BBK10: "ಇದ್ದಷ್ಟು ದಿನ ನೋಡಪ್ಪಾ ಬಿಗ್ ಬಾಸ್. ನಿಮ್ಮ ಗಂಟೇನು ಹೋಗತ್ತೆ": ಇದೇನಪ್ಪಾ ಬ್ರಹ್ಮಾಂಡ ಗುರೂಜಿ ಹೀಗಂದ್ರು!

Bramhanda Guruji in BBK10: ಬಿಗ್‌ಬಾಸ್‌ ಮನೆಗೆ ಬಂದ ಬ್ರಹ್ಮಾಂಡ ಗುರೂಜಿ ನರೇಂದ್ರ  ಶರ್ಮ ಬಹುತೇಕ ಎಲ್ಲರಿಗೂ ಏನಾದರೊಂದು ಮಾತಾಡುತ್ತಾರೆ, ಅದು ಅವರ ಗುಣ. ಈಗ ಬಿಗ್ ಬಾಸ್ ಬಗ್ಗೆಯೂ ಅವರು ಮಾತನಾಡಿದ್ದಾರೆ. ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.

Written by - Zee Kannada News Desk | Last Updated : Nov 21, 2023, 11:00 AM IST
  • ಬಿಗ್‌ಬಾಸ್ ಮನೆಗೆ ಬಂದ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಗೆ ಬಿಗ್ ಬಾಸ್ ಟಾಸ್ಕ್ ಕೊಡೋದನ್ನು ಮಾತ್ರ ಮರೆಯಲಿಲ್ಲ.
  • ಗುರೂಜಿ ನರೇಂದ್ರ ಶರ್ಮ "ಇದ್ದಷ್ಟು ದಿನ ನೋಡಪ್ಪಾ ಬಿಗ್ ಬಾಸ್. ನಿಮ್ಮ ಗಂಟೇನು ಹೋಗತ್ತೆ" ಅಂತೆಲ್ಲ ಮಾತಾಡಿದ್ದಾರೆ.
  • ಗುರೂಜಿ ನನಗೆ ಕಾಲು ನೋವು ಬಂತು ಅಂತ ಹೇಳಿದಾಗ ಬಿಗ್‌ಬಾಸ್‌ ಮನಸ್ಸು ಸ್ವಲ್ಪ ಕರಗಿ, ಸಹಾಯಕ್ಕೆ ಇಬ್ಬರು ಸಹಾಯಕರನ್ನು ನೀಡಿದರು.
BBK10: "ಇದ್ದಷ್ಟು ದಿನ ನೋಡಪ್ಪಾ ಬಿಗ್ ಬಾಸ್. ನಿಮ್ಮ ಗಂಟೇನು ಹೋಗತ್ತೆ": ಇದೇನಪ್ಪಾ ಬ್ರಹ್ಮಾಂಡ ಗುರೂಜಿ ಹೀಗಂದ್ರು! title=

Bigg Boss Task BY Narendra Sharma Guruji: ಬಿಗ್‌ಬಾಸ್ ಮನೆಗೆ ಬಂದ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಗೆ ಬಿಗ್ ಬಾಸ್ ಟಾಸ್ಕ್ ಕೊಡೋದನ್ನು ಮಾತ್ರ ಮರೆಯದೆ, ಟಾಸ್ಕ್, ಭವಿಷ್ಯದ ಮಧ್ಯೆ ಬಿಗ್ ಬಾಸ್ ಬಗ್ಗೆ ಗುರೂಜಿ ಏನೇನೆಲ್ಲ ಮಾತನಾಡಿದ್ರು ಅನ್ನೋದು ವಿಶೇಷ. ಬಿಗ್‌ಬಾಸ್‌ ಸೀಸನ್‌ 1 ನಲ್ಲಿ ಸ್ಪರ್ಧಿಯಾಗಿ ಬಂದ ಗುರೂಜಿ, ಮುಂಡಾ ಮುಚ್ತು, ನಿನ್ ತಲೆ ಎಂದೆಲ್ಲ ಬಯ್ಯುವರು ಈ ಬಾರಿ ದೊಡ್ಮನೆಯಲ್ಲಿ "ಇದ್ದಷ್ಟು ದಿನ ನೋಡಪ್ಪಾ ಬಿಗ್ ಬಾಸ್. ನಿಮ್ಮ ಗಂಟೇನು ಹೋಗತ್ತೆ" ಅಂತೆಲ್ಲ ಮಾತಾಡಿದ್ದಾರೆ. "ನಾನು ಚೆನ್ನಾಗಿ ಆಡಿದ್ರೆ ಇಲ್ಲೇ ಇರಿ ಅಂತಾರೆ, ಬೋರ್ ಬಂದ್ರೆ ಹೋಗಿ ಅಂತಾರೆ" ಅಂತ ಗುರೂಜಿ ಹೇಳೋದನ್ನು ಮರೆತಿಲ್ಲ. "ಬಿಗ್ ಬಾಸ್, ಇವರಿಗೆ ಕಾಫಿ ಪುಡಿ ಕೊಡಲ್ವೇನಪ್ಪಾ! ಕೊಟ್ರೆ ನಿಮ್ಮ ಗಂಟು ಏನು ಹೋಗತ್ತೆ" ಅಂತಲೂ ಗುರೂಜಿ ಹೇಳಿದ್ರು.

ಗುರೂಜಿ ಮಾತ್ರ ಸ್ಪರ್ಧಿಗಳು ರಿಯಾಕ್ಟ್ ಮಾಡುವ ತರ ಮಾಡಬೇಕು, ಗುರೂಜಿ ಏನೇ ಮಾಡಿದ್ರೂ ಸ್ಪರ್ಧಿಗಳು ಮಾತ್ರ ಏನೂ ಆಗಿಲ್ಲ ಅನ್ನೋ ತರ ಇದ್ದು ರಿಯಾಕ್ಟ್ ಮಾಡಬಾರದು ಅಂತ ಬಿಗ್ ಬಾಸ್ ಟಾಸ್ಕ್ ನೀಡಿದ್ದು, ಸದಸ್ಯರು ನೀಡುವ ಪ್ರತಿ ಮೂರು ಪ್ರತಿಕ್ರಿಯೆಗೆ ದಿನಸಿಗಳನ್ನು ಕಳೆಯಲಾಗುತ್ತದೆ. ಟಾಸ್ಕ್ ಮುಗಿಯುವ ಹೊತ್ತಿಗೆ ಮನೆ ದಿನಸಿಗಳನ್ನು ಪುನಃ ಪಡೆಯುತ್ತಿದ್ದು, ಈ ಆಟ ಸ್ವಲ್ಪ ಮಜವಾಗಿತ್ತು ಎನ್ನಬಹುದು.ಆರಂಭದಲ್ಲಿ ಗುರೂಜಿ ಕಂಡು ಸ್ಪರ್ಧಿಗಳು ಓಡಿ ಓಡಿ ಹೋಗಿ ತಪ್ಪಿಸಿಕೊಳ್ತಿದ್ರು, ಗುರೂಜಿ ಕೂಡ ಸ್ಪರ್ಧಿಗಳು ರಿಯಾಕ್ಟ್ ಮಾಡಲಿ ಅಂತ ತಮ್ಮ ಕೈಯಲ್ಲಿ ಆದಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ ಸ್ಪರ್ಧಿಗಳ ಹಿಂದೆ ಓಡಾಡಿ ಗುರೂಜಿಗೆ ಸಾಕಾಗಿ ಹೋಗಿತ್ತು. 

ಇದನ್ನು ಓದಿ: BBK10: ಬಿಗ್‌ಬಾಸ್‌ ಮನೆಯಲ್ಲಿ ಬ್ರಹ್ಮಾಂಡ ಗುರೂಜಿ ಕಾರ್ತಿಕ್ ಹಾಗೂ ತುಕಾಲಿ ಬಗ್ಗೆ ಭವಿಷ್ಯ ನುಡಿದಿದ್ದಾರೆ ; ದೊಡ್ಮನೆ ಮಂದಿ ಶಾಕ್!

ಗುರೂಜಿ ನನಗೆ ಕಾಲು ನೋವು ಬಂತು ಅಂತ ಹೇಳಿದಾಗ ಬಿಗ್‌ಬಾಸ್‌ ಮನಸ್ಸು ಸ್ವಲ್ಪ ಕರಗಿ, ಸಹಾಯಕ್ಕೆ ಇಬ್ಬರು ಸಹಾಯಕರನ್ನು ನೀಡಿದಕ್ಕೆ, ಗುರೂಜಿ ಹೇಳಿದಂತೆ ಆ ಸಹಾಯಕರು ಸಹಾಯ ಮಾಡಿದ್ದರು. ತನಿಷಾ ಮೇಕಪ್ ಕಿಟ್‌ನ್ನು ಬಾಕ್ಸ್‌ವೊಳಗೆ ಹಾಕಿಸಿದ್ದರು, ಬಟ್ಟೆ, ಶೂಗಳನ್ನು ನೀರಿನ ಒಳಗಡೆ ಎಸೆದಿದ್ದರು. ಇದನ್ನೆಲ್ಲ ನೋಡಿಕೊಂಡು ಸ್ಪರ್ಧಿಗಳಿಗೆ ಬೇಸರ ಆಗಿದ್ರೂ ಏನೂ ಮಾಡುವ ತರ ಇರಲಿಲ್ಲ. ಕ್ಯಾಪ್ಟನ್ ಕಾರ್ತಿಕ್ ಓರೆಗಣ್ಣಿನಲ್ಲಿ ನೋಡಿದ್ದು, ಮೈಕ್‌ಗಳನ್ನು ಸ್ಪರ್ಧಿಗಳೇ ತೆಗೆದುಕೊಟ್ಟರು. ಸಂಗೀತಾ ಅವರು ನೋಡಿದ್ದು, ಉಳಿದ ಸ್ಪರ್ಧಿಗಳು ಕದ್ದುಮುಚ್ಚಿ ಮಾತಾಡಿದ್ದು, ಪ್ರತಾಪ್ ಅವರು ಮೂರು ಸಲ ಮಾತಾಡಿದ್ದು ಗುರೂಜಿ ಕಣ್ಣಿಗೆ ಬಿದ್ದಿದೆ. ಅದನ್ನು ಅವರು ಬಿಗ್ ಬಾಸ್‌ಗೆ ವರದಿ ಒಪ್ಪಿಸಿದ್ದಾರೆ.

ಆಟ ಮುಗಿದ ನಂತರದಲ್ಲಿ ಕೊನೆಯದಾಗಿ ಹಣ್ಣುಗಳನ್ನು ಸ್ಪರ್ಧಿಗಳು ತಿಂದುಕೊಳ್ಳಲಿ ಅಂತ ಹೇಳಿ ಮೊಟ್ಟೆಗಳನ್ನು ನರೇಂದ್ರ ಅವರು ಮರಳಿ ಬಿಗ್ ಬಾಸ್‌ಗೆ ಒಪ್ಪಿಸಿದ್ದಾರೆ.'ಬಿಗ್ ಬಾಸ್ ಕನ್ನಡ ಸೀಸನ್ 1' ಶೋ ಸ್ಪರ್ಧಿಯಾಗಿದ್ದ ನರೇಂದ್ರ ಅವರು ನಾನು ಹೇಗೆ ಆಟ ಆಡ್ತಿದ್ದೆ ಅಂತ ಹೇಳಿ, ಈಗ ಹೇಗೆ ಆಟ ಆಡುತ್ತಿದ್ದೀರಿ ಅಂತ ಸ್ಪರ್ಧಿಗಳಿಗೆ ಪ್ರಶ್ನೆ ಮಾಡಿದ್ದರು. ಇನ್ನು ಸ್ಪರ್ಧಿಗಳು ತನಗೆ ಗೌರವ ಕೊಡಬೇಕು, ನನಗೆ ಆತಿಥ್ಯ ಕೊಡಬೇಕು ಅಂತ ಗುರೂಜಿ ಬಯಸಿದ್ದರು. ಒಟ್ಟಿನಲ್ಲಿ ಬ್ರಹ್ಮಾಂಡ ಗುರೂಜಿ ಬಿಗ್ ಬಾಸ್ ಮನೆಗೆ ಬಂದಿದ್ದು, ಬೇರೆಯದ್ದೇ ವಾತಾವರಣ ಸೃಷ್ಟಿ ಮಾಡಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News