Michael Vs Sangeetha: ಬಿಗ್‌ಬಾಸ್ ಕನ್ನಡ ಸೀಸನ್ 10ರ ಕಾರ್ಯಕ್ರಮದಲ್ಲಿ ಸಂಗೀತಾ ʼಸಮಯ ಸಾಧಕಿʼ ಅಂತ ಹಿಂದೊಮ್ಮೆ ತನಿಷಾ ಹೇಳಿದ್ದರು. ವರ್ತೂರು ಸಂತೋಷ್ ಅವರಿಗೆ 34 ಲಕ್ಷಕ್ಕೂ ಅಧಿಕ ವೋಟ್ಸ್ ಬಿದ್ದಿದೆ ಅಂತ ಬಹಿರಂಗವಾದ್ಮೇಲೆ.. ವರ್ತೂರು ಸಂತೋಷ್ ಜೊತೆಗೆ ಸಂಗೀತಾ ಕ್ಲೋಸ್ ಆಗಿದ್ದನ್ನ ಕಂಡು ಸಂಗೀತಾ ʼಅವಕಾಶವಾದಿʼ ಎಂದು ಮೈಕಲ್ ಅಭಿಪ್ರಾಯ ಪಟ್ಟಿದ್ದರು. ಇದೀಗ ಚಟುವಟಿಕೆಯೊಂದರಲ್ಲಿ ಸಂಗೀತಾ ನಡೆದುಕೊಂಡ ರೀತಿ ಕಂಡು ಮೈಕಲ್ ಗುಡುಗಿದ್ದಾರೆ. ‘’ಸಂಗೀತಾ ಅವಕಾಶವಾದಿ, ಸಮಯ ಸಾಧಕಿ’’ ಅಂತ ಮೈಕಲ್ ಒತ್ತಿ ಒತ್ತಿ ಹೇಳಿದ್ದಾರೆ.
ಬಿಗ್‌ಬಾಸ್ ಮನೆಯೊಳಗೆ ‘ಗಜಕೇಸರಿ’ ಹಾಗೂ ‘ಸಂಪತ್ತಿಗೆ ಸವಾಲ್’ ತಂಡಗಳಿಗೆ ಬಿಗ್‌ಬಾಸ್ ಪ್ಲಕ್ ಇಟ್ ಪುಷ್ಪವತಿ ಟಾಸ್ಕ್ ನೀಡಿದ್ದು, ಇದರ ಅನುಸಾರ, ಪ್ರತಿ ತಂಡ ತಮ್ಮ ಬಣ್ಣದ ಹೂಗಳನ್ನು ನೆಟ್ಟು ಎದುರಾಳಿ ತಂಡದಿಂದ ಕಾಪಾಡಿಕೊಳ್ಳಬೇಕು. ಕೊನೆಯ ಬಝರ್ ಹೊತ್ತಿಗೆ ಚೌಕಟ್ಟಿನಲ್ಲಿ ಯಾವ ತಂಡದ ಹೂಗಳು ಹೆಚ್ಚು ಇರುತ್ತದೆಯೋ ಅವರು ಗೆದ್ದಂತೆ. ಚೌಕಟ್ಟಿನಲ್ಲಿ ಹೂ ನೆಟ್ಟು, ಅವುಗಳನ್ನ ಕಾಪಾಡಲು ‘ಸಂಪತ್ತಿಗೆ ಸವಾಲ್’ ತಂಡಿಂದ ವರ್ತೂರು ಸಂತೋಷ್ ಇದ್ದರು, ‘ಗಜಕೇಸರಿ’ ತಂಡದಿಂದ ಡ್ರೋನ್ ಪ್ರತಾಪ್ ಇದ್ದರು. ನಮ್ರತಾ ಗೌಡ ಹಾಗೂ ತನಿಷಾ ಉಸ್ತುವಾರಿ ಮಾಡುತ್ತಿದ್ದರು.
ಇದನ್ನೂ ಓದಿ: BBK 10: ಸಂಗೀತಾ ಶೃಂಗೇರಿ ಹೇಳೋದೊಂದು, ಮಾಡೋದೊಂದು! "ಮಾನವೀಯತೆ" ಬರೀ ಡೈಲಾಗ್‌ಗೆ ಮಾತ್ರ ಸೀಮಿತವಾಯ್ತಾ?
ಚೌಕಟ್ಟಿನಲ್ಲಿ ಎದುರಾಳಿ ತಂಡದ ಹೂಗಳನ್ನು ಕಿತ್ತು ಹಾಕಲು ತುಕಾಲಿ ಸಂತು ಆಗಮಿಸಿದಾಗ ವರ್ತೂರು ಸಂತೋಷ್ ಮೇಲೆ ಸಪೋರ್ಟ್ ತಗೊಂಡು ಹೂವನ್ನ ಕಿತ್ತುಹಾಕಲು ಮುಂದಾದರು. ಈ ವೇಳೆ ತುಕಾಲಿ ಸಂತು ಮೇಲೆ ಸ್ನೇಹಿತ್ ಬಿದ್ದು, ಕೆಳಗೆ ತಳ್ಳಿದರು ಮೇಲೇಳಲು ಯತ್ನಿಸಿದರು. ಇದನ್ನ ಗಮನಿಸಿದ ಮೈಕಲ್ "ಸ್ನೇಹಿತ್ ಏನ್ಮಾಡ್ತಾಯಿದ್ದೀಯಾ ಗುರು.. ನಂಗೆ ಆಡೋಕೆ ಗೊತ್ತು. ನಂಗೆ ಆ ತರಹ ಚೆನ್ನಾಗಿ ಆಡೋಕೆ ಗೊತ್ತು. ಆಡೋಣ" ಎಂದು ಮೈಕಲ್ ಸಿಟ್ಟಾದರು.
ಈ ಮಧ್ಯೆ ತುಕಾಲಿ ಸಂತುಗೆ ಪೆಟ್ಟಾದ ಕಾರಣ, ಗೇಮ್‌ನ ಉಸ್ತುವಾರಿಗಳು ಹೋಲ್ಡ್ ಮಾಡಿದರು. ಈ ವೇಳೆ ‘ಸಂಪತ್ತಿಗೆ ಸವಾಲ್’ ತಂಡ ಹಾಳು ಮಾಡಿದ್ದ ತಮ್ಮ ಬಣ್ಣದ ಹೂಗಳು, ಹೂಕಡ್ಡಿಗಳನ್ನ ಸಿರಿ ಮತ್ತು ಸಂಗೀತಾ ಆಯ್ದುಕೊಂಡದನ್ನ ಗಮನಿಸಿದ ಮೈಕಲ್, "ಗೇಮ್‌ನ ನಾನು ಸ್ಟಾಪ್ ಮಾಡಲ್ಲ. ನಾನು ಆಡ್ತೀನಿ" ಎಂದು ಮುಂದಾದರು. ಇದನ್ನ ಉಸ್ತುವಾರಿ ಪ್ರಶ್ನೆ ಮಾಡಿದಾಗ, "ತಗೊಳ್ಬಾರದು ಅಂತ ರೂಲ್ ಇದ್ಯಾ?’’ ಎಂದು ಸಂಗೀತಾ ಮರುಪ್ರಶ್ನೆ ಹಾಕಿದರು. ಆಗ ಮೈಕಲ್ "ನಮ್ ಟೀಮ್ ಸದಸ್ಯನ ಬೋನ್ ಡಿಸ್ಲೊಕೇಟ್ ಮಾಡಿ, ಆ ಟೈಮ್‌ನಲ್ಲಿ ಅವರು ತಗೊಂಡು ಹೋಗಿದ್ದಾರೆ. ಅವರ ಸ್ಪೋರ್ಟ್ಸ್‌ಮ್ಯಾನ್‌ಶಿಪ್ ಇದರಲ್ಲಿ ತೋರಿಸುತ್ತೆ" ಎಂದು ಗುಡುಗಿ, ಅದೇ ವೇಳೆ ನಡೆದ ಮಾತಿನ ಚಕಮಕಿ ಮಧ್ಯೆ "ಈ ತರಹ ಆಟ ಆಡುವವರನ್ನ ನಾನು ನನ್ನ ಜೀವನದಲ್ಲಿಯೇ ಕಂಡಿಲ್ಲ. ತುಕಾಲಿ ಸಂತು ಅವರ ಕೈ ಸರಿ ಮಾಡುವಾಗ ಸಂಗೀತಾ ಹೂಗಳನ್ನ ತಗೊಂಡರು. ಇದಕ್ಕೆ ಅವಕಾಶವಾದಿ ಅನ್ನೋದು. ಡಿಸ್ಲೊಕೇಟ್ ಮಾಡಿದ್ದು ಸ್ನೇಹಿತ್. ಅದು ಸುಳ್ಳಲ್ಲ." ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ