B-Town News: ಒಂದು ಕಾಲದಲ್ಲಿ ಮುಂಬೈನ ಬೀದಿಗಳಲ್ಲಿ ಮಲಗುತ್ತಿದ್ದ ಈ ಸೂಪರ್ ಸ್ಟಾರ್, ಇಂದು ಆತನ ಫ್ಲಾಪ್ ಚಿತ್ರ ಕೂಡ 100 ಕೋಟಿ ಗಳಿಕೆ ಮಾಡುತ್ತೆ!

King Khan: ಇಂದು ನಾವು ಈ ಸೂಪರ್ ಸ್ಟಾರ್ ನ ಒಂದು ನೋಟ ನೋಡಲು ಆತನ ಮನೆಯ ಹೊರಗೆ ಅಭಿಮಾನಿಗಳ ದಂಡೆ ನೆರೆಯುವ ಓರ್ವ ಸ್ಟಾರ್ ಬಗ್ಗೆ ಮಾತನಾಡುತ್ತಿದ್ದೇವೆ. ಆತ ಸ್ವತಃ ಒಂದು ಲುಕ್ ನೀಡಿದರೆ ಸಾಕು, ಸಾವಿರಾರು ಅಭಿಮಾನಿಗಳ ಮುಖಗಳ ಮೇಲೆ ಮಂದಹಾಸ ಮೂಡುತ್ತದೆ. ಆದರೆ ಆತನಿಗೆ ಮುಂಬೈನಲ್ಲಿ ಮಲಗಲು ತಲೆಗೆ ಸೂರು ಇಲ್ಲದ ಕಾಲವೊಂದಿತ್ತು. (Bollywood News In Kannada)  

Written by - Nitin Tabib | Last Updated : Jan 25, 2024, 09:45 PM IST
  • ಶಾರುಖ್ ಖಾನ್ ಅವರ ಜನಪ್ರಿಯತೆ ಎಷ್ಟಿದೆಯೆಂದರೆ ಅವರ ಸರಾಸರಿ ಚಿತ್ರ ಕೂಡ ಕನಿಷ್ಠ 100 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡುತ್ತದೆ.
  • ವರದಿಗಳನ್ನು ನಂಬುವುದಾದರೆ, ಶಾರುಖ್ ಖಾನ್ ತಮ್ಮ ಮುಂದಿನ ಚಿತ್ರವನ್ನು ಮಗಳು ಸುಹಾನಾ ಜೊತೆ ಮಾಡಲಿದ್ದಾರೆ.
  • ಕಿಂಗ್ ಖಾನ್ ಅವರ ಪುತ್ರಿ ಸುಹಾನಾ 'ದಿ ಆರ್ಚೀಸ್' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಆದರೆ, ಚಿತ್ರಕ್ಕೆ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿಲ್ಲ.
B-Town News: ಒಂದು ಕಾಲದಲ್ಲಿ ಮುಂಬೈನ ಬೀದಿಗಳಲ್ಲಿ ಮಲಗುತ್ತಿದ್ದ ಈ ಸೂಪರ್ ಸ್ಟಾರ್, ಇಂದು ಆತನ ಫ್ಲಾಪ್ ಚಿತ್ರ ಕೂಡ 100 ಕೋಟಿ ಗಳಿಕೆ ಮಾಡುತ್ತೆ! title=

Sharukh Khan: ಸಾಮಾನ್ಯವಾಗಿ ಜನರು ದೊಡ್ಡ ಕನಸುಗಳನ್ನು ಕಾಣುತ್ತಾರೆ ಆದರೆ ಅದನ್ನು ಈಡೇರಿಸುವ ಶಕ್ತಿ ಎಲ್ಲರಿಗೂ ಇರುವುದಿಲ್ಲ. ಆದರೆ, ಬಾಲಿವುಡ್‌ನಲ್ಲಿ ಒಬ್ಬ ಸ್ಟಾರ್ ನಟನಿದ್ದಾನೆ, ಆತನ ಒಂದು ಎವರೆಜ್  ಚಿತ್ರ ಇಂದು 100 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸುತ್ತದೆ. ಆದರೆ ಆತನಿಗೆ ಬಲವಂತವಾಗಿ ಮುಂಬೈನ ಬೀದಿಗಳಲ್ಲಿ ಮಲಗಬೇಕಾದ ಕಾಲ ಕೂಡ ಇತ್ತು, ಆ ನಟ ಯಾರು ಗೊತ್ತಾ? (Bollywood News In Kannada)

ವರ್ಷಗಳ ಹಿಂದೆ ನಾನು ರಾಜನಾಗುವ ಕನಸು ಕಂಡೆ.
ಈ ನಟ ಬೇರೆ ಯಾರೂ ಅಲ್ಲ ಶಾರುಖ್ ಖಾನ್. ಶಾರುಖ್ ಖಾನ್ ಅವರ ದರ್ಶನ ಪಡೆಯಲು ಅಭಿಮಾನಿಗಳು ಅವರ ಮನೆಮುಂದೆ ದಿನಗಳೆ ವಾಸಿಸುತ್ತಾರೆ. ಹಲವು ವರ್ಷಗಳ ಹಿಂದೆ, ಸಂದರ್ಶನವೊಂದರಲ್ಲಿ, ಕಿಂಗ್ ಖಾನ್ ಮುಂಬೈನಲ್ಲಿ ವಾಸಿಸಲು ತಲೆಯ ಮೇಲೆ ಸೂರು ಕೂಡ ಇರಲಿಲ್ಲ ಮತ್ತು ಬೀದಿಯಲ್ಲಿ ಮಲಗಬೇಕಾದ ಕಾಲವೊಂದಿತ್ತು ಎಂದು ಹೇಳಿದ್ದಾರೆ. ಆಗ ಸಮುದ್ರವನ್ನು ನೋಡುತ್ತಾ ಮುಂದೊಂದು ದಿನ ಮುಂಬೈಗೆ ರಾಜನಾಗುತ್ತೇನೆ ಎಂದು ತನ್ನಷ್ಟಕ್ಕೆ ತಾನೇ ಮಾತು ಕೊಟ್ಟಿದ್ದೆ ಎಂದಿದ್ದರು. ಹಲವು ವರ್ಷಗಳ ಪರಿಶ್ರಮದ ನಂತರ ಶಾರುಖ್ ಖಾನ್ ಅವರ ಈ ಕನಸು ನನಸಾಗಿದ್ದು, ಬಾಲಿವುಡ್ ನ ಕಿಂಗ್ ಖಾನ್ ಆಗುವ ಮೂಲಕ ಹಲವು ವರ್ಷಗಳಿಂದ ಚಿತ್ರರಂಗವನ್ನು ಆಳುತ್ತಿದ್ದಾರೆ.

ಇದನ್ನೂ ಓದಿ-Viral Video: ಜೆಸಿಬಿ ಮೇಲೆ ಕುಳಿತು ಮದುವೆ ಮಂಟಪಕ್ಕೆ ವರನ ಎಂಟ್ರಿ, 'ಇದ್ಯಾವ ಪದ್ಧತಿ ಬ್ರೋ' ಎಂದ ನೆಟ್ಟಿಗರು
 
50ರ ಹರೆಯದಲ್ಲಿ 3 ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ
ಶಾರುಖ್ ಖಾನ್ ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಸಾಲಲ್ಲಿರಿಸಿದ್ದಾರೆ. 'ಕಿಂಗ್ ಖಾನ್' ಕಳೆದ ವರ್ಷ 'ಪಠಾಣ್' ಚಿತ್ರದ ಮೂಲಕ ತಮ್ಮ ವರ್ಷವನ್ನು ಆರಂಭಿಸಿದ್ದರು. ಇದರ ನಂತರ ಅವರು 'ಜವಾನ್' ಮತ್ತು ನಂತರ 'ಡಂಕಿ' ಮೂಲಕ ತಮ್ಮ ಹ್ಯಾಟ್ರಿಕ್ ಪೂರ್ಣಗೊಳಿಸಿದ್ದಾರೆ. ಈ ಮೂರು ಚಿತ್ರಗಳು ಗಲ್ಲಾಪೆಟ್ಟಿಗೆಯನ್ನು ಭಾರಿ ಕೊಳ್ಳೆ ಹೊಡೆಯುವುದು ಮಾತ್ರವಲ್ಲದೆ ಶಾರುಖ್ ಅವರು ಇನ್ನೂ ಉದ್ಯಮವನ್ನು ಆಳುತ್ತಿದ್ದಾರೆ ಎಂಬುದನ್ನು ಸಾಬೀತುಪಡಿಸಿವೆ.

ಇದನ್ನೂ ಓದಿ-Viral Video: ಬೈಕ್ ಮೇಲೆ ಮೈ ಕೊರೆಯೋ ಚಳಿಯಿಂದ ಪಾರಾಗಲು ಮಹಿಳೆ ಮಾಡಿದ ಈ ಉಪಾಯ...! ವಿಡಿಯೋ ನೋಡಿ

ಒಂದು ಚಿತ್ರ ಕೋಟಿ ಕೋಟಿ ಗಳಿಸುತ್ತದೆ
ಶಾರುಖ್ ಖಾನ್ ಅವರ ಜನಪ್ರಿಯತೆ ಎಷ್ಟಿದೆಯೆಂದರೆ ಅವರ ಸರಾಸರಿ ಚಿತ್ರ ಕೂಡ ಕನಿಷ್ಠ 100 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡುತ್ತದೆ. ವರದಿಗಳನ್ನು ನಂಬುವುದಾದರೆ, ಶಾರುಖ್ ಖಾನ್ ತಮ್ಮ ಮುಂದಿನ ಚಿತ್ರವನ್ನು ಮಗಳು ಸುಹಾನಾ ಜೊತೆ ಮಾಡಲಿದ್ದಾರೆ. ಕಿಂಗ್ ಖಾನ್ ಅವರ ಪುತ್ರಿ ಸುಹಾನಾ 'ದಿ ಆರ್ಚೀಸ್' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಆದರೆ, ಚಿತ್ರಕ್ಕೆ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News