ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ಖಾನ್ ದೋಷಿ

ನಟ ಸೈಫ್ ಅಲಿ ಖಾನ್, ನಟಿ ಟಬು, ನೀಲಮ್ ಮತ್ತು ಸೋನಾಲಿ ಬೇಂದ್ರೆ ಖುಲಾಸೆ.

Last Updated : Apr 5, 2018, 01:10 PM IST
ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ಖಾನ್ ದೋಷಿ title=
Pic: IANS

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋದ್ಪುರ ಕೋರ್ಟ್ ನಿಂದ ತೀರ್ಪು ಹೊರಬಿದ್ದಿದ್ದು, ಖ್ಯಾತ ಬಾಲಿವುಡ್ ತಾರೆ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ತೀರ್ಪು ನೀಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿ ಸಲ್ಮಾನ್ ಖಾನ್ ದೋಷಿ ಎಂದು ಮುಖ್ಯ ನ್ಯಾಯಾಮೂರ್ತಿ ದೇವ್ ಕುಮಾರ್ ಖಾತ್ರಿ ತೀರ್ಪು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಗೆ ಒಂದರಿಂದ ಆರು ವರ್ಷಗಳ ಕಾಲ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸೈಫ್ ಅಲಿ ಖಾನ್, ನಟಿ ಟಬು, ನೀಲಮ್ ಮತ್ತು ಸೋನಾಲಿ ಬೇಂದ್ರೆ ಅವರನ್ನು ಖುಲಾಸೆಗೊಳಿಸಲಾಗಿದ್ದು ಈ ತಾರೆಯರಿಗೆ ಬಿಗ್ ರಿಲೀಫ್ ದೊರೆತಂತಾಗಿದೆ. 

ಪ್ರಕರಣದ ಹಿನ್ನೆಲೆ
'ಹಮ್ ಸಾಥ್ ಸಾಥ್ ಹೈ' ಚಿತ್ರದ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಟಬು, ನೀಲಂ, ಸೋನಾಲಿ ಬೆಂದ್ರೆ ಮತ್ತು ಜೋಧ್ಪುರ್ ನಿವಾಸಿ ದುಶ್ಯಾಂತ್ ಸಿಂಗ್ ಅವರು 1998 ರ ಅಕ್ಟೋಬರ್ 1 ರಂದು ಜೋಧ್ಪುರದಲ್ಲಿ ಲುನಿ ಪೊಲೀಸ್ ಠಾಣೆಯ ಕಂಕನಿ ಗ್ರಾಮದಲ್ಲಿ ಎರಡು ಕೃಷ್ಣಮೃಗ ಬೇಟೆಯಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಾಲಿವುಡ್ ಸ್ಟಾರ್ ಗಳು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದೂ ಸಹ ಹೇಳಲಾಗಿದೆ. ಈ ಬಗ್ಗೆ ಜೋಧಪುರ ಹೈಕೋರ್ಟ್ 2017ರ ಸೆಪ್ಟಂಬರ್ 13ರಂದು ಅಂತಿಮ ಹಂತದ ವಿಚಾರಣೆ ನಡೆಸಿತ್ತು.

ಈ ವಿಭಾಗಗಳ ಅಡಿಯಲ್ಲಿ, ಶಿಕ್ಷೆ 
ಈ ಸಂದರ್ಭದಲ್ಲಿ, ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಸಲ್ಮಾನ್  ಖಾನ್ ವಿರುದ್ಧ ಸೆಕ್ಷನ್ 9/51 ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಮತ್ತೊಂದೆಡೆ, ಸೈಫ್ ಅಲಿ ಖಾನ್, ನೀಲಮ್, ಟಬು, ಸೋನಾಲಿ ಮತ್ತು ದುಶ್ಯಂತ್ ಸಿಂಗ್ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಐಪಿಸಿ ಸೆಕ್ಷನ್ 149 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. 

Trending News