BBK10 : ದೊಡ್ಮನೆ ಮಂದಿಗೆ ರಿಸ್ಕ್‌ ಟಾಸ್ಕ್‌ ಕೊಟ್ಟ ಬಿಗ್‌ಬಾಸ್‌..! ಗೆದ್ರೆ 1 ಲಕ್ಷ ರೂ.

Sangeetha sringeri - Varthur santhosh : ಬಿಗ್‌ಬಾಸ್ ದೊಡ್ಮನೆ ಮಂದಿಗೆ ಒಂದು ಲಕ್ಷದ ಟಾಸ್ಕ್‌ ನೀಡಿದೆ. ಬಿಗ್‌ಬಾಸ್‌ ಮನೆಯಿಂದ ಹೊರಹೋದ ಸ್ಪರ್ಧಿಗಳೆಲ್ಲ ಮತ್ತೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ತಮ್ಮ ಗೆಳೆಯರಿಗೆ ಬೆಂಬಲ ನೀಡುತ್ತಿದ್ದಾರೆ.. ಟಾಸ್ಕ್‌ ಏನು..? ಎನ್ಮಾಡ್ಬೇಕು ಅಂತ ತಿಳಿಯೋಕೆ.. ಮುಂದೆ ಓದಿ..

Written by - Krishna N K | Last Updated : Jan 17, 2024, 04:11 PM IST
  • ಬಿಗ್‌ಬಾಸ್ ದೊಡ್ಮನೆ ಮಂದಿಗೆ ಒಂದು ಲಕ್ಷದ ಟಾಸ್ಕ್‌ ನೀಡಿದೆ.
  • ಕೊನೆಗೆ ವರ್ತೂರ್ ಅವರೇ ಟಾಸ್ಕ್‌ ಆಡಲು ಆಯ್ಕೆಯಾಗಿದ್ದಾರೆ.
  • ಇದನ್ನು ಕಂಡು ಸಂಗೀತಾ ಅಸಹನೆ ವ್ಯಕ್ತಪಡಿಸಿದ್ದಾರೆ.
BBK10 : ದೊಡ್ಮನೆ ಮಂದಿಗೆ ರಿಸ್ಕ್‌ ಟಾಸ್ಕ್‌ ಕೊಟ್ಟ ಬಿಗ್‌ಬಾಸ್‌..! ಗೆದ್ರೆ 1 ಲಕ್ಷ ರೂ. title=

Bigg boss kannada 10 : ಬಿಗ್‌ಬಾಸ್‌ ಮನೆಯಿಂದ ಹೊರಹೋದ ಸ್ಪರ್ಧಿಗಳೆಲ್ಲ ಮತ್ತೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಇಡೀ ಮನೆ ತುಂಬಿ ನಳನಳಿಸುತ್ತಿದೆ. ಎಲ್ಲರೂ ತಮ್ಮ ಸ್ನೇಹಿತರ ಮಾತುಗಳನ್ನು, ಅವರ ಟಿಪ್ಸ್‌ಗಳನ್ನು ಕೊಡುವುದರಲ್ಲಿ ಮಗ್ನರಾಗಿರುವಾಗ ಬಿಗ್‌ಬಾಸ್ ಮನೆಗೆ ಒಂದು ಲಕ್ಷದ ಟಾಸ್ಕ್‌ ನೀಡಿದೆ. ಏನದು ಟಾಸ್ಕ್? ಬನ್ನಿ ನೋಡೋಣ..

ಟಾಸ್ಕ್‌ ಆಡಲು ಕೆಲವು ವಿನಯ್ ಹೆಸರನ್ನೂ, ಕೆಲವರು ವರ್ತೂರು ಸಂತೋಷ್ ಅವರ ಹೆಸರನ್ನೂ ಸೂಚಿಸಿದ್ದಾರೆ. ಕೊನೆಗೆ ವರ್ತೂರ್ ಅವರೇ ಟಾಸ್ಕ್‌ ಆಡಲು ಆಯ್ಕೆಯಾಗಿದ್ದಾರೆ. ಚೆಂಡನ್ನು ಒಂದು ದೊಡ್ಡ ತಿರುಗುಣಿಯ ಮೇಲೆ ಜೋಡಿಸಿಡಲಾಗಿದೆ. ಚೆಂಡು ಬೀಳಿಸದರೆ ತಿರುಗುಣಿ ತಿರುಗಿಸುವ ಟಾಸ್ಕ್‌ನಲ್ಲಿ ವರ್ತೂರು ಸಂತೋಷ್ ವಿಫಲರಾಗಿದ್ದಾರೆ. ಇದನ್ನು ಕಂಡು ಸಂಗೀತಾ ಅಸಹನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: "ಮತ್ತೆ ಮತ್ತೆ" ಸಿನಿಮಾ ಮಾಡಹೊರಟವರ ಕಥೆ..!

‘ಯಾರಿಗೆ ಆಟ ಆಡಲು ಬರುತ್ತದೆಯೋ ಅವರೇ ಹೋಗಿ ಎಂದು ಇದಕ್ಕೇ ನಾನು ಹೇಳಿದ್ದು’ ಎಂದು ಹೇಳಿದ್ದಾರೆ. ಇದನ್ನು ಕೇಳಿ ಸಿಟ್ಟಿಗೆದ್ದ ವರ್ತೂರು, ‘ಇರೆಸ್ಪೆಕ್ಟೀವ್ ಆಗಿ ಮಾತಾಡಬೇಡಿ. ನೀವು ಒಬ್ಬರ ಮೇಲೆ ಬ್ಲೇಮ್ ಮಾಡುವುದಕ್ಕಿಂತ ಮೊದಲು ನೀವೇನು ಎನ್ನುವುದನ್ನು ನೋಡಿಕೊಂಡರೆ ತುಂಬ ಉತ್ತಮವಾಗಿರುತ್ತದೆ’ ಎಂದು ವರ್ತೂರು ಕಿಡಿ ಕಾರಿದ್ದಾರೆ. 

ಹಾಗಾದರೆ ಮನೆಯ ಸದಸ್ಯರು ಗೇಮ್‌ನಲ್ಲಿ ಗೆದ್ದರಾ ಸೋತರಾ? ಅವರ ಪರಿಣಾಮ ಏನಾಗಲಿದೆ? ಕಳೆದ ವಾರ ಸುದೀಪ್‌, ಎಲಿಮಿನೇಷನ್‌ ಕ್ಯಾನ್ಸಲ್ ಆಗಿಲ್ಲ; ಹೋಲ್ಡ್‌ನಲ್ಲಿ ಇರಿಸಲಾಗಿದೆ ಎಂದು ಹೇಳಿದ್ದರು. ಹಾಗಾದರೆ ಹೋಲ್ಡ್‌ನಲ್ಲಿರುವ ಎಲಿಮಿನೇಷನ್‌ ಯಾವತ್ತು ಚಾಲ್ತಿಗೆ ಬರಲಿದೆ? ಅದಕ್ಕೆ ಯಾರು ಬಲಿಯಾಗಲಿದ್ದಾರೆ? ಫಿನಾಲೆಗೆ ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿರುವಾಗ ಹಲವು ಸರ್ಪೈಸ್‌ಗಳನ್ನು ಬಿಗ್‌ಬಾಸ್‌ ನೀಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News