ಬಿಗ್‌ ಬಾಸ್‌ನಲ್ಲಿ ಗುಟ್ಟಾಗಿ ಮೊಬೈಲ್‌ ಬಳಸುತ್ತಾರಾ ಸ್ಪರ್ಧಿಗಳು.. ಸಂಗೀತಾ ಹಿಂದಿದ್ದ ಚಾರ್ಜರ್‌ ಬಿಚ್ಚಿಟ್ಟ ಸತ್ಯ!

Bigg Boss Kannada Season 10: ವೈರಲ್‌ ಆದ ಫೋಟೋ ನೋಡಿದವಿಗೆ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಗಳು ಗುಟ್ಟಾಗಿ ಮೊಬೈಲ್‌ ಬಳಸುತ್ತಾರಾ ಎಂಬ ಅನುಮಾನ ಹುಟ್ಟು ಹಾಕಿದೆ. 

Written by - Chetana Devarmani | Last Updated : Dec 22, 2023, 12:11 PM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10
  • ಬಿಗ್‌ ಬಾಸ್‌ ಮನೆಯಲ್ಲಿ ಮೊಬೈಲ್‌ ಬಳಕೆ?
  • ಚಾರ್ಜರ್‌ ಹಿಂದಿನ ಅಸಲಿ ಸತ್ಯವೇನು?
ಬಿಗ್‌ ಬಾಸ್‌ನಲ್ಲಿ ಗುಟ್ಟಾಗಿ ಮೊಬೈಲ್‌ ಬಳಸುತ್ತಾರಾ ಸ್ಪರ್ಧಿಗಳು.. ಸಂಗೀತಾ ಹಿಂದಿದ್ದ ಚಾರ್ಜರ್‌ ಬಿಚ್ಚಿಟ್ಟ ಸತ್ಯ!  title=

Bigg Boss Kannada Season 10: ಬಿಗ್‌ ಬಾಸ್‌ ಮನೆಯಲ್ಲಿ ಹೊರಗಿನ ಯಾವ ಸಂಪರ್ಕವೂ ಸಿಗದಂತೆ ಸ್ಪರ್ಧಿಗಳನ್ನು ಇರಿಸಲಾಗುತ್ತದೆ. ಒಮ್ಮೆ ಒಳಗೆ ಹೋದ ಸ್ಪರ್ಧಿಗಳು ಹೊರಬರುವುದು ಬಿಗ್‌ ಬಾಸ್‌ ಆದೇಶದ ಮೇಲೆಯೇ. ಅಲ್ಲಿ ಅದೇ ಅವರ ಪ್ರಪಂಚ. ಮೊಬೈಲ್‌, ಟಿವಿ, ನ್ಯೂಸ್‌ ಪೇಪರ್‌ ಹೀಗೆ ಯಾವುದೇ ಸಂಪರ್ಕ ಸಾಧನಗಳು ಅವರ ಬಳಿ ಇರುವುದಿಲ್ಲ. ಆದರೆ ಇದೀಗ ಒಂದು ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: Salaar vs Dunki: 'ಡಂಕಿ'ಗೆ 'ಸಲಾರ್' ಸವಾಲ್..‌ ಬಾಕ್ಸಾಫೀಸ್‌ನಲ್ಲಿ ಮುನ್ನಡೆ ಯಾರಿಗೆ ಗೊತ್ತೇ! 

ವೈರಲ್‌ ಆದ ಫೋಟೋ ನೋಡಿದವಿಗೆ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಗಳು ಗುಟ್ಟಾಗಿ ಮೊಬೈಲ್‌ ಬಳಸುತ್ತಾರಾ ಎಂಬ ಅನುಮಾನ ಹುಟ್ಟು ಹಾಕಿದೆ. ಬೆಡ್‌ ಮೇಲೆ ಸಂಗೀತಾ ಶೃಂಗೇರಿ ಕುಳಿತಿದ್ದಾರೆ. ಅವರ ಹಿಂದಿರುವ ಪ್ಲಗ್‌ನಲ್ಲಿ ಚಾರ್ಜ್‌ ಕಾಣುತ್ತಿದೆ. ಇದು ನೋಡಲು ಥೇಟ್‌ ಮೊಬೈಲ್‌ ಚಾರ್ಜರ್‌ನಂತೆಯೇ ಕಾಣುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಫೋಟೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಈ ಫೋಟೋಗೆ ಹಲವರು ಕಾಮೆಂಟ್‌ ಮಾಡಿದ್ದಾರೆ. ಕೆಲವರು ಅದು ಮೊಬೈಲ್‌ ಚಾರ್ಜರ್‌ ಎಂದೇ ವಾದ ಮಾಡಿದ್ದಾರೆ. ಆದರೆ ಮತ್ತೊಂದಿಷ್ಟು ಮಂದಿ ಅದು ಟ್ರಿಮ್ಮರ್‌ ಚಾರ್ಜರ್‌ ಎಂದು ಹೇಳಿದ್ದಾರೆ. ಅಸಲಿಗೆ ಇದು ಟ್ರಿಮ್ಮರ್‌ ಚಾರ್ಜರ್‌ ಆಗಿದ್ದು. ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಯಾವುದೇ ಫೋನ್‌ ಬಳಕೆ ಮಾಡುತ್ತಿಲ್ಲ ಎಂದು ಹೇಳಲಾಗ್ತಿದೆ. 

ಇದನ್ನೂ ಓದಿ: Salaar Review: ಬಹುನಿರೀಕ್ಷಿತ ಸಲಾರ್‌ ರಿಲೀಸ್‌.. ಗೂಸ್‌ ಬಂಪ್ಸ್‌ ಗ್ಯಾರೆಂಟಿ, ಕಂಪ್ಲೀಟ್ ಸಿನಿಮಾದ ವಿಮರ್ಶೆ ಇಲ್ಲಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News