BK 10 : ‘ಕೃಷ್ಣ ಜನ್ಮಸ್ಥಾನಕ್ಕೆ ಹೋಗ್ತಿದೀನಪ್ಪಾ’..! ಖೈದಿಗಳ ಬಟ್ಟೆ ಧರಿಸಿ ಜೈಲು ಸೇರಿದ ಕಾರ್ತಿಕ್‌

Karthik Mahesh : ಈ ವಾರದ ಕಳಪೆ ಪಟ್ಟ ಸಿಕ್ಕಿದ್ದು ಯಾರಿಗೆ ಎಂಬುದಕ್ಕೆ ಇಂದು ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಉತ್ತರ ಸಿಕ್ಕಿದೆ. ಕಳಪೆ ಪಟ್ಟ ಪಡೆದು ಕಾರ್ತಿಕ್‌ ಜೈಲು ಸೇರಿದ್ದಾನೆ. ಹಾಗಿದ್ರೆ ಕಾರ್ತಿಕ್‌ ಜೈಲು ಸೇರಲು ಮೂಲ ಕಾರಣ ಯಾರು.. ಕಳಪೆ ಪಟ್ಟ ನೀಡಿದ್ದು ಯಾರು..? ವಿವರ ಇಲ್ಲಿದೆ ನೋಡಿ..

Written by - Krishna N K | Last Updated : Dec 8, 2023, 04:39 PM IST
  • ಕಾರ್ತಿಕ್‌ಗೆ ಈ ವಾರದ ಕಳಪೆ ಪಟ್ಟ ಸಿಕ್ಕಿದೆ
  • ಸ್ನೇಹಿತ್‌, ವಿನಯ್, ನಮ್ರತಾ ಕಳಪೆ ಪಟ್ಟ ನೀಡಿದ್ದಾರೆ
  • ಖೈದಿಗಳ ಬಟ್ಟೆ ಧರಿಸಿ ಜೈಲು ಸೇರಿದ ಕಾರ್ತಿಕ್‌
BK 10 : ‘ಕೃಷ್ಣ ಜನ್ಮಸ್ಥಾನಕ್ಕೆ ಹೋಗ್ತಿದೀನಪ್ಪಾ’..! ಖೈದಿಗಳ ಬಟ್ಟೆ ಧರಿಸಿ ಜೈಲು ಸೇರಿದ ಕಾರ್ತಿಕ್‌ title=

Bigg Boss Kannada : ವಾರವಿಡಿ ನಡೆದ ರಕ್ಕಸ-ಗಂಧರ್ವರ ಕಾಳಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ವಾರಾಂತ್ಯದ ಎಪಿಸೋಡಿನ ಹೊಸ್ತಿಲಲ್ಲಿ ಎಲ್ಲ ಸ್ಪರ್ಧಿಗಳೂ ನಿಂತಿದ್ದಾರೆ. ಈ ನಡುವೆ ಪ್ರತಿ ವಾರದ ವಾಡಿಕೆಯಂತೆ ‘ಕಳಪೆ’ ಮತ್ತು ‘ಉತ್ತಮ’ ಪಟ್ಟಗಳನ್ನೂ ಮನೆಯ ಸದಸ್ಯರು ನಿರ್ಧರಿಸಿದ್ದಾರೆ.

ಈ ವಾರದ ಕಳಪೆ ಪಟ್ಟ ಸಿಕ್ಕಿದ್ದು ಯಾರಿಗೆ ಎಂಬುದಕ್ಕೆ ಇಂದು ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಉತ್ತರ ಸಿಕ್ಕಿದೆ. ಸ್ನೇಹಿತ್‌, ನಮ್ರತಾ, ವಿನಯ್ ಸೇರಿದಂತೆ ಬಹುತೇಕ ಸದಸ್ಯರು ಕಳಪೆ ಪಟ್ಟವನ್ನು ಕಾರ್ತಿಕ್‌ಗೆ ನೀಡಿದ್ದಾರೆ. ಅವರು ನೀಡಿದ ಕಾರಣ, ‘ಕಾರ್ತಿಕ್‌ ಚಪ್ಪಲಿಯಲ್ಲಿ ಹೊಡೆಯಲು ಮುಂದಾಗಿದ್ದು’. ವಿನಯ್ ಅವರಂತೂ, ‘ಈ ವಾರ ಖಂಡಿತವಾಗಿಯೂ ನೀನು ಕಳಪೆ ಪಟ್ಟಕ್ಕೆ ಅರ್ಹ’ ಎಂದು ನೇರವಾಗಿ ಹೇಳಿಯೇ ಕಳಪೆ ಪಟ್ಟ ನೀಡಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Colors Kannada Official (@colorskannadaofficial)

ಇದನ್ನೂ ಓದಿ: ಟೈಟಲ್‌ ರಿವೀಲ್‌ ಬೆನ್ನಲ್ಲೇ ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಸ್ಟೋರಿ ಲೀಕ್‌..!

ಅದನ್ನು ಕಾರ್ತಿಕ್‌ ಕೈಮುಗಿದು ನಗುನಗುತ್ತಲೇ ಸ್ವೀಕರಿಸಿದ್ದಾರೆ ಸಹ. ಜೈಲು ಉಡುಗೆ ತೊಟ್ಟ ಕಾರ್ತಿಕ್‌, ‘ಕೃಷ್ಣ ಜನ್ಮಸ್ಥಾನಕ್ಕೆ ಹೋಗ್ತಿದೀನಪ್ಪಾ’ ಎಂದುಹೇಳಿ ಜೈಲು ಕೊಠಡಿಯೊಳಗೆ ಇಳಿದಿದ್ದಾರೆ. ವರ್ತೂರು ಮತ್ತು ತನಿಷಾ ಇಬ್ಬರೂ ಸೇರಿ ಕಾರ್ತಿಕ್ ಅವರನ್ನು ಜೈಲಿನ ಬಾಗಿಲಿಗೆ ಬಂದು ಬೀಳ್ಕೊಟ್ಟಿದ್ದಾರೆ.

ಹಾಗಾದರೆ ಈ ವಾರ ‘ಉತ್ತಮ’ ಪಟ್ಟ ಗಿಟ್ಟಿಸಿಕೊಳ್ಳುವ ಸದಸ್ಯ ಯಾರು? ವಾರವಿಡೀ ನಡೆದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಯಾವ ತಂಡ ಗೆದ್ದಿದೆ? ಯಾರು ಕ್ಯಾಪ್ಟನ್ ಆಗಿ ಆಯ್ಕೆಯಾಗುತ್ತಾರೆ? ಎಂದು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿ ಇದ್ದರೆ ಇಂದಿನ ಎಪಿಸೋಡ್‌ ಅನ್ನು ನೋಡಲೇಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News