BBK 10: ಡ್ರೋನ್ ಪ್ರತಾಪ್‌ನ ಹಿಯ್ಯಾಳಿಸಿದ ತುಕಾಲಿ ಸಂತುಗೆ ಕಿಚ್ಚ ಸುದೀಪ್ ಸ್ಪೆಷಲ್ ಕ್ಲಾಸ್‌!

Kiccha Special Class to Tukali Santhu: ಬಿಗ್‌ ಬಾಸ್‌ ಮನೆಯಲ್ಲಿ ಈಗಾಗಲೇ ಕೆಲವರು ಅಸಮರ್ಥರ ಲಿಸ್ಟ್‌ನಲ್ಲಿದ್ದಾರೆ. ಉಳಿದವರು ಅವರಪಂದಿಗೆ ಒಂದಲ್ಲಾ ಒಂದು ವಿಚಾರಕ್ಕೆ ವಾದ ಮಾಡುತ್ತಲೇ ಇರುತ್ತಾರೆ. ಸದ್ಯ ಡ್ರೋನ್‌ ಪ್ರತಾಪ್‌ ಜೊತೆ ಮನೆ ಮಂದಿ ನಡೆದುಕೊಂಡ ರೀತಿಗೆ ಕಿಚ್ಚ ಸ್ಪೆಷಲ್‌ ಆಗಿ ತುಕಾಲಿ ಸಂತು ಅವರಿಗೆ ಮಾತಲ್ಲೇ ಬಿಸಿ ಮುಟ್ಟಿಸಿದ್ದಾರೆ.   

Written by - Savita M B | Last Updated : Oct 15, 2023, 08:56 AM IST
  • ಅಸಮರ್ಥರ ಲಿಸ್ಟ್‌ನಲ್ಲಿರುವ ಡ್ರೋನ್‌ ಪ್ರತಾಪ್‌ಗೆ ಮನೆಮಂದಿ ಪದೇ ಪದೇ ಕಾಲೆಳೆಯುತ್ತಿದ್ದಾರೆ.
  • ಅದರಲ್ಲೂ ತುಕಾಲಿ ಸಂತು ಅಂತೂ ಇನ್ನೂ ಹೆಚ್ಚು ಲೇವಡಿ ಮಾಡಿದ್ದಾರೆ.
  • ಈ ವಿಚಾರವಾಗಿ ಕಿಚ್ಚ ಸುದೀಪ್‌ ಸಂತುಗೆ ಬಿಸಿ ತಟ್ಟುವಂತೆ ಮಾತನಾಡಿದ್ದಾರೆ.
BBK 10: ಡ್ರೋನ್ ಪ್ರತಾಪ್‌ನ ಹಿಯ್ಯಾಳಿಸಿದ ತುಕಾಲಿ ಸಂತುಗೆ ಕಿಚ್ಚ ಸುದೀಪ್ ಸ್ಪೆಷಲ್ ಕ್ಲಾಸ್‌! title=

Varadha Kathe Kicchana Jote: ಅಸಮರ್ಥರ ಲಿಸ್ಟ್‌ನಲ್ಲಿರುವ ಡ್ರೋನ್‌ ಪ್ರತಾಪ್‌ಗೆ ಮನೆಮಂದಿ ಪದೇ ಪದೇ ಕಾಲೆಳೆಯುತ್ತಿದ್ದಾರೆ. ಅದರಲ್ಲೂ ತುಕಾಲಿ ಸಂತು ಅಂತೂ ಇನ್ನೂ ಹೆಚ್ಚು ಲೇವಡಿ ಮಾಡಿದ್ದಾರೆ. ಈ ವಿಚಾರವಾಗಿ ಕಿಚ್ಚ ಸುದೀಪ್‌ ಸಂತುಗೆ ಬಿಸಿ  ತಟ್ಟುವಂತೆ ಮಾತನಾಡಿದ್ದಾರೆ. 

‘ಬಿಗ್ ಬಾಸ್‌ ಕನ್ನಡ 10’ ಶೋನಲ್ಲಿ ಮೊದಲ ವಾರವೇ ಟಾರ್ಗೆಟ್‌ ಆಗಿದ್ದು ಡ್ರೋನ್‌ ಪ್ರತಾಪ್.‌ ಅವರನ್ನು Bully ಮಾಡುವುದಲ್ಲದೇ, ತುಕಾಲಿ ಸಂತು ಬೆನ್ನ ಹಿಂದೆ ಕಾಲೆಳೆದಿದ್ದರು. ತುಕಾಲಿ ಅವರ ಮಾತಿಗೆ ಮನೆಮಂದಿ ಎಲ್ಲರೂ ನಗಾಡಿದ್ದರು. 

ಇದನ್ನೂ ಓದಿ-ಸ್ಟ್ರಾಪ್‌ಲೆಸ್ ಟಾಪ್‌ನಲ್ಲಿ ನಿದ್ದೆಗೆಡಿಸುವಂತಿವೆ ಜಾನ್ವಿ ಸೌಂದರ್ಯ..! ಫೋಟೋಸ್‌ ಇಲ್ಲಿವೆ

ಎರಡು ದಿನಗಳ ಹಿಂದೆ ದೊಡ್ಮನೆಗೆ ಪ್ರಥಮ್‌ ಗೆಸ್ಟ್‌ ಆಗಿ ಎಂಟ್ರಿಕೊಟ್ಟಿದ್ದರು. ಆಗ ಅವರು "ಹೊರಗಿನ ವಿಚಾರಗಳನ್ನು ಇಲ್ಲಿ ತರಬೇಡಿ..ಅವರಿಗೆ ಅದನ್ನು ಸಮರ್ಥನೆ ಮಾಡಿಕೊಳ್ಳುವ ಯಾವುದೇ ದಾರಿ ಇಲ್ಲಿ ಇರುವುದಿಲ್ಲ" ಎಂದು ತುಕಾಲಿ ಸಂತು ಅವರಿಗೆ ಹೇಳಿದ್ದರು. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳದ ಆತ ಪದೇ ಪದೇ ಡ್ರೋನ್‌ ಪ್ರತಾಪ್‌ ಅವರನ್ನು ಆಡಿಕೊಂಡು ನಕ್ಕಿದ್ದರು. ಇದೇ ಕಾರಣಕ್ಕಾಗಿ ಕಿಚ್ಚ ಸುದೀಪ್‌ ಉದಾಹರಣೆ ಸಹಿತ ಸ್ಪೆಷಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. 

ಕಿಚ್ಚ ಸುದೀಪ್‌ : ತುಕಾಲಿ ಅವರೇ ಈ ಕಥೆ ಬಹಳ ಸಿಂಪಲ್‌. ಪ್ರತಾಪ್‌ ಅವರನ್ನು ಕ್ಯಾಮೆರಾ ಮುಂದೆ ಕರೆತಂದು ’ಇನ್ಮೇಲೆ ಇವರೇ ನನ್ನ ಸ್ಟೂಡೆಂಟ್’ ಎಂದು ಹೇಳಿದ್ದೀರಿ. ನಿಮಗೆ ನೀವೆ ಗುರು ಸ್ಥಾನವನ್ನೂ ಘೋಷಿಸಿಕೊಂಡಿದ್ದಿರಿ.. ನಂತರ ಮನೆಮಂದಿ ಜೊತೆ ಇದನ್ನ ಚರ್ಚೆ ಮಾಡಿ ಇಡೀ ಮನೆಯ ಸದಸ್ಯರೇ ಪ್ರತಾಪ್‌ ಬಗ್ಗೆ ಮಾತನಾಡುವ ಹಾಗೆ ಮಾಡುತ್ತೀರಿ.. ಸದ್ಯ ಭಗವಂತ ನಿಮ್ಮ ಬಾಯಲ್ಲಿ ತರಿಸಿದ ರೇಟಿಂಗ್‌ 2. ನಿಮಗೆ ನೀವೆ 10 ರಲ್ಲಿ 2 ರೇಟಿಂಗ್ ಕೊಟ್ಟುಕೊಂಡಿದ್ದಿರಾ... ನಿಮ್ಮಲ್ಲೇ 8 ಮೈನಸ್ ಇರೋವಾಗ ಇನ್ನೊಬ್ಬ ವ್ಯಕ್ತಿಯನ್ನು ಕೊಲೆ ಮಾಡುವ ಅಧಿಕಾರ ಯಾವಾಗಿನಿಂದ ನಿಮ್ಮದಾಯ್ತು?

ನನಗೆ ಗೊತ್ತಿರುವ ಹಾಗೆ ಒಬ್ಬ ವ್ಯಕ್ತಿ ಕಾಮಿಡಿಯಾಗಿ ಯಾವಾಗ ಆಗ್ತಾನೆ ಅಂದ್ರೆ ವ್ಯಕ್ತಿಗೆ ನಗಿಸುವ ಅರ್ಹತೆ ಇದ್ದಾಗ ಮಾತ್ರ..ಅದು ತಮಾಷೆಯಿಂದ ಆಗಬೇಕೇ ಹೊರತು ಇನ್ನೊಬ್ಬ ವ್ಯಕ್ತಿಯ ಮೇಲೆ ತಮಾಷೆ ಮಾಡಿ ನಗಿಸುವುದಲ್ಲ.. ಅಂತವರು ಜೋಕರ್ ಅಲ್ಲ ಸರ್... ಬ್ಯಾಟ್‌ಮ್ಯಾನ್‌ನ ಜೋಕರ್‌..!

ಇದನ್ನೂ ಓದಿ-ಈ ವಾರ OTTಯಲ್ಲಿ ವೀಕ್ಷಿಸಲೇಬೇಕಾದ ಸಿನಿಮಾ & ವೆಬ್ ಸೀರಿಸ್​ಗಳು..!

ನನಗೆ ನಿಮ್ಮ ಸಾರಿ ಬೇಡ... ನನ್ನ ಕೆಲಸ ನಿಮಗೆ ಅವಮಾನ ಮಾಡೋದಂತೂ ಅಲ್ಲ. ಒಳಗೆ ನಿಮಗೆ ಅವಮಾನ ಆಗುತ್ತಿದ್ದಾಗ, ನಿಮ್ಮ ವ್ಯಕ್ತಿತ್ವ ಕೊಲೆ ಆಗುತ್ತಿದ್ದಾಗ ಸುಮ್ಮನೆ ಇರುವ ಕೆಲಸ ನನ್ನದಲ್ಲ ಈ ಕಥೆಯಲ್ಲಿ ತಪ್ಪಿತಸ್ಥ, ಸಮಾಜ, ಭಗವಂತ .. ನಿಮ್ಮದು ಯಾವ ಪಾತ್ರ? 

 ನಗಿಸುವುದು ಬೇರೆ ಒಳ್ಳೆ ರೀತಿಯಲ್ಲಿ ನಗಿಸಿ. ತುಕಾಲಿ ಸಂತು ಅಂತ ಸುಮ್ಮನೆ ಆಗಿಲ್ಲ ನೀವು. ಇದನ್ನ ಆಗೋಕೂ ಬಹಳ ಒದ್ದಾಡುತ್ತಾರೆ. ಎಲ್ಲರನ್ನು ನಗಿಸಿ ಆದರೆ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಹೀಯಾಳಿಸಿ ತಮಾಷೆ ಮಾಡಿಕೊಂಡು 10 ಜನರನ್ನ ನಗಿಸುವುದಕ್ಕಿಂತ ದೊಡ್ಡ ತಪ್ಪು ಬೇರಾವುದು ಇಲ್ಲ.. ಇಂತಹ ತಮಾಷೆ ನಮಗೆ ಬೇಡ. ಆ ತರಹದ ಸಮಾಜವನ್ನ ನಾವು ಸೃಸ್ಟಿಸಲೂ ಹೋಗಬಾರದು" ಎಂದು ತುಕಾಲಿ ಡ್ರೋನ್‌ ಪ್ರತಾಪ್‌ ಅವರ ಹತ್ತಿರ ಕ್ಷಮೆ ಕೇಳುವಂತೆ ಕಥೆ ಹೇಳಿ ಕಿವಿ ಹಿಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News