BBK 10: ಬಿಗ್‌ಬಾಸ್‌ನಲ್ಲಿ ಈ ವಾರ ಯಾರೆಲ್ಲಾ ನಾಮಿನೇಟ್‌ ಆಗಿದ್ದಾರೆ? ಸ್ಪೆಷಲ್‌ ಅಧಿಕಾರ ಪಡೆದ ಸ್ನೇಹಿತ್!

Bigg Boss Kannada Season 10: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಕಾರ್ಯಕ್ರಮ ಆರಂಭವಾಗಿ 8 ವಾರಗಳು ಉರುಳಿದ್ದು,  9ನೇ ವಾರದ ಆರಂಭದಲ್ಲೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಆದರೆ, ಈ ವಾರ ನಾಮಿನೇಷನ್ ಮಾಡುವ ಅಧಿಕಾರ ಎಲ್ಲರಿಗೂ ಇರಲಿಲ್ಲ. ಹಾಗಾದ್ರೆ ಬಿಗ್‌ಬಾಸ್‌ ಮನೆಯಲ್ಲಿ ನಾಮಿವೇಷನ್‌ ಯಾವ ರೀತಿ ನಡೆದಿದೆ. ಯಾರೆಲ್ಲಾ ನಾಮಿನೇಟ್‌ ಆಗಿದ್ದಾರೆ? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.

Written by - Zee Kannada News Desk | Last Updated : Dec 5, 2023, 10:47 AM IST
  • ಕಳೆದ ವಾರ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಅವಿನಾಶ್ ಶೆಟ್ಟಿ, ಪವಿ ಪೂವಪ್ಪ ಬಂದಿದ್ದರಿಂದ, ಇಬ್ಬರನ್ನೂ ನಾಮಿನೇಷನ್‌ಗೆ ಒಳಪಡಿಸಲಾಗಿರಲಿಲ್ಲ.
  • ಸಿರಿ ಒಬ್ಬರನ್ನ ಬಿಟ್ಟು ಬಾಕಿಯವರೆಲ್ಲಾ ‘ನಾಮಿನೇಟ್‌ ಆಗಬೇಕು’ ಅಂತಲೇ ಹೇಳಿದ್ದರಿಂದ, ಅವಿನಾಶ್‌ ಶೆಟ್ಟಿ ಹಾಗೂ ಪವಿ ಪೂವಪ್ಪರನ್ನ ಬಿಗ್‌ಬಾಸ್‌ ನಾಮಿನೇಟ್ ಮಾಡಿದರು.
  • ಒಟ್ಟಾರೆಯಾಗಿ ಬಿಗ್‌ಬಾಸ್‌ ಮನೆಯಲ್ಲಿ 9 ಮಂದಿ ನಾಮಿನೇಟ್‌ ಆಗಿದ್ದಾರೆ.
BBK 10: ಬಿಗ್‌ಬಾಸ್‌ನಲ್ಲಿ ಈ ವಾರ ಯಾರೆಲ್ಲಾ ನಾಮಿನೇಟ್‌ ಆಗಿದ್ದಾರೆ? ಸ್ಪೆಷಲ್‌ ಅಧಿಕಾರ ಪಡೆದ ಸ್ನೇಹಿತ್! title=

Bigg Boss Nomination: ಬಿಗ್‌ಬಾಸ್‌ ಮನೆಯಲ್ಲಿ ಕಳೆದ ವಾರ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಅವಿನಾಶ್ ಶೆಟ್ಟಿ, ಪವಿ ಪೂವಪ್ಪ ಬಂದಿದ್ದರಿಂದ, ಇಬ್ಬರನ್ನೂ ನಾಮಿನೇಷನ್‌ಗೆ ಒಳಪಡಿಸಲಾಗಿರಲಿಲ್ಲ. ತಮ್ಮನ್ನ ತಾವು ಸಾಬೀತು ಪಡಿಸಿಕೊಳ್ಳಲು ಇಬ್ಬರಿಗೂ ಬಿಗ್‌ಬಾಸ್‌ ಅವಕಾಶ ನೀಡಿದ್ದು, ಆದರೆ ನಿನ್ನೆ ಬಿಗ್ಬಬಾಸ್‌ನಲ್ಲಿ "ಈ ವಾರ ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ ನಾಮಿನೇಟ್‌ ಆಗಬೇಕೇ, ಬೇಡವೇ? ಸೂಕ್ತ ಕಾರಣಗಳೊಂದಿಗೆ ತಿಳಿಸಿ" ಎಂದು ಬಿಗ್‌ಬಾಸ್‌ ಸೂಚಿಸಿದರು. ಆಗ ಸಿರಿ ಒಬ್ಬರನ್ನ ಬಿಟ್ಟು ಬಾಕಿಯವರೆಲ್ಲಾ ‘ನಾಮಿನೇಟ್‌ ಆಗಬೇಕು’ ಅಂತಲೇ ಹೇಳಿದ್ದರಿಂದ, ಅವಿನಾಶ್‌ ಶೆಟ್ಟಿ ಹಾಗೂ ಪವಿ ಪೂವಪ್ಪರನ್ನ ಬಿಗ್‌ಬಾಸ್‌ ನಾಮಿನೇಟ್ ಮಾಡಿದರು.

ಕಳೆದ ವಾರಾಂತ್ಯದಲ್ಲಿ ಸ್ನೇಹಿತ್ ಮತ್ತು ಮೈಕಲ್‌ ಬಾಟಂ 2ನಲ್ಲಿದ್ದಾಗ, ಹೋಸ್ಟ್‌ ಕಿಚ್ಚ ಸುದೀಪ್‌ ತಮ್ಮ ಅಧಿಕಾರವನ್ನ ಬಳಸಿ ಇವರಿಬ್ಬರನ್ನೂ ಔಟ್‌ ಮಾಡದೆ, ಬದಲಾಗಿ ಇಬ್ಬರನ್ನೂ ಮತ್ತೆ ನೇರವಾಗಿ ನಾಮಿನೇಟ್ ಮಾಡಿದರು. ಹೀಗಾಗಿ, ಈ ವಾರ ನಾಮಿನೇಷನ್‌ ತಲೆಬಿಸಿ ಸ್ನೇಹಿತ್, ಮೈಕಲ್‌ಗೆ ಮುಂದುವರೆದಿದೆ. ಕಳೆದವಾರ ಬಿಗ್‌ಬಾಸ್‌ "ಈ ವಾರ ಕ್ಯಾಪ್ಟನ್‌ ಆಗುವ ಸ್ಪರ್ಧಿಗೆ ದುಪ್ಪಟ್ಟು ಅಧಿಕಾರ ದೊರೆಯಲಿದೆ" ಎಂದು ಹೇಳಿದ್ದು, ಅದರಂತೆ ಕ್ಯಾಪ್ಟನ್ ಆದ ಸ್ನೇಹಿತ್‌ಗೆ ಸೂಪರ್‌ ಸ್ಪೆಷಲ್ ಅಧಿಕಾರ ಲಭಿಸಿದೆ. ಇದರ ಅನುಸಾರ, ಬಾಕಿ ಸ್ಪರ್ಧಿಗಳ ಪೈಕಿ ನಾಮಿನೇಟ್ ಮಾಡುವ ಅಧಿಕಾರ ಸ್ನೇಹಿತ್‌ಗೆ ಮಾತ್ರ ನೀಡಲಾಗಿದ್ದು, ಪ್ರತಿ ಬಾರಿ ಬಿಗ್‌ಬಾಸ್‌ ಸೂಚಿಸುವ ಇಬ್ಬರು ಸ್ಪರ್ಧಿಗಳು ಮುಂದೆ ಬಂದು ತಾವು ಯಾಕೆ ನಾಮಿನೇಷನ್‌ನಿಂದ ಬಚಾವ್ ಆಗಬೇಕು, ಮತ್ತು ತಮ್ಮ ಜೊತೆಗಿರುವ ಸ್ಪರ್ಧಿ ಯಾಕೆ ನಾಮಿನೇಟ್‌ ಆಗಬೇಕು ಎಂದು ವಾದಿಸಬೇಕಿತ್ತು. 

ಇದನ್ನೂ ಓದಿ: BBK 10: ಬಿಗ್‌ಬಾಸ್‌ ಮನೆಯ ಚೇಲಾ ಯಾರು? ಚೇಲನಾಗಿರುವ ಸದಸ್ಯ ಏನ್ಹೇಳಿದ್ದಾರೆ!

ವಾದ ಪ್ರತಿವಾದ ಕೇಳಿ, ಒಬ್ಬರನ್ನ ಸ್ನೇಹಿತ್‌ ನಾಮಿನೇಟ್ ಮಾಡಿ, ಮತ್ತೊಬ್ಬರನ್ನು ಸೇಫ್ ಮಾಡಬೇಕಿತ್ತು. ತುಕಾಲಿ ಸಂತು ಹಾಗೂ ಸಂಗೀತಾ ಮುಖಾಮುಖಿಯಾದ್ದು, ಇಬ್ಬರ ವಾದ - ಪ್ರತಿವಾದ ಕೇಳಿ ಸಂಗೀತಾರನ್ನ ಸ್ನೇಹಿತ್‌ ನಾಮಿನೇಟ್ ಮಾಡಿದರು. ತುಕಾಲಿ ಸಂತು ಅವರನ್ನ ಸೇಫ್ ಮಾಡಿದರು. ಬಳಿಕ ಸಿರಿ ಹಾಗೂ ವಿನಯ್ ಪೈಕಿ ಸಿರಿಯನ್ನ ಸ್ನೇಹಿತ್‌ ಡೇಂಜರ್ ಝೋನ್‌ಗೆ ತಳ್ಳಿ, ವಿನಯ್‌  ಸ್ನೇಹಿತ್‌ ಬಚಾವ್ ಮಾಡಿದರು. ವರ್ತೂರು ಸಂತೋಷ್‌, ತನಿಷಾ ಹಾಗೂ ಕಾರ್ತಿಕ್‌ ಪೈಕಿ ವರ್ತೂರು ಸಂತೋಷ್‌ ಸ್ನೇಹಿತ್ ಸೇಫ್ ಮಾಡಿ,  ಕಾರ್ತಿಕ್, ತನಿಷಾ ಅವರನ್ನ ಸ್ನೇಹಿತ್ ನಾಮಿನೇಟ್ ಮಾಡಿದರು. ಹಾಗೆಯೇ ನಮ್ರತಾರನ್ನ ಸೇಫ್ ಮಾಡಿದ ಸ್ನೇಹಿತ್‌, ಡ್ರೋನ್ ಪ್ರತಾಪ್‌ರನ್ನ ನಾಮಿನೇಷನ್‌ ಝೋನ್‌ಗೆ ಹಾಕಿದರು.

ನಾಮಿನೇಟ್‌ ಮಾಡುವ ಅಧಿಕಾರ ಇದ್ದದ್ದು ಕ್ಯಾಪ್ಟನ್ ಸ್ನೇಹಿತ್‌ ಮಾತ್ರ ಪಡೆದಿದ್ದರಿಂದ, ಈತನ ಕೃಪೆಯಿಂದಾಗಿ ಈ ವಾರ 5 ಮಂದಿ ನಾಮಿನೇಟ್ ಆಗಿದ್ದಾರೆ. ಇನ್ನೂ, ಸ್ನೇಹಿತ್‌ ಹಾಗೂ ಮೈಕಲ್ ಇಬ್ಬರನ್ನ ಕಿಚ್ಚ ಸುದೀಪ್ ನಾಮಿನೇಟ್ ಮಾಡಿದ್ದು, ಇತರೆ ಸ್ಪರ್ಧಿಗಳ ಅಭಿಪ್ರಾಯದ ಆಧಾರದ ಮೇಲೆ ಪವಿ ಪೂವಪ್ಪ ಮತ್ತು ಅವಿನಾಶ್ ಶೆಟ್ಟಿರನ್ನ ಡೇಂಜರ್‌ ಝೋನ್‌ನಲ್ಲಿ ಇರಿಸಲಾಗಿದೆ. ಒಟ್ಟಾರೆಯಾಗಿ ಬಿಗ್‌ಬಾಸ್‌ ಮನೆಯಲ್ಲಿ 9 ಮಂದಿ ನಾಮಿನೇಟ್‌ ಆಗಿದ್ದು, ಪವಿ ಪೂವಪ್ಪ, ಅವಿನಾಶ್‌ ಶೆಟ್ಟಿ, ಸ್ನೇಹಿತ್, ಮೈಕಲ್, ಕಾರ್ತಿಕ್, ತನಿಷಾ, ಸಿರಿ, ಸಂಗೀತಾ, ಡ್ರೋನ್ ಪ್ರತಾಪ್ ಪೈಕಿ ಈ ವಾರ ಔಟ್‌ ಆಗೋರು ಯಾರು ಎಂಬುದನ್ನುನ ವಾರದ ಅಂತ್ಯದ ತನಕ ಕಾದು ನೋಡಬೇಕಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News