ಏನಮ್ಮಿ ಏನಮ್ಮಿ ಎಂದ 'ಅಯೋಗ್ಯ' ನ ಹಾಡಿಗೆ ಯುಟ್ಯೂಬ್ ನಲ್ಲಿ ಫುಲ್ ಡಿಮ್ಯಾಂಡ್ !

   

Last Updated : Jul 17, 2018, 08:47 PM IST
ಏನಮ್ಮಿ ಏನಮ್ಮಿ ಎಂದ 'ಅಯೋಗ್ಯ' ನ ಹಾಡಿಗೆ ಯುಟ್ಯೂಬ್ ನಲ್ಲಿ ಫುಲ್ ಡಿಮ್ಯಾಂಡ್ ! title=
Photo courtesy:Facebook

ಬೆಂಗಳೂರು: ನೀನಾಸಂ ಸತೀಸ್ ರಂಗಭೂಮಿಯಿಂದ ಸಿನಿಮಾಗೆ ಬಂದ ಅಪ್ಪಟ ದೇಶೀ ಪ್ರತಿಭೆ. ಇವರ ನಟನೆಯಲ್ಲಿರುವ ನೈಜತೆಯಿಂದಲೇ ಕನ್ನಡ ಚಿತ್ರ ರಸಿಕರ ಮನದಲ್ಲಿ ತಮ್ಮ ಮೊಹರನ್ನು ಒತ್ತಿದ್ದಾರೆ,ಈಗ ಅವರ ಬಹು ನಿರೀಕ್ಷಿತ ಚಿತ್ರ ಅಯೋಗ್ಯದ ಹಾಡುಗಳು ಈಗ ಯೂಟ್ಯೂಬ್ ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿವೆ.

ಅದರಲ್ಲೂ  ಭರ್ಜರಿ ಚೇತನ್ ಕುಮಾರ್  ರಚಿಸಿ ವಿಜಯ ಪ್ರಕಾಶ್  ಮತ್ತು ಪಾಲಕ್ ಮುಚ್ಚಾಲ್ ಹಾಡಿರುವ  ಏನಮ್ಮಿ ಏನಮ್ಮಿ ಹಾಡಂತೂ ಈಗ ಯ್ಯೂಟೂಬ್ ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಜುಲೈ 8 ರಂದು ಬಿಡುಗಡೆಯಾಗಿರುವ ಲಿರಿಕಲ್ ವೀಡಿಯೋ ಸಾಂಗ್ ಈಗಾಗಲೇ 10 ಲಕ್ಷಕ್ಕೂ ಅಧಿಕ ಬಾರಿ ಯೂಟ್ಯೂಬ್ ನಲ್ಲಿ ವಿಕ್ಷಿಸಲಾಗಿದೆ. ಅರ್ಜುನ್ ಜನ್ಯಾ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಈ ಹಾಡಂತೂ ನಿಜಕ್ಕೂ ಎಲ್ಲರ ಮನದಲ್ಲಿ ಗುನಗುನಿಸುವಂತಿದೆ.

ಆಗಷ್ಟ್  ಮೊದಲ ವಾರದಲ್ಲಿ ಬಿಡುಗಡೆ ಯಾಗುತ್ತಿರುವ ಅಯೋಗ್ಯನಿಗೆ ಈ ಹಾಡಂತೂ ಈಗ ಭರ್ಜರಿಯಾಗಿ ಪೀಠಿಕೆ ಹಾಕಿದೆ ಎಂದು ಹೇಳಬಹುದು. ಹಳ್ಳಿ ಸೊಗಡಿನ ಕಥಾ ಹಂದರವನ್ನು ಹೊಂದಿರುವ ಈ ಅಯೋಗ್ಯ ಮತ್ತೆ ಸ್ಯಾಂಡಲ್ ವುಡ್ ಲ್ಲಿ ತನ್ನ ನಟನೆಯ ಹೂರಣವನ್ನು ಬಡಿಸಲಿದ್ದಾನೆ ಎನ್ನಬಹುದು.
 

Trending News