ಬಾಲ್ಯದಿಂದಲೇ ಸ್ನೇಹಿತರು ಈ ಇಬ್ಬರು ದಿಗ್ಗಜ ಕ್ರಿಕೆಟಿಗರ ಪತ್ನಿಯರು ಇಲ್ಲಿದೆ unseen photos

ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಶರ್ಮಾ ಮತ್ತು ಸಾಕ್ಷಿ ಧೋನಿ ಅವರ ಅನೇಕ ಫೋಟೋಗಳು ಹರಿದಾಡುತ್ತಿವೆ. ಆ ಫೋಟೋದಲ್ಲಿ ಸಾಕ್ಷಿ ಮತ್ತು ಅನುಷ್ಕಾ ಇಬ್ಬರೂ ಜೊತೆಯಾಗಿರುವುದನ್ನು ಕಾಣಬಹುದು.

Written by - Ranjitha R K | Last Updated : Dec 17, 2021, 11:50 AM IST
  • ಒಂದೇ ಶಾಲೆಯಲ್ಲಿ ಓದಿರುವ ಅನುಷ್ಕಾ, ಸಾಕ್ಷಿ
  • ಅನುಷ್ಕಾ ಮತ್ತು ಸಾಕ್ಷಿ ಅವರ ಬಾಲ್ಯದ ಚಿತ್ರ ವೈರಲ್
  • ಮದುವೆಗೆ ಮೊದಲೇ ಸ್ನೇಹಿತರಾಗಿದ್ದ ಅನುಷ್ಕಾ ಮತ್ತು ಸಾಕ್ಷಿ
ಬಾಲ್ಯದಿಂದಲೇ ಸ್ನೇಹಿತರು ಈ ಇಬ್ಬರು ದಿಗ್ಗಜ ಕ್ರಿಕೆಟಿಗರ ಪತ್ನಿಯರು ಇಲ್ಲಿದೆ unseen photos title=
ಒಂದೇ ಶಾಲೆಯಲ್ಲಿ ಓದಿರುವ ಅನುಷ್ಕಾ, ಸಾಕ್ಷಿ (file photo)

ನವದೆಹಲಿ : ಇಬ್ಬರು ಭಾರತೀಯ ಕ್ರಿಕೆಟ್ ದಿಗ್ಗಜರಾದ ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತು ವಿರಾಟ್ ಕೊಹ್ಲಿ (Virat Kohli) ಪತ್ನಿಯರಾದ ಅನುಷ್ಕಾ ಶರ್ಮಾ ಮತ್ತು ಸಾಕ್ಷಿ ಧೋನಿ ಒಂದೇ ಶಾಲೆಯಲ್ಲಿ ಓದಿದ್ದಾರೆ. ಸಾಕ್ಷಿ ಮತ್ತು ಅನುಷ್ಕಾ ಬಾಲ್ಯದಿಂದಲೇ ಉತ್ತಮ ಗೆಳೆಯರಾಗಿದ್ದವರು. ಇಬ್ಬರ ನಡುವೆ ಮೊದಲಿನಿಂದಲೇ ಉತ್ತಮ ಸ್ನೇಹವಿತ್ತು. ಅನುಷ್ಕಾ (Anushka Sharma) ಅವರ ತಂದೆ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದರು.  ಅನುಷ್ಕಾ ಶರ್ಮಾ ಅವರ ತಂದೆ ಅಸ್ಸಾಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ, ಅಲ್ಲಿನ ಸೇಂಟ್ ಮೇರಿ ಶಾಲೆಯಲ್ಲಿ ಓದುತ್ತಿದ್ದರು. ಆ ಶಾಲೆಯಲ್ಲೇ ಸಾಕ್ಷಿ ಕೂಡ ಓದಿದ್ದು. 

ಒಂದೇ ಶಾಲೆಯಲ್ಲಿ ಓದಿರುವ ಅನುಷ್ಕಾ ಮತ್ತು ಸಾಕ್ಷಿ :
ಸೋಶಿಯಲ್ ಮೀಡಿಯಾದಲ್ಲಿ (Social media) ಅನುಷ್ಕಾ ಶರ್ಮಾ ಮತ್ತು ಸಾಕ್ಷಿ ಧೋನಿ ಅವರ ಅನೇಕ ಫೋಟೋಗಳು ಹರಿದಾಡುತ್ತಿವೆ. ಆ ಫೋಟೋದಲ್ಲಿ ಸಾಕ್ಷಿ ಮತ್ತು ಅನುಷ್ಕಾ ಇಬ್ಬರೂ ಜೊತೆಯಾಗಿರುವುದನ್ನು ಕಾಣಬಹುದು. 2013ರಲ್ಲಿ ಸಂದರ್ಶನವೊಂದರಲ್ಲಿ ಅನುಷ್ಕಾ ಶರ್ಮಾ(Anushka Sharma), 'ನಾನು ಮತ್ತು ಸಾಕ್ಷಿ ಅಸ್ಸಾಂನ ಚಿಕ್ಕ ಪಟ್ಟಣದಲ್ಲಿ ಒಟ್ಟಿಗೆ ವಾಸಿಸುತ್ತಿದ್ದೆವು ಎಂದು ತಿಳಿಸಿದ್ದರು. 

 

ಇದನ್ನೂ ಓದಿ : ವಿಕ್ಕಿ ಕತ್ರೀನಾ ಮದುವೆಯ ಬಗ್ಗೆ ಸಲ್ಮಾನ್ ತಂದೆ ಸಲೀಂ ಖಾನ್ ನೀಡಿದ ಪ್ರತಿಕ್ರಿಯಿಂದ ಬೇಸರಗೊಂಡ ಅಭಿಮಾನಿಗಳು

ಬಾಲ್ಯದ ಫೋಟೋ ವೈರಲ್ :


ಸಾಕ್ಷಿ ಧೋನಿ (Sakshi Dhoni) ಮತ್ತು ಅನುಷ್ಕಾ ಶರ್ಮಾ ಶಾಲೆಯ ಗ್ರೂಪ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Social media viral) ಆಗಿವೆ.  ಇದರಲ್ಲಿ ಅನುಷ್ಕಾ ಮತ್ತು ಸಾಕ್ಷಿ ಬಾಲ್ಯದ ಫೋಟೋಗಳನ್ನು ಕಾಣಬಹುದು. ಅನುಷ್ಕಾ ಗುಲಾಬಿ ಬಣ್ಣದ ಲೆಹೆಂಗಾ-ಚುನ್ನಿಯಲ್ಲಿ ಕಾಣಿಸಿಕೊಂಡರೆ, ಮತ್ತೊಂದೆಡೆ, ಸಾಕ್ಷಿ ನಕ್ಷತ್ರದ ಉಡುಗೆಯನ್ನು ಧರಿಸಿದ್ದಾರೆ.

ಇನ್ನು ಕೆಲವು ಫೋಟೋಗಳಲ್ಲಿ ಇಬ್ಬರೂ, ತಮ್ಮ ಸ್ನೇಹಿತರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಾಕ್ಷಿ ಮತ್ತು ಅನುಷ್ಕಾ ತಮ್ಮ ಸ್ನೇಹಿತರೊಂದಿಗೆ ಪೋಸ್ ನೀಡುತ್ತಿದ್ದಾರೆ. ಇಂದು ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಸಂತೋಷವಾಗಿದ್ದಾರೆ. ಇಬ್ಬರಿಗೂ ಒಬ್ಬ ಹೆಣ್ಣು ಮಗಳಿದ್ದಾಳೆ. ಅನುಷ್ಕಾ ಮಗಳ ಹೆಸರು ವಾಮಿಕಾ. ಸಾಕ್ಷಿ ಮಗಳ ಹೆಸರು ಜೀವಾ ಧೋನಿ.

ಇದನ್ನೂ ಓದಿ : Pooja Hegde: ಮೊನೊಕಿನಿ ಧರಿಸಿ ಡ್ಯಾನ್ಸ್ ಮಾಡಿದ ಪೂಜಾ ಹೆಗ್ಡೆ.. ಹೆಚ್ಚಾದ ಅಭಿಮಾನಿಗಳ ಎದೆಬಡಿತ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News