ʼಆಗ ನಾನು...ʼ ಕ್ಯಾಮರಾ ಮುಂದೆ ಕಹಿ ಸತ್ಯ ಬಹಿರಂಗಪಡಿಸಿದ ಅನುಷ್ಕಾ ಶರ್ಮಾ!

 Anushka Sharma revealed the bitter truth: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬಾಲಿವುಡ್ ಜನಪ್ರಿಯ ನಟಿಯರಲ್ಲಿ ಒಬ್ಬರು. ಅವರು ತಮ್ಮ ವೃತ್ತಿಜೀವನದಲ್ಲಿ ಎಲ್ಲಾ ದೊಡ್ಡ ಸೂಪರ್‌ಸ್ಟಾರ್‌ಗಳೊಂದಿಗೆ ಕೆಲಸ ಮಾಡಿ, ಅನೇಕ ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 

Written by - Savita M B | Last Updated : Jul 21, 2024, 09:29 AM IST
  • ಒಮ್ಮೆ ಕ್ಯಾಮೆರಾ ಮುಂದೆ ಒಪ್ಪಿಕೊಂಡಿದ್ದು ಕೆಲವೇ ಜನರಿಗೆ ಗೊತ್ತಿರಬಹುದು.
  • ನಾನು ನಿಜವಾಗಿಯೂ ನನ್ನನ್ನು ನಾನೇ ಶ್ರೇಷ್ಠ ಎಂದು ಪರಿಗಣಿಸುತ್ತಿದ್ದೆ
ʼಆಗ ನಾನು...ʼ ಕ್ಯಾಮರಾ ಮುಂದೆ ಕಹಿ ಸತ್ಯ ಬಹಿರಂಗಪಡಿಸಿದ ಅನುಷ್ಕಾ ಶರ್ಮಾ! title=

 Anushka Sharma: ಅನುಷ್ಕಾ ಶರ್ಮಾ ಕೇವಲ 20 ನೇ ವಯಸ್ಸಿನಲ್ಲಿ ನಿರ್ಮಾಪಕ ಆದಿತ್ಯ ಚೋಪ್ರಾ ಅವರ 'ರಬ್ ನೆ ಬನಾ ದಿ ಜೋಡಿ' ಚಿತ್ರದೊಂದಿಗೆ ಬಾಲಿವುಡ್ ಪ್ರವೇಶಿಸಿದರು, ಇದು ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಯಿತು. ಆದರೆ ನಟಿಯಾಗುವ ಮುನ್ನ ಅನುಷ್ಕಾ ತುಂಬಾ ದುರಹಂಕಾರಿ ಎಂದು ಒಮ್ಮೆ ಕ್ಯಾಮೆರಾ ಮುಂದೆ ಒಪ್ಪಿಕೊಂಡಿದ್ದು ಕೆಲವೇ ಜನರಿಗೆ ಗೊತ್ತಿರಬಹುದು.

ಹಲವು ವರ್ಷಗಳ ಹಿಂದೆ, ಕೋಯೆಲ್ ಪುರಿ ಅವರೊಂದಿಗಿನ ಸಂದರ್ಶನದಲ್ಲಿ, ಅನುಷ್ಕಾ ಶರ್ಮಾ ಅವರು ಮಾಡಿದ ಅತ್ಯಂತ ದುರಹಂಕಾರದ ಕೆಲಸ ಯಾವುದು ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನಟಿ, "ನಟಿಯಾಗುವ ಮುನ್ನ ನಾನು ತುಂಬಾ ದುರಹಂಕಾರಿಯಾಗಿದ್ದೆ... ಶಾಲೆ ಮತ್ತು ಇತರ ಸ್ಥಳಗಳಲ್ಲಿ ನಾನು ಜನರೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ನಾನು ನಿಜವಾಗಿಯೂ ನನ್ನನ್ನು ನಾನೇ ಶ್ರೇಷ್ಠ ಎಂದು ಪರಿಗಣಿಸುತ್ತಿದ್ದೆ" ಎಂದು ಹೇಳಿದ್ರು.. 

ಇದನ್ನೂ ಓದಿ-ಈ ಖ್ಯಾತ ವ್ಯಕ್ತಿಯೊಂದಿಗೆ ಐಶ್ವರ್ಯಾ ರೈ ಸಂಬಂಧ?.. ಅಭಿಷೇಕ್‌ ಬಚ್ಚನ್‌ ಜೊತೆ ವಿಚ್ಛೇದನ ಖಚಿತ?!

ಅಲ್ಲದೇ "ನಟಿಯಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಯಾಕೆಂದರೆ ನಟಿಯಾದ ನಂತರ ನಾನು ಆದಿತ್ಯ ಚೋಪ್ರಾ ಅವರಿಂದ ರಿಯಾಲಿಟಿ ಏನೆಂದು ತಿಳಿದುಕೊಂಡೆ... ನೀವು ಸಿನಿಮಾ ಮಾಡುತ್ತಿದ್ದೀರಿ, ಆದರೆ ಬೆಸ್ಟ್ ಲುಕಿಂಗ್ ಹುಡುಗಿ ಅಲ್ಲ ಎಂದಿದ್ದರು... ಅಲ್ಲಿಯವರೆಗೂ ನಾನೇ ಅತ್ಯಂತ ಸೌಂದರ್ಯವತಿ ಎಂದು ಭಾವಿಸಿದ್ದೆ" ಎಂದು ಅನುಷ್ಕಾ ತಮ್ಮ ಬಗ್ಗೆ ತಾವೇ ಹೇಳಿಕೊಂಡಿದ್ದರು.. 

ಅನುಷ್ಕಾ ಶರ್ಮಾ ಅವರು ಅಮೀರ್ ಖಾನ್ ಅವರೊಂದಿಗೆ 'ಬ್ಯಾಂಡ್ ಬಾಜಾ ಬಾರಾತ್', ಸಲ್ಮಾನ್ ಖಾನ್ ಅವರ ಬ್ಲಾಕ್ ಬಸ್ಟರ್ 'ಸುಲ್ತಾನ್' ಮತ್ತು 'ಪಿಕೆ' ಯಂತಹ ಉತ್ತಮ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅನುಷ್ಕಾ ಶರ್ಮಾ ಅವರ ಕೊನೆಯ ಚಿತ್ರ 'ಝೀರೋ', ಇದರಲ್ಲಿ ಅವರು ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಕೆಲಸ ಮಾಡಿದರು. ಆದರೆ ಈ ಸಿನಿಮಾ ಅಷ್ಟಾಗಿ ಯಶಸ್ಸು ಕಾಣಲಿಲ್ಲ.. ಅಂದಿನಿಂದ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಈಗ ಅನುಷ್ಕಾ ಶರ್ಮಾ 'ಚಕ್ಡಾ ಎಕ್ಸ್‌ಪ್ರೆಸ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದರ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ-ನೀವು ಎಂದಾದರೂ ವಿಶ್ವದ ಅತಿ ದೊಡ್ಡ ಚಿನ್ನದ ಉಂಗರ ನೋಡಿದ್ದಿರಾ? ಅದರ ತೂಕ ಮತ್ತು ಬೆಲೆ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News