BBK 10 : ಬಿಗ್ ಬಾಸ್ ಮನೆಯೊಳಗೆ ಖ್ಯಾತ ಕನ್ನಡ ನಟಿ ಎಂಟ್ರಿ!

Sandalwood Actress Entry To Bigg Boss : ವರ್ತೂರು ಸಂತೋಷ್ ಮನೆಯಿಂದ ಏಕಾಏಕಿ ಹೊರ ಹೋಗಿದ್ದಾರೆ. ಇದರ ಬೆನ್ನಲ್ಲೇ ನಿನ್ನೆ ಮರಳಿನ ಮೂಟೆ ಹೊರುವ ಶಿಕ್ಷೆ ನೀಡಿದರು. ಇದೀಗ ಮತ್ತೊಂದು ಶಾಕ್‌ ಆಗಿದ್ದು, ಈ ಮಧ್ಯೆ ಹಿರಿಯ ನಟಿಯೊಬ್ಬರ ಎಂಟ್ರಿ ಆಗಿದೆ.   

Written by - Chetana Devarmani | Last Updated : Oct 24, 2023, 01:04 PM IST
  • ಬಿಗ್ ಬಾಸ್ ಕನ್ನಡ ಸೀಸನ್‌ 10
  • ಖ್ಯಾತ ನಟಿ ಬಿಗ್ ಬಾಸ್ ಮನೆಗೆ ಎಂಟ್ರಿ
  • ಬಿಗ್ ಬಾಸ್ ಮನೆಯಲ್ಲಿ ದಸರಾ ಸಂಭ್ರಮ
BBK 10 : ಬಿಗ್ ಬಾಸ್ ಮನೆಯೊಳಗೆ ಖ್ಯಾತ ಕನ್ನಡ ನಟಿ ಎಂಟ್ರಿ! title=

Bigg Boss Kannada Season 10 : ಬಿಗ್ ಬಾಸ್ ಕನ್ನಡ ಸೀಸನ್‌ 10 ರಲ್ಲಿ ಇಬ್ಬರೂ ಸ್ಪರ್ಧಿಗಳು ಎಲಿಮಿನೇಟ್‌ ಆಗಿದ್ದಾರೆ. ಮೂರನೇ ದಿನಕ್ಕೆ ಕಾಲಿಡುತ್ತಿದ್ದಂತೆ ಜಗಳದ ಕಾವು ಜೋರಾಗಿದೆ. ಇದೀಗ ಮೂರನೇ ವಾರ ಶಾಕ್‌ ಮೇಲೆ ಕಾಕ್‌ ಎದುರಾಗಿದೆ. ವರ್ತೂರು ಸಂತೋಷ್ ಮನೆಯಿಂದ ಏಕಾಏಕಿ ಹೊರ ಹೋಗಿದ್ದಾರೆ. ಇದರ ಬೆನ್ನಲ್ಲೇ ನಿನ್ನೆ ಮರಳಿನ ಮೂಟೆ ಹೊರುವ ಶಿಕ್ಷೆ ನೀಡಿದರು. ಇದೀಗ ಮತ್ತೊಂದು ಶಾಕ್‌ ಆಗಿದ್ದು, ಈ ಮಧ್ಯೆ ಹಿರಿಯ ನಟಿಯೊಬ್ಬರ ಎಂಟ್ರಿ ಆಗಿದೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಮನೆಗೆ ತಾರಾ ಬಂದಿದ್ದಾರೆ. ತಾರಾ ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಈ ಹಿಂದೆಯೂ ಕೆಲವು ರಿಯಾಲಿಟಿ ಶೋಗಳಲ್ಲಿ ತಾರಾ ಕಾಣಿಸಿಕೊಂಡಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡ ರಾಜ ರಾಣಿ ಹಾಗೂ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗೆ ತಾರಾ ಜಡ್ಜ್ ಆಗಿದ್ದರು. ಇದೀಗ ಬಿಗ್‌ ಬಾಸ್‌ ಮನೆಗೆ ತಾರಾ ಎಂಟ್ರಿ ಎಲ್ಲರಿಗೂ ಶಾಕಿಂಗ್‌ ಆಗಿದೆ. 

ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಲ್ಲಿ ಶುರುವಾಗೇ ಬಿಡ್ತು ಪ್ರೇಮ ಕಹಾನಿ.. ನಾವಿಬ್ರೂ ಇನ್ಮುಂದೆ ಅಧಿಕೃತವಾಗಿ ಪ್ರೇಮಿಗಳು ಎಂದ ಸ್ಪರ್ಧಿಗಳು! 

ವಿಜಯದಶಮಿ ನಿಮಿತ್ತ ಬಿಗ್ ಬಾಸ್ 10 ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹೊಸ ಬಟ್ಟೆ ಧರಿಸಿ, ದಸರಾ ಹಬ್ಬ ಆಚರಿಸಿದ್ದಾರೆ. ಈ ಹಬ್ಬದ ಸಡಗರದಲ್ಲಿ ತಾರಾ ಭಾಗಿಯಾಗಿದ್ದಾರೆ. ತಾರಾ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಮುಖ್ಯದ್ವಾರದ ಮೂಲಕ ತಾರಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ತಾರಾ ಆಗಮನದಿಂದ ಎಲ್ಲರಿಗೂ ಖುಷಿ ಆಗಿದೆ.  

 

 

ತಾರಾ ಅವರು ಮನೆಯಲ್ಲಿ ಫನ್‌ ಆಕ್ಟಿವಿಟಿ ಮಾಡಿಸಿದ್ದಾರೆ. ಈ ಆಕ್ಟಿವಿಟಿಗೆ ಬಿಗ್ ಬಾಸ್​ ಸಾಂಗ್ ಪ್ಲೇ ಮಾಡಿದ್ದಾರೆ, ಹಾಡಿಗೆ ಸೂಕ್ತ ಎನಿಸುವ ಸ್ಪರ್ಧಿ ಯಾರೆಂದು ಬೇರೆಯವರು ಹೇಳಬೇಕು. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇದನ್ನೂ ಓದಿ: Varthur Santhosh : ಪರಪ್ಪನ ಅಗ್ರಹಾರಕ್ಕೆ ಬಿಗ್‌ಬಾಸ್‌ ಸ್ಪರ್ಧಿ ಶಿಫ್ಟ್‌.! ಸಂತೋಷ್‌ಗೆ 14 ದಿನ ನ್ಯಾಯಾಂಗ ಬಂಧನ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News