Kiccha Sudeep : ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಮನೆ ಅಡ್ರೆಸ್ಗೆ ಡೈರೆಕ್ಟಾಗಿ ಬೆದರಿಕೆ ಪತ್ರ ಪೋಸ್ಟ್ ಮೂಲಕ ಬಂದಿತ್ತು. ಕೇಸ್ ದಾಖಲಾಗಿ 21ದಿನ ಆಗಿದ್ದು ತನಿಖೆ ಕೈಗೆತ್ತುಕೊಂಡಿದ್ದ ಸಿಸಿಬಿ ಪೊಲೀಸರು ತೀವ್ರ ತನಿಖೆ ನಡೆಸ್ತಿದ್ದಾರೆ. ಯಾವ ಪೋಸ್ಟ್ ಬಾಕ್ಸ್ ನಿಂದ ಲೆಟರ್ ಪೋಸ್ಟ್ ಆಗಿದ್ದು, ಯಾರ್ ಬಂದಿದ್ರು ಏನು ಅನ್ನೋದ್ರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಕಲೆಕ್ಟ್ ಮಾಡಿದ್ದ ಸಿಸಿಬಿ ಟೀಂಗೆ ದೊಮ್ಮಲೂರು ಬಳಿಯ ಪೋಸ್ಟ್ ಬಾಕ್ಸ್ ವೊಂದರಿಂದ ಲೆಟರ್ ಹಾಕಿರೋದು ಗೊತ್ತಾಗಿತ್ತು. ಅಲ್ಲಿನ ಸಿಸಿಟಿವಿ ಪರಿಶೀಲನೆ ಮಾಡಿದ್ದ ಸಿಸಿಬಿಗೆ ಇಬ್ಬರು ಆರೋಪಿಗಳು ವೈಟ್ ಕಲರ್ ಸ್ವಿಫ್ಟ್ ಕಾರ್ ನಲ್ಲಿ ಬಂದು ಪೋಸ್ಟ್ ಮಾಡಿರೋದು ಗೊತ್ತಾಗಿದೆ.
ಸಿಸಿಟಿವಿ ಪರಿಶೀಲನೆ ನಡೆಸಿದ್ದೇ ತಡ ಕಾರ್ ಯಾರ್ದು ಏನು ಅನ್ನೋದನ್ನ ಪರಿಶೀಲನೆ ನಡೆಸಿದ್ದ ಸಿಸಿಬಿಗೆ ಆರೋಪಿಗಳು ಫೇಕ್ ನಂಬರ್ ಪ್ಲೇಟ್ ಬಳಸಿರೋದು ಗೊತ್ತಾಗಿದೆ. ಆ ನಂಬರ್ ನ ಒರಿಜಿನಲ್ ಮಾಲೀಕನನ್ನ ಕಾಂಟ್ಯಾಕ್ಟ್ ಮಾಡಿ ವಿಚಾರಣೆ ನಡೆಸಿದಾಗ ಆತನಿಗೂ ಈ ಕೇಸ್ ಗೂ ಏನೂ ಕನೆಕ್ಟ್ ಇಲ್ಲ ಅನ್ನೋದು ಗೊತ್ತಾಗಿದೆ. ಇನ್ನು ಸಿಸಿಟಿವಿಯಲ್ಲಿ ಸೆರೆಯಾಗಿರೋ ಇಬ್ಬರು ಆರೋಪಿಗಳ ಚಹರೆಯನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ: Vivek Agnihotri : ಮುಸ್ಲಿಂ ಏರಿಯಾ ಸೇಫ್ ಅಲ್ಲ ಎಂದು ಇವೆಂಟ್ ಲೊಕೇಷನ್ ಬದಲಾಯಿಸಿದ ವಿವೇಕ್ ಅಗ್ನಿಹೋತ್ರಿ
ಅದ್ರೆ ಅವ್ರು ಯಾರು ಏನು ಅನ್ನೋದೆ ಸದ್ಯ ಸಿಸಿಬಿ ಪೊಲೀಸರ ಮುಂದಿರೋ ಮಿಲಿಯನ್ ಡಾಲರ್ ಪ್ರಶ್ನೆ.. ಮತ್ತೊಂದ್ ಕಡೆ ಈ ಕೇಸ್ ಗೆ ಸಂಬಂಧಿಸಿದಂತೆ ಒಂದಷ್ಟು ಮಹತ್ವದ ದಾಖಲೆಗಳು ಸಿಕ್ಕಿದ್ದು ಸಿಸಿಬಿ ಪೊಲೀಸರು ತನಿಖೆ ವೇಗ ಜಾಸ್ತಿ ಮಾಡಿದ್ದಾರೆ. ಇನ್ನು ಈ ಕೇಸ್ ಸಂಬಂಧ ದೂರು ನೀಡಿದ್ದ ಸುದೀಪ್ ಮ್ಯಾನೇಜರ್ ಜಾಕ್ ಮಂಜುನನ್ನೂ ಕರೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದ ಸುದೀಪ್ ಕಾರು ಡ್ರೈವರ್ ಮೇಲೆ ಜಾಕ್ ಮಂಜು ಅನುಮಾನ ವ್ಯಕ್ತಪಡಿಸಿದ್ರು.
ಆ ಡ್ರೈವರ್ ನನ್ನೂ ಕರೆಸಿ ವಿಚಾರಣೆ ಮಾಡಿದ್ದು ಆತನ ವಿರುದ್ಧವೂ ಯಾವ ಟೆಕ್ನಿಕಲ್ ಎವಿಡೆನ್ಸ್ ಸಿಕ್ಕಿಲ್ಲ. ಒಟ್ಟಾರೆಯಾಗಿ ಸುದೀಪ್ ಮನೆಗೆ ಬೆದರಿಕೆ ಲೆಟರ್ ಹಾಕಿರೋರ ಬಗ್ಗೆ ಸಿಸಿಬಿ ಪೊಲೀಸರ ತನಿಖೆ ಚುರುಕಾಗಿದ್ದು ಒಂದು ಹಂತಕ್ಕೆ ತಲುಪಿದೆ. ಕೆಲ ಮಹತ್ವದ ಎವಿಡೆನ್ಸ್ ಸಿಕ್ಕಿವೆ.. ಆದ್ರೆ ಆರೋಪಿಗಳು ಸಿಕ್ಮೇಲೆ ಈ ಕೇಸ್ ಮೇಜರ್ ಡೆವಲಪ್ಮೆಂಟ್ ಪಡೆದುಕೊಳ್ಳೋ ಸಾಧ್ಯತೆ ಇದೆ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.