ಜನ್ಮದಿನದಂದೇ 'ವೀರ್'ನಾಗಿ ಜೆಕೆ ಎಂಟ್ರಿ… ಹೇಗಿದೆ ಮೋಷನ್ ಪೋಸ್ಟರ್..?

The Veer Motion Poster: ಕಾರ್ತಿಕ್ ಜಯರಾಮ್/ಜೆಕೆ ಹೊಸ ಸಿನಿಮಾಗೆ 'ವೀರ್' ಎಂಬ ಕ್ಯಾಚಿ ಹೆಸರಿಡಲಾಗಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ 'ವೀರ್' ಚಿತ್ರಕ್ಕೆ ಯುವ ಪ್ರತಿಭೆ ಲೋಹಿತ್ ಆರ್ ನಾಯ್ಕ್ ಆಕ್ಷನ್ ಕಟ್ ಹೇಳಿದ್ದಾರೆ. ಗಮನಾರ್ಹವಾಗಿ ಲೋಹಿತ್ ಅವರಿಗಿದು ಚೊಚ್ಚಲ ಸಿನಿಮಾ. 

Written by - Yashaswini V | Last Updated : May 2, 2024, 09:24 AM IST
  • ಕಾರ್ತಿಕ್ ಜಯರಾಮ್ ಅಭಿನಯದ ವೀರ್ ಸಿನಿಮಾ ಮೂಲಕ ಲೋಹಿತ್ ನಿರ್ದೇಶಕರಾಗಿ ದಾಪುಗಾಲಿಡುತ್ತಿದ್ದಾರೆ.
  • ಹರಿ ಸಂತು ಗರಡಿಯಲ್ಲಿ ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಅನುಭವ ಹೊಂದಿರುವ ಲೋಹಿತ್
  • ವೀರ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಅದೃಷ್ಟ ಪರೀಕ್ಷಿಸುತ್ತಿದ್ದಾರೆ.
ಜನ್ಮದಿನದಂದೇ  'ವೀರ್'ನಾಗಿ ಜೆಕೆ ಎಂಟ್ರಿ… ಹೇಗಿದೆ ಮೋಷನ್ ಪೋಸ್ಟರ್..? title=

The Veer Motion Poster: ಕನ್ನಡದ ಪ್ರತಿಭಾನ್ವಿತ ನಟ ಜೆಕೆ ಉರುಫ್ ಜಯರಾಮ್  ಕಾರ್ತಿಕ್ ನಿನ್ನೆಯಷ್ಟೇ (ಮೇ 01) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿ  ಜೆಕೆ ಎಂತಲೇ ಖ್ಯಾತಿ ಪಡೆದಿರೂವ ಕಾರ್ತಿಕ್ ಜಯರಾಮ್ (Karthik Jayaram), ಆ ಬಳಿಕ ಬೆಳ್ಳಿತೆರೆಯತ್ತ ಮುಖ ಮಾಡಿದ್ದರು. ಹಲವು ಸಿನಿಮಾಗಳ ಮೂಲಕ ಕನ್ನಡ ಸಿನಿರಸಿಕರಿಂದಲೂ ಪ್ರೀತಿ ಪಡೆದಿರುವ ಕಾರ್ತಿಕ್ ಜಯರಾಮ್ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಮೇ 01ರಂದು ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಕಾರ್ತಿಕ್ ಜಯರಾಮ್/ಜೆಕೆ (Karthik Jayaram) ಹೊಸ ಸಿನಿಮಾಗೆ 'ವೀರ್' ಎಂಬ ಕ್ಯಾಚಿ ಹೆಸರಿಡಲಾಗಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ 'ವೀರ್' ಚಿತ್ರಕ್ಕೆ ಯುವ ಪ್ರತಿಭೆ ಲೋಹಿತ್ ಆರ್ ನಾಯ್ಕ್ ಆಕ್ಷನ್ ಕಟ್ ಹೇಳಿದ್ದಾರೆ. ಗಮನಾರ್ಹವಾಗಿ ಲೋಹಿತ್ ಅವರಿಗಿದು ಚೊಚ್ಚಲ ಸಿನಿಮಾ. 

ಇದನ್ನೂ ಓದಿ- ಪುಷ್ಪ..ಪುಷ್ಪ…ಬಂದ ಪುಷ್ಪರಾಜ್..ಕಾರ್ಮಿಕರ ದಿನಕ್ಕೆ ಪುಷ್ಪ 2 ಮೊದಲ ಹಾಡು ರಿಲೀಸ್

ಹೌದು, ಕಾರ್ತಿಕ್ ಜಯರಾಮ್ ಅಭಿನಯದ ವೀರ್ ಸಿನಿಮಾ (Veer Movie) ಮೂಲಕ ಲೋಹಿತ್ ನಿರ್ದೇಶಕರಾಗಿ ದಾಪುಗಾಲಿಡುತ್ತಿದ್ದಾರೆ. ಹರಿ ಸಂತು ಗರಡಿಯಲ್ಲಿ ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಅನುಭವ ಹೊಂದಿರುವ  ಲೋಹಿತ್ ವೀರ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. 

ಇದನ್ನೂ ಓದಿ- Actress Sudharani: ಚೆಂದನವನದ ನಟಿ ಸುಧಾರಾಣಿ ಮೊದಲ ಗಂಡನ ವಿಕೃತಿಯಿಂದ ಪಾರು ಮಾಡಿದ್ದು ಈ ಇಬ್ಬರು!!

ವೀರ್ ಸಿನಿಮಾದಲ್ಲಿ ಜೆಕೆಗೆ ಜೋಡಿಯಾಗಿ ಪ್ರಣತಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರೋಚಿತ್,  ಮಂಜು ಪಾವಗಡ ತಾರಾಬಳಗದಲ್ಲಿದ್ದಾರೆ. ಚಿತ್ರದಲ್ಲಿ ಕಾರ್ತಿಕ್ ಜಯರಾಮ್ (ಜೆ‌ಕೆ) ಮೂಗನ ಪಾತ್ರಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ವೀರ್ ಸಿನಿಮಾವನ್ನು ರಾಜರಾಜೇಶ್ವರಿ ಪ್ರೊಡಕ್ಷನ್ ನಡಿ ಗೀತಾ ಜಯಶ್ರೀನಿವಾಸನ್ ಬಂಡವಾಳ ಹೂಡುತ್ತಿದ್ದಾರೆ. ಆರ್ ದೇವೇಂದ್ರ ಛಾಯಾಗ್ರಹಣ, ಧ್ರುವ ಎಂ ಬಿ ಸಂಗೀತ , ಆರ್ಯನ್ ಗೌಡ ಸಂಕಲನ, ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ, ಹರಿ ಸಂತು ಸಾಹಿತ್ಯ ಹಾಡುಗಳಿವೆ. ಸದ್ಯ  ವೀರ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News