನಾಭಾಯ್ ಚಿತ್ರದಲ್ಲಿ ಸಂಜಯ್ ದತ್ತ ಜೊತೆ ನಟಿಸಿದ ನಂತರ ಅರ್ಷದ್ ಜನಪ್ರಿಯತೆ ಗಳಿಸಿದರು. ಗೋಲ್ಮಾಲ್ ಸರಣಿ ಮೂಲಕ ಅವರು ಜನಪ್ರಿಯತೆಯನ್ನು ಗಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.