Bigg Boss Kannada OTT : ಬಿಗ್ ಬಾಸ್ ಕನ್ನಡ ಒಟಿಟಿ : 5ನೇ ವಾರ ಮನೆಯಿಂದ ನಂದಿನಿ ಔಟ್

ಈ ಐದನೇ ವಾರದಂದು ಅತೀ ಕಡಿಮೆ ವೋಟ್ಸ್ ಪಡೆದ ನಂದಿನಿ ಹೊರ ಬಂದಿದ್ದಾರೆ.

Written by - Channabasava A Kashinakunti | Last Updated : Sep 10, 2022, 10:14 PM IST
  • ಬಿಗ್ ಬಾಸ್ ಕನ್ನಡ ಒಟಿಟಿ ಆರಂಭವಾಗಿ ಇಂದು 5ನೇ ವಾರ ಮುಕ್ತಾಯ
  • ಈ ವಾರ ಮನೆಯಿಂದ ನಂದಿನಿ ಹೊರಗೆ
  • 5ನೇ ವಾರ ಎಲಿಮಿನೇಷನ್ ಆಗಿದ್ದ ಸ್ಪರ್ಧಿಗಳು ಯಾರು?
Bigg Boss Kannada OTT : ಬಿಗ್ ಬಾಸ್ ಕನ್ನಡ ಒಟಿಟಿ : 5ನೇ ವಾರ ಮನೆಯಿಂದ ನಂದಿನಿ ಔಟ್ title=

Bigg Boss Kannada OTT : ಬಿಗ್ ಬಾಸ್ ಕನ್ನಡ ಒಟಿಟಿ ಆರಂಭವಾಗಿ ಇಂದು 5ನೇ ವಾರ ಮುಕ್ತಾಯವಾಗಿದೆ. ಈ ವಾರ ಮನೆಯಿಂದ ನಂದಿನಿ ಹೊರ ಬಂದಿದ್ದಾರೆ.

ಈಗಾಗಲೇ ಮನೆಯಿಂದ 7 ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಈ 5 ವಾರಗಳಲ್ಲಿ ಲೋಕೇಶ್, ಅರ್ಜುನ್ ರಮೇಶ್, ಕಿರಣ್ ಯೋಗೇಶ್ವರ್, ಸ್ಫೂರ್ತಿ ಗೌಡ, ಉದಯ್ ಸೂರ್ಯ, ಚೈತ್ರಾ ಹಳ್ಳಿಕೇರಿ ಹಾಗೂ ಅಕ್ಷತಾ ಕುಕ್ಕಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಈ ಐದನೇ ವಾರದಂದು ಅತೀ ಕಡಿಮೆ ವೋಟ್ಸ್ ಪಡೆದ ನಂದಿನಿ ಹೊರ ಬಂದಿದ್ದಾರೆ.

ಇದನ್ನೂ ಓದಿ : BBK OTT: ಬಿಗ್‌ಬಾಸ್‌ನಲ್ಲಿ ಡಬಲ್​ ಎಲಿಮಿನೇಷನ್, ಸೋನುಗೆ ಕಿಚ್ಚನ ಕ್ಲಾಸ್‌

5ನೇ ವಾರ ಎಲಿಮಿನೇಷನ್ ಆಗಿದ್ದ ಸ್ಪರ್ಧಿಗಳು ಯಾರು?

5ನೇ ವಾರ ಸೋಮಣ್ಣ ಮಾಚಿಮಾಡ, ಸೋನು ಶ್ರೀನಿವಾಸ್ ಗೌಡ, ಜಯಶ್ರೀ ಆರಾಧ್ಯ, ನಂದಿನಿ, , ಆರ್ಯವರ್ಧನ್, ಜಶ್ವಂತ್ ಬೋಪಣ್ಣ ನಾಮಿನೇಟ್ ಆಗಿದ್ದರು. ಈ 6 ಸ್ಪರ್ಧಿಗಳಲ್ಲಿ ತುಂಬಾ ಕಡಿಮೆ ವೋಟ್ ಪಡೆದು ನಂದಿನಿ ಈ ವಾರ ಎಲಿಮಿನೇಷನ್ ಆಗಿದ್ದಾರೆ.

ಬಿಗ್ ಬಾಸ್ ಒಟಿಟಿ ಮನೆಯೊಳಗೆ ನಂದಿನಿ ಹಾಗೂ ಜಶ್ವಂತ್ ಬೋಪಣ್ಣ  ಕಪಲ್ ಆಗಿ ಎಂಟ್ರಿ ನೀಡಿದ್ದರು. ನಿಜ ಜೀವನದಲ್ಲಿ ಇವರಿಬ್ಬರು ಲವರ್ಸ್. ಆದ್ರೆ, ಬಿಬಿ ಮನೆಯಲ್ಲಿ ಜಶ್ವಂತ್ ಬೋಪಣ್ಣ ಜೊತೆಗೆ ಸಾನ್ಯ ಅಯ್ಯರ್ ಕ್ಲೋಸ್ ಆಗಿದ್ದ ಕಾರಣ ನಂದಿನಿ ತುಂಬಾ ಫೀಲ್ ಆಗಿದ್ದರು. ಈ ಕಾರಣದಿಂದಾಗಿ ನಂದಿನಿ ಮತ್ತೆ ಜಶ್ವಂತ್ ಬೋಪಣ್ಣ ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು. ಮನೆಯ ಟಾಸ್ಕ್‌ಗಳ ವಿಚಾರಕ್ಕೆ ಬಂದಾಗ ನಂದಿನಿ ಉತ್ತಮ ಪ್ರದರ್ಶನ ನೀಡಿದ್ದರು, ಪ್ರಕ್ಷಕ ಪ್ರಭುಗಳು ನಂದಿನಿಗೆ ಬೆಂಬಲ ನೀಡಲಿಲ್ಲ.

ಇದನ್ನೂ ಓದಿ : Lucky Man: "ಅಪ್ಪು ಕುಳಿತಿದ್ದ ಆ ಚೇರ್‌ ಕೊಡಿ ಸಾಕು" - ಗಳಗಳನೇ ಅತ್ತ ರಾಘಣ್ಣ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News