Baahubali statue in Mysore wax museum : ಫ್ಯಾನ್ಸ್ಗಳು ತಮ್ಮ ನೆಚ್ಚಿನ ತಾರೆಯರ ಸ್ಟ್ಯಾಚುಗಳನ್ನು ಮಾಡಿಸೋದು ಸಹಜ. ಇನ್ನೂ ಕೆಲವು ಅಭಿಮಾನಿಗಳು ತಮ್ಮ ಸ್ಟಾರ್ಗಾಗಿ ದೇವಸ್ಥಾನವನ್ನು ಸಹ ಕಟ್ಟಿಸುವುದು ದಕ್ಷಿಣ ಭಾರತದಲ್ಲಿ ಕಾಮನ್.
ಹಾಗೆ ಎಲ್ಲಾ ಫೇಮಸ್ ಸೌತ್ ಸ್ಟಾರ್ಗಳ ಪ್ರತಿಮೆಯನ್ನು ನೋಡಬೇಕೆಂದುಕೊಂಡಿದ್ದರೆ, ಅದನ್ನು ಕಣ್ಣು ತುಂಬಿಕೊಳ್ಳಲು ಮೈಸೂರನಲ್ಲಿರುವ ವ್ಯಾಕ್ಸ್ ಮೂಸಿಯಂಗೆ ಹೋಗಬೇಕು. ಆ ಮ್ಯೂಸಿಯಂನಲ್ಲಿ ರಾಜ್ಕುಮಾರ್, ಶಂಕರ್ನಾಗ್, ರಜನಿಕಾಂತ್, ವಿಷ್ಣುವರ್ಧನ್, ಪುನೀತ್ ರಾಜ್ಕುಮಾರ್, ಅಮಿತಾ ಬಚ್ಚನ್ ಸೇರಿದಂತೆ ಹಲವಾರು ಕಲಾವಿದರ ಮೇಣದ ಪ್ರತಿಮೆಗಳನ್ನು ಕಾಣಬಹುದಾಗಿದೆ.
ಇದನ್ನು ಓದಿ - ಫೋಟೋಸ್ ವೈರಲ್ : ಹಸಿರು ಸೀರೆಯಲ್ಲಿ ʼನಾಗಿಣಿ 2ʼ ಖ್ಯಾತಿಯ ನಮೃತಾ ಗೌಡ
ಸಾಮಾನ್ಯವಾಗಿ ಯಾರಾದರೂ ತಮ್ಮ ಫೇವರೆಟ್ ಸ್ಟಾರ್ ಪಬ್ಲಿಕ್ನಲ್ಲಿ ಕಾಣಿಸಿಕೊಂಡರೆ, ಫೋಟೋ ಅಥವಾ ಸೆಲ್ಫಿ ತೆಗೆಸಿಕೊಳ್ಳಲು ಫ್ಯಾನ್ಸ್ ಮುಗಿಬೀಳುತ್ತಾರೆ. ಅದೃಷ್ಟ ಒದಗಿದವರಿಗೆ ಮಾತ್ರ ಇದು ಸಾಧ್ಯವಾಗುತ್ತದೆ. ಆ ಆಸೆಯನ್ನು ಈಡೇರಿಸಿಕೊಳ್ಳಲು ಜನರು ಮೂಸಿಯಂಗೆ ಹೋಗಿ ಸೆಲೆಬ್ರಟಿಗಳ ಮೇಣದ ಪ್ರತಿಮೆ ಜೊತೆ ಫೋಟೋ ತೆಗೆಸಿಕೊಂಡು ಸಂತಸ ಪಡುತ್ತಿದ್ದಾರೆ.
ಸದ್ಯಕ್ಕೆ ವಿಷಯ ಏನಂದ್ರೆ, ಮೈಸೂರಿನ ವ್ಯಾಕ್ಸ್ ಮ್ಯೂಸಿಯಂನಲ್ಲಿ ಪ್ರಭಾಸ್ ಮೇಣದ ಪ್ರತಿಮೆಯನ್ನು ತಯಾರಿಸಿ ಇಟ್ಟಿದ್ದು, ಅದರ ಫೋಟೋಗಳು ವೈರಲ್ ಆಗುತ್ತಿವೆ. ಇದಕ್ಕೆ ಬಾಹುಬಲಿ ಸಿನಿಮಾದ ನಿರ್ಮಾಪಕ ಶೋಬು ಗರಂ ಆಗಿದ್ದಾರೆ ಎನ್ನುವುದೇ ಮೇನ್ ಮ್ಯಾಟರ್.
This not an officially licensed work and was done without our permission or knowledge. We will be taking immediate steps to get this removed. https://t.co/1SDRXdgdpi
— Shobu Yarlagadda (@Shobu_) September 25, 2023
ಪ್ರಭಾಸ್ ನಟನೆಯ ʼಬಾಹುಬಲಿʼ ಸಿನಿಮಾ ಬಹುದೊಡ್ಡ ದಾಖಲೆಯನ್ನೇ ಬರೆದಿದೆ. ಯುಕೆಯ ಲಂಡನ್ನ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಪ್ರಭಾಸ್ 'ಬಾಹುಬಲಿ' ಲುಕ್ ಮೇಣದ ಪ್ರತಿಮೆ ನಿರ್ಮಿಸಲಾಗಿದೆ. ಆ ಮ್ಯೂಸಿಯಂನಲ್ಲಿ ಪ್ರತಿಮೆ ನಿರ್ಮಾಣವನ್ನು ಎಲ್ಲರೂ ಪ್ರತಿಷ್ಠೆಯಾಗಿ ಭಾವಿಸುತ್ತಾರೆ. ಅಲ್ಲಿಯ ಮ್ಯೂಸಿಯಂನಲ್ಲಿ ಸಹಜವಾಗಿ ಬಾಲಿವುಡ್ ಸ್ಟಾರ್ಸ ಪ್ರತಿಮೆ ರಾರಾಜಿಸುತ್ತರುತ್ತದೆ. ಆದರೆ ಇತ್ತೀಚಿಗೆ ಸೌತ್ ಸ್ಟಾರ್ಗಳ ಪ್ರತಿಮೆ ಸಹ ಇರಿಸುತ್ತಿದ್ದಾರೆ.
ಇದನ್ನು ಓದಿ - ನಾಗಚೈತನ್ಯ ಜೊತೆ ಮದುವೆ ಆಗೋದೇ ನನ್ನ ಟಾರ್ಗೆಟ್ ಎಂದ ನಟಿ
ಸದ್ಯ ಮೈಸೂರಿನಲ್ಲಿರುವ ವ್ಯಾಕ್ಸ್ ಮ್ಯೂಸಿಯಂನಲ್ಲಿ ಬಾಹುಬಲಿಯ ಲುಕ್ನಲ್ಲಿ ಇರುವ ಪ್ರಭಾಸ್ ಪ್ರತಿಮೆಯ ಪೋಟೋ ವೈರಲ್ ಆಗಿದೆ. ಪ್ರತಿಮೆ ನೋಡಲು ಬಾಹುಬಲಿ ರೀತಿಯಲ್ಲೇ ಇದ್ದರೂ ಅದು ಪ್ರಭಾಸ್ ಲುಕ್ಗೆ ಹೊಂದುವುದಿಲ್ಲ. ಆ ಪ್ರತಿಮೆ ನೋಡಲು ಕ್ರಿಕೆಟಿಗ ಡೇವಿಡ್ ವಾರ್ನರ್ ರೀತಿ ಇದೆಯೆಂದು ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇದರಿಂದ ಬಾಹುಬಲಿಯ ನಿರ್ಮಾಪಕ ಶೋಬೋ ಯರ್ಲಗಡ್ಡ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಟ್ವೀಟ್ ಸಹ ಮಾಡಿದ್ದಾರೆ.
ಬಾಹುಬಲಿ ನಿರ್ಮಾಪಕ ಶೋಬೋ ಕೋಪದಲ್ಲಿ "ಇದು ಅಧಿಕೃತವಾಗಿ ಲೈಸೆನ್ಸ್ ಪಡೆದು ಮಾಡಿರುವುದಲ್ಲ ಹಾಗೂ ನಮ್ಮ ಅನುಮತಿ ಅಥವಾ ನಮ್ಮ ಗಮನಕ್ಕೂ ತರದೇ ಮಾಡಲಾಗಿದೆ. ಇದನ್ನು ತೆಗೆದುಹಾಕಲು ನಾವು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು X ಖಾತೆಯಲ್ಲಿ (ಹಿಂದೆ ಟ್ವಿಟರ್) ಬರೆದುಕೊಂಡಿದ್ದಾರೆ. ಅದಕ್ಕೆ ಆ ಮ್ಯೂಸಿಯಂನ ಮಾಲೀಕರಾದ ಭಾಸ್ಕರ್ ಅವರು "ನಿರ್ಮಾಪಕರು ಆ ಪ್ರತಿಮೆ ಮೇಲೆ ಆಕೋಶ ಹೊರಹಾಕಿದ್ದಾರೆ. ನಾವು ಯಾರ ಭಾವನೆಗಳಿಗೂ ನೋವು ಮಾಡುವುದಿಲ್ಲ. ಅ ಬಾಹುಬಲಿಯ ಪ್ರತಿಮೆಯನ್ನು ತೆಗೆಯುತ್ತೇವೆ", ಎಂದು ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=q9auZ2eqeZo
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.