BBK 10: ಹಳ್ಳಿಕಾರ್ ರೀ ಎಂಟ್ರಿಯಿಂದ ಕ್ರಿಯೆಟಾಯ್ತು ಹೊಸ ಜಗತ್ತು..! ಬಿಗ್‌ಬಾಸ್ ಮನೆಯೀಗ ಹಳ್ಳಿ

BBK Village Task: ಬಿಗ್‌ಬಾಸ್‌ ಮನೆಯಲ್ಲಿ ಹಳ್ಳಿಕಾರ್ ರೀ ಎಂಟ್ರಿ ಆಗುತ್ತಿದ್ದಂತೆಯೇ ಹಳ್ಳಿಯ ಜಗತ್ತೊಂದು ತೆರೆದುಕೊಂಡಿದೆ. ದೊಡ್ಡ ಮನೆಯೊಳಗೆ ಚಿಕ್ಕದೊಂದು ಹಳ್ಳಿಯೇ ಜೀವತಳೆದಿದೆ.  

Written by - Savita M B | Last Updated : Oct 31, 2023, 04:43 PM IST
  • ಹಳ್ಳಿಕಾರ್ ರೀ ಎಂಟ್ರಿಯಿಂದ ಕ್ರಿಯೆಟಾದ ಆ ಹಳ್ಳಿ
  • ಮನೆಯ ಸದಸ್ಯರನ್ನು ಎರಡು ಕುಟುಂಬಗಳಾಗಿ ವಿಂಗಡಿಸಿರುವ ಬಿಗ್‌ಬಾಸ್‌
  • ಹಳ್ಳಿ ಬದುಕಿನ ವಿಶಿಷ್ಟ ಟಾಸ್ಕ್ ಕೊಟ್ಟಿದ್ದಾರೆ.
BBK 10: ಹಳ್ಳಿಕಾರ್ ರೀ ಎಂಟ್ರಿಯಿಂದ ಕ್ರಿಯೆಟಾಯ್ತು ಹೊಸ ಜಗತ್ತು..! ಬಿಗ್‌ಬಾಸ್ ಮನೆಯೀಗ ಹಳ್ಳಿ title=

Kannada Bigg Boss: ಹಳ್ಳಿಕಾರ್ ರೀ ಎಂಟ್ರಿಯಿಂದ ಕ್ರಿಯೆಟಾದ ಆ ಹಳ್ಳಿ ಹೇಗಿರಲಿದೆ ಎಂಬುದರ ಝಲಕ್ ಬಿಡುಗಡೆಯಾರುವ ಪ್ರೋಮೊದಲ್ಲಿ ಸಿಕ್ಕಿದೆ. ಮನೆಯ ಸದಸ್ಯರನ್ನು ಎರಡು ಕುಟುಂಬಗಳಾಗಿ ವಿಂಗಡಿಸಿರುವ ಬಿಗ್‌ಬಾಸ್‌, ಅವರಿಗೆ ಹಳ್ಳಿ ಬದುಕಿನ ವಿಶಿಷ್ಟ ಟಾಸ್ಕ್ ಕೊಟ್ಟಿದ್ದಾರೆ.

‘ಒಂದು ಸುಂದರವಾದ ಹಳ್ಳಿ. ಒಂದೇ ಕುಟುಂಬದಂತೆ ಬದುಕುತ್ತಿರುವ ಎರಡು ಮನೆತನಗಳು. ಒಂದು ಮನೆತನದ ಮುಖ್ಯಸ್ಥ ವಿನಯ್. ಇನ್ನೊಂದು ಮನೆತನದ ಮುಖ್ಯಸ್ಥೆ ಸಂಗೀತಾ’ ಎಂದಿರುವ ಬಿಗ್‌ಬಾಸ್‌ ಎರಡು ಕುಟುಂಬಗಳ ಮಧ್ಯೆ ದ್ವೇಷದ ಕಿಡಿ ಹೊತ್ತಿಕೊಳ್ಳುವ ಸಂದರ್ಭವನ್ನೂ ಸೃಷ್ಟಿಸಿರುವಂತಿದೆ.

ಇದನ್ನೂ ಓದಿ-ʼಎರಡನೇ ಮಗುವಿನ ನಿರೀಕ್ಷೆಯುಲ್ಲಿರುವ ಅನುಷ್ಕಾʼ: ವದಂತಿಗಳಿಗೆ ಫುಲ್‌ಸ್ಟಾಪ್‌ ಇಟ್ಟ ಪತಿ ವಿರಾಟ್

ನಮ್ರತಾ ಹಳದಿ ಸೀರೆ ಉಟ್ಟು, ಕೈಯಲ್ಲಿ ಸೌಟು ಹಿಡಿದು ನಮ್ರತಾ ಬಳಿ ಬಂದು, ‘ನಿನ್ನ ಗಂಡನಾ ವಸಿ ಹದ್ದಬಸ್ತಲ್ಲಿ ಮಡಿಕ ವೋಗು’ ಎಂದು ಪಕ್ಕಾ ಗ್ರಾಮ್ಯ ಭಾಷೆಯಲ್ಲಿ ಝಾಡಿಸಿದರೆ, ಸಂತೋಷ್, ‘ಗೋದಿ ಬೀಸಿದ್ಕಿಂತ ಅಗ್ದಿದ್ದೇ ಜಾಸ್ತಿ ನೋಡು ಅಳಿಮಯ್ಯ’ ಎಂದುಅಲ್ಲೂ ನಗೆಬುಗ್ಗೆಕ ಸಿಡಿಸುತ್ತಿದ್ದಾರೆ.

ವಿನಯಪ್ಪಾ, ಸಂಗೀತವ್ವಾ ಆಟ ಶುರುಮಾಡುಮಾ? ಎಂದು ಬಿಗ್‌ಬಾಸ್ ಕೂಡ ನಾಟಿ ಸ್ಟೈಲ್‌ನಲ್ಲೇ ನಿರ್ದೇಶನ ನೀಡಿದ್ದು ಇನ್ನೊಂದು ವಿಶೇಷ. ಏನಿದು ಟಾಸ್ಕ್? ಅದರ ಸ್ವರೂಪ ಹೇಗಿರುತ್ತದೆ? ಯಾರು ಗೆಲ್ಲುತ್ತಾರೆ? ಎಲ್ಲವನ್ನು ತಿಳಿದುಕೊಳ್ಳಲು ಕಾದುನೋಡಬೇಕು. 

ಇದನ್ನೂ ಓದಿ-Nabha Natesh: ರೆಟ್ರೊ ಲುಕ್‌ನಲ್ಲಿ ವಜ್ರಕಾಯ ಸುಂದರಿ..! ಪೋಟೋಸ್‌ ವೈರಲ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News