ದೊಡ್ಮನೆ ಮಂದಿ ಮೇಲೆ ʼನಾಮಿನೇಷನ್‌ʼ ತೂಗುಗತ್ತಿ : ಈ ಬಾರಿ ಲಿಸ್ಟ್‌ನಲ್ಲಿ ಯಾರ್‌ ಯಾರಿದ್ದಾರೆ ಗೊತ್ತೆ..?

Bigg Boss Kannada elimination list : ಗೆಳೆತನ, ಪ್ರೀತಿ, ಬಿಗ್‌ ಬಾಸ್‌ ಮನೆಯಲ್ಲಿ ಮಾಯವಾಗಿದೆ. ಒಬ್ಬರ ಮೇಲೊಬ್ಬರು ದೂರುಗಳ ಮಳೆ ಸುರಿಸುತ್ತಿದ್ದಾರೆ. ಇನ್ನು ಈ ಬಾರಿಯ ಎಲಿಮಿನೇಷನ್‌ ಪ್ರಕ್ರಿಯೆ ಪ್ರಾರಂಭವಾಗಿದ್ದು, ವಾರದ ಮೊದಲ ದಿನವೇ 7 ಸ್ಪರ್ಧಿಗಳು ಲಿಸ್ಟ್‌ನಲ್ಲಿದ್ದಾರೆ. 

Written by - Krishna N K | Last Updated : Dec 11, 2023, 07:32 PM IST
  • ಬಿಗ್‌ ಬಾಸ್‌ ಮನೆಯಲ್ಲಿ ಗೆಳೆತನ, ಪ್ರೀತಿ, ಮಾಯವಾಗಿದೆ.
  • ಸ್ಪರ್ಧಿಗಳ ಮೇಲೆ ಎಲಿಮಿನೇಷನ್‌ನ ತೂಗುಗತ್ತಿ ತೂಗಲಾರಂಭಿಸಿದೆ.
  • ಬಾರಿ ಹೆಚ್ಚು ನಾಮಿನೇಟ್‌ ಆದ ಸ್ಪರ್ಧಿ ಯಾರು, ಸೇಫ್‌ ಯಾರು..?.
ದೊಡ್ಮನೆ ಮಂದಿ ಮೇಲೆ ʼನಾಮಿನೇಷನ್‌ʼ ತೂಗುಗತ್ತಿ : ಈ ಬಾರಿ ಲಿಸ್ಟ್‌ನಲ್ಲಿ ಯಾರ್‌ ಯಾರಿದ್ದಾರೆ ಗೊತ್ತೆ..? title=

BBK 10 : ಭಾವುಕವಾಗಿ ಎಲ್ಲವನ್ನೂ ಬಿಗ್‌ಬಾಸ್‌ ಜೊತೆಗೆ ಹಂಚಿಕೊಂಡು ಹಗುರಾಗಿದ್ದ ಸ್ಪರ್ಧಿಗಳ ತಲೆಯ ಮೇಲೆ ಮರುಕ್ಷಣವೇ ಎಲಿಮಿನೇಷನ್‌ನ ತೂಗುಗತ್ತಿ ತೂಗಲಾರಂಭಿಸಿದೆ. ಅದರ ಸೂಚನೆ ಕಂಡಿದ್ದು ಇಂದು ಬಿಡುಗಡೆ ಮಾಡಿದ ಪ್ರೋಮೊದಲ್ಲಿ. ಹಾಗಿದ್ರೆ ಈ ಬಾರಿ ಹೆಚ್ಚು ನಾಮಿನೇಟ್‌ ಆದ ಸ್ಪರ್ಧಿ ಯಾರು, ಸೇಫ್‌ ಯಾರು..? ಬನ್ನಿ ನೋಡೋಣ.

ಪ್ರೋಮೊದಲ್ಲಿ ಒಂದು ಕೋಣೆಯಲ್ಲಿ ಎಲ್ಲ ಸದಸ್ಯರ ಫೋಟೊಗಳಿವೆ. ಒಬ್ಬೊಬ್ಬ ಸದಸ್ಯನೂ ಒಂಟಿಯಾಗಿ ಕೋಣೆಯೊಳಗೆ ಹೋಗಿ ನಾಮಿನೇಟ್ ಮಾಡಲು ಇಚ್ಛಿಸುವ ಸದಸ್ಯರ ಫೋಟೊವನ್ನು ಗೋಡೆಗೆ ಸಿಕ್ಕಿಸಬೇಕು. ತುಕಾಲಿ ಸಂತೋಷ್‌ ಅವರು, ಸಂಗೀತಾ ಅವರನ್ನು ನಾಮಿನೇಟ್‌ ಮಾಡಿದ್ದಾರೆ. ‘ಜಗಳವಾಡಲಿಕ್ಕೆ, ಇಷ್ಟೆಲ್ಲ ಅವಾಂತರವಾಗಲಿಕ್ಕೆ ಸಂಗೀತಾನೇ ಕಾರಣ. ಹಾಗಾಗಿ ಅವರನ್ನು ನಾಮಿನೇಟ್ ಮಾಡ್ತೀನಿ’ ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ. ಹಾಗೆಯೇ ಪ್ರತಾಪ್‌ ಅವರು ಮೇಲ್ನೋಟಕ್ಕೆ ಚೆನ್ನಾಗಿ ನೋಡಿದರೂ ಒಳಗೊಳಗೇ ತಮ್ಮ ಬಗ್ಗೆ ಅನುಮಾನವಿದೆ. ನನ್ನ ಮೇಲೆ ಅವರಿಗೆ ತುಂಬ ಕೋಪವಿದೆ ಎಂದೂ ಹೇಳಿದ್ದಾರೆ. 

ಇದನ್ನೂ ಓದಿ: ಅಮೃತಧಾರೆ ಧಾರಾವಾಹಿಯ ‘ಜೀವಾ’ನ ರಿಯಲ್ ಲೈಫ್ ಪತ್ನಿ ಇವರೇ! ಈಕೆಯೂ ಕನ್ನಡದ ಪ್ರಖ್ಯಾತ ಸೀರಿಯಲ್ ನಟಿ

ಮೈಕಲ್ ಅವರನ್ನು ನಾಮಿನೇಟ್ ಮಾಡಿರುವ ಡ್ರೋನ್‌, ‘ಮೈಕಲ್ ಅವರು ಆಟ ಎಂದು ಬಂದಾಗ ಹದ್ದುಮೀರುತ್ತಾರೆ’ ಎಂದು ಕಾರಣ ಕೊಟ್ಟಿದ್ದಾರೆ. ತನಿಷಾ ಅವರನ್ನು ನಾಮಿನೇಟ್ ಮಾಡಿರುವ ವರ್ತೂರ್‍, ‘ಎದುರಾಳಿ ತಂಡದ ಸದಸ್ಯರಿಗೆ ರೆಸ್ಪೆಕ್ಟ್ ಕೊಡದೇ ಮಾತಾಡುತ್ತಾರೆ’ ಎಂದು ಹೇಳಿದ್ದಾರೆ. 

ವಿನಯ್ ಅವರನ್ನು ನಾಮಿನೇಟ್ ಮಾಡಿರುವ ಸಂಗೀತಾ, ‘ಪ್ರತಿಸಲ ನನ್ನನ್ನೇ ಟಾರ್ಗೇಟ್ ಮಾಡುತ್ತಾರೆ. ರೇಗಿಕೊಂಡು, ಟಾಂಟ್ ಕೊಟ್ಟುಕೊಂಡೇ ಮಾತಾಡುತ್ತಾರೆ’ ಎಂಬ ಕಾರಣ ನೀಡಿದ್ದಾರೆ. ಕಾರ್ತಿಕ್, ಸಿರಿ ಅವರನ್ನು ನಾಮಿನೇಟ್ ಮಾಡಿದ್ದರೆ, ಸಿರಿ, ಪವಿ ಅವರನ್ನು ನಾಮಿನೇಟ್ ಮಾಡಿದ್ದಾರೆ. ಒಟ್ಟಾರೆ, ಸಂಗೀತಾ, ಪ್ರತಾಪ್‌, ಸಿರಿ, ಪವಿ, ಮೈಕಲ್, ವಿನಯ್, ತನಿಷಾ ಈ ವಾರ ನಾಮಿನೇಷನ್ ಪಟ್ಟಿಯಲ್ಲಿದ್ದು, ಕಾರ್ತಿಕ್‌ ಸೇಫ್‌ ಆಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News