Siri Got Special Authority: ಬಿಗ್ಬಾಸ್ ಕನ್ನಡ 10ರ ಕಳೆದ ವಾರದ ಪಂಚಾಯತಿ ಸಂಚಿಕೆಗಾಗಿ ಇಡೀ ಕರ್ನಾಟಕ ಕಾಯುತ್ತಿದ್ದು, ಆದರೆ, ನಿರೀಕ್ಷಿಸಿದ ಮಟ್ಟಕ್ಕೆ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿರಲಿಲ್ಲ. ಇದನ್ನ ಸ್ವತಃ ಕಿಚ್ಚ ಸುದೀಪ್ ಇಂದಿನ ಪಂಚಾಯತಿ ಸೆಷನ್ನಲ್ಲಿ ಒಪ್ಪಿಕೊಂಡಿದ್ದು, ನಿನೆಯ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸ್ಪರ್ಧಿಗಳ ವಿರುದ್ಧ ಕಿಚ್ಚ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದರು. ಸುದೀಪ್, "ಕಳೆದ ವಾರ ಗಂಧರ್ವರು - ರಾಕ್ಷಸರು ಟಾಸ್ಕ್ ಆದ್ಮೇಲೆ ನಾಯಿಗೆ ಉಗಿದ ಹಾಗೆ ಸುದೀಪ್ ಉಗೀತಾರೆ ಅಂತ ಇಡೀ ಕರ್ನಾಟಕ ಕಾಯುತ್ತಿತ್ತು. ಆದರೆ ಹಾಗೆ ಮಾಡಲಿಲ್ಲ" ಎಂದು ಹೇಳಿದ್ದಾರೆ.
ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಶಿಸ್ತು ಇಲ್ಲ ಎಂಬುದರ ಬಗ್ಗೆ ಈ ವಾರದ ಪಂಚಾಯತಿ ಸೆಷನ್ ಆರಂಭದಲ್ಲೇ ಕಿಚ್ಚ ಸುದೀಪ್ ಬೇಸರ ವ್ಯಕ್ತಪಡಿಸಿದ್ದು, ಹಾಗೆಯೇ ಕ್ಯಾಪ್ಟನ್ ಇದ್ದಾಗ ಬೆಲೆ ಕೊಡಲಿಲ್ಲ, ಕ್ಯಾಪ್ಟನ್ ಇಲ್ಲದಿರುವಾಗಲೂ ನಿಯಮಗಳು ಫಾಲೋ ಆಗ್ತಿಲ್ಲ ಎಂಬ ಕಾರಣಕ್ಕೆ ಕೋಪಗೊಂಡರು. ಈ ಬಗ್ಗೆ ಸ್ಪರ್ಧಿಗಳಿಗೆ ಛೀಮಾರಿ ಹಾಕುತ್ತಿದ್ದ ಸಮಯದಲ್ಲಿ ಕಳೆದ ವಾರದ ವಿಷಯವನ್ನ ಕಿಚ್ಚ ಸುದೀಪ್ ಉಲ್ಲೇಖಿಸಿದರು.
ಇದನ್ನೂ ಓದಿ: BBK 10: "ಸಂಬಳಕ್ಕಾಗಿ ಈ ಕೆಲಸ ಮಾಡಬೇಕಾ ನಾನು?" ದೊಡ್ಮನೆ ಸ್ಪರ್ಧಿಗಳ ನಡುವಳಿಕೆಯಿಂದ ಕಿಚ್ಚ ಗರಂ!
ಸುದೀಪ್ "ಮನೆಯಲ್ಲಿ ಕ್ಯಾಪ್ಟನ್ ಸ್ಥಾನ ಹೋದ್ಮೇಲೆ ಸೆಲೆಬ್ರೇಷನ್ ಶುರು ಮಾಡಿದ್ಧೀರಾ. ಕ್ಯಾಪ್ಟನ್ ಇದ್ದಾಗ ಬೆಲೆ ಕೊಡಲಿಲ್ಲ. ಇಲ್ಲದಿರೋದಕ್ಕೆ ಇನ್ನೂ ಗೌರವ ಇಲ್ಲ. ಅಸಲಿಗೆ, ಕಳೆದ ವಾರ ರಾಕ್ಷಸರು ವರ್ಸಸ್ ಗಂಧವರು ಟಾಸ್ಕ್ ಆದ್ಮೇಲೆ.. ಅಷ್ಟು ಕಿತ್ತಾಟ, ಕೂಗಾಟ ಆದಾಗಲೇ ಇಡೀ ಕರ್ನಾಟಕದಲ್ಲೆಲ್ಲಾ ಜನ ಕಾಯ್ತಾಯಿದ್ದರು. ಬರ್ತಾರೆ ಇವತ್ತು ಸುದೀಪ್ ಅವರು.. ನಾಯಿಗೆ ಉಗಿದ ಹಾಗೆ ಉಗೀತಾರೆ.. ಒಂದ್ ನಾಲ್ಕು ಜನರಿಗೆ ಸಿಕ್ಕಾಪಟ್ಟೆ ಬೈಯ್ಯುತ್ತಾರೆ.. ಹಾಗೆ ಹೀಗೆ ಅಂತ ತುಂಬಾ ಇತ್ತು. ಆದರೆ, ನಾವು ಆರಾಮಾಗಿ ಸಾರ್ಟ್ ಔಟ್ ಮಾಡಿ ಕಳೆದ ವಾರ ಹೋದ್ವಿ. ನಾವು ಯಾಕೆ ಉಗೀಲಿಲ್ಲ ಅಂದ್ರೆ ಬಿಗ್ಬಾಸ್ ಮನೆ ಅಂದ್ಮೇಲೆ ಅವೆಲ್ಲಾ ಇರುತ್ತೆ. ಟಾಸ್ಕ್ನಲ್ಲಿ ಇರುತ್ತೆ" ಎಂದು ಕಿಚ್ಚ ಸುದೀಪ್ ಹೇಳಿದರು.
ಬಳಿಕ ಕಿಚ್ಚ ಸುದೀಪ್, "ಈ ವಾರ ಹೀಗೆ ಇರಲೇಬಾರದು. ಆದರೆ, ನಿಮ್ಮೆಲ್ಲರಿಗೂ ಖುಷಿ ಕೊಡಲು ಹೋದ ನಮಗೆ ನೀವು ಕೊಟ್ಟಿರುವ ಉಡುಗೊರೆ ಇದು" ಎಂದು ಸ್ಪರ್ಧಿಗಳ ಅಶಿಸ್ತು ಬಗ್ಗೆ ಬೇಸರ ಹೊರಹಾಕಿದರು. ದೊಡ್ಮನೆಯ ಸ್ಪರ್ಧಿಗಳಿಗೆಲ್ಲಾ ಕಿವಿ ಹಿಂಡಿದ ಬಳಿಕ, ಬಿಗ್ಬಾಸ್ ಮನೆಯಲ್ಲಿ ರೂಲ್ಸ್ ಸರಿಯಾಗಿ ಫಾಲೋ ಆಗದ ಕಾರಣ, "ಯಾರು ಪಕ್ಕಾ ರೂಲ್ಸ್ ಫಾಲೋ ಮಾಡ್ತಾರೆ?" ಎಂದು ಕಿಚ್ಚ ಸುದೀಪ್ ಕೇಳಿದಾಗ, ಅದಕ್ಕೆ, ಬಹುತೇಕ ಮಂದಿ ಸಿರಿ ಹೆಸರು ಹೇಳಿದರು. ಹೀಗಾಗಿ, "ನಿಯಮಗಳನ್ನ ಎಲ್ಲರೂ ಫಾಲೋ ಮಾಡುವ ಹಾಗೆ ನೋಡಿಕೊಳ್ಳಿ. ಈ ಅಧಿಕಾರವನ್ನ ನಾನು ನಿಮಗೆ ಕೊಡ್ತಾ ಇದ್ದೇನೆ. ಯಾರಿಗೆ ಏನೇ ಶಿಕ್ಷೆ ಕೊಡಬೇಕಾದರೂ ಕೊಡಬಹುದು" ಎಂದು ಸಿರಿಗೆ ಕಿಚ್ಚ ಸುದೀಪ್ ವಿಶೇಷ ಅಧಿಕಾರ ನೀಡಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.