ಎರಡನೇ ಪತ್ನಿ ಜೊತೆ ಹನಿಮೂನ್‌ಗೆ ಬಾಲಿಗೆ ತೆರಳಿದ ನಟ ಆಶಿಷ್ ವಿದ್ಯಾರ್ಥಿ..!

Ashish Vidyarthi wife : ನಟ ಆಶಿಶ್ ವಿದ್ಯಾರ್ಥಿ 60ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ಮದುವೆಯಾಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಪ್ರಸ್ತುತ ಅವರು ತಮ್ಮ ಪತ್ನಿಯೊಂದಿಗೆ ಬಾಲಿ ದ್ವೀಪಕ್ಕೆ ಹನಿಮೂನ್‌ಗೆ ತೆರಳಿದ್ದು, ಈ ಕುರಿತು ಫೋಟೋ ಹಂಚಿಕೊಂಡಿದ್ದಾರೆ.   

Written by - Krishna N K | Last Updated : Jul 13, 2023, 04:17 PM IST
  • ನಟ ಆಶಿಶ್ ವಿದ್ಯಾರ್ಥಿ 60ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ಮದುವೆಯಾಗಿದ್ದಾರೆ.
  • ಪ್ರಸ್ತುತ ಅವರು ತಮ್ಮ ಪತ್ನಿಯೊಂದಿಗೆ ಬಾಲಿ ದ್ವೀಪಕ್ಕೆ ಹನಿಮೂನ್‌ಗೆ ತೆರಳಿದ್ದಾರೆ.
  • ಈ ಕುರಿತು ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.
ಎರಡನೇ ಪತ್ನಿ ಜೊತೆ ಹನಿಮೂನ್‌ಗೆ ಬಾಲಿಗೆ ತೆರಳಿದ ನಟ ಆಶಿಷ್ ವಿದ್ಯಾರ್ಥಿ..! title=

Ashish Vidyarthi : ಶಿವಣ್ಣ ನಟನೆಯ AK-47 ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ತಮ್ಮ ಅದ್ಬುತ ನಟಯ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದ ನಟ ಆಶಿಶ್‌ ವಿದ್ಯಾರ್ಥಿ. ಕನ್ನಡವಷ್ಟೇ ಅಲ್ಲ ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧರಾಗಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ರೋಜಾಶಿ ಬರುವಾ ಅವರನ್ನು ವಿವಾಹವಾದರು. 

ಶಿವರಾಜಕುಮಾರ್, ‌ವಿಷ್ಣುವರ್ಧನ್‌, ಸುದೀಪ್‌, ಪುನೀತ್‌ ರಾಜಕುಮಾರ್‌, ಮಾಲಾಶ್ರೀ, ದರ್ಶನ್‌ ಸೇರಿದಂತೆ ಹಲವು ಸ್ಟಾರ್‌ ನಟರ ಚಿತ್ರಗಳಲ್ಲಿ ಆಶಿಶ್‌ ವಿದ್ಯಾರ್ಥಿ ನಟಿಸಿದ್ದಾರೆ. ಹಳ್ಳಿಯ ಜನ ಅವರನ್ನು ನಿಜವಾಗಿಯೂ ಖಳನಟನೆಂದು ತಿಳಿದಿದ್ದರು. ಕೋಟಿಗೊಬ್ಬ, ನಂದಿ, ಆಕಾಶ್‌, ಸುಂಟರಗಾಳಿ, ಹೀಗೆ ಸಾಲು ಸಾಲು ಸಿನಿಮಾಗಳು ಮಾಸ್ ಹಿಟ್ ಆಗಿವೆ.

ಇದನ್ನೂ ಓದಿ:  ಗಾಳಿಪಟ ಚಿತ್ರದ ಚೆಲುವೆಯರಿವರು..ಇದರಲ್ಲಿ ನಿಮ್ಮ ನಿದ್ದೆಗೆಡಿಸಿದ ಕ್ಯಾರೆಕ್ಟರ್‌ ಯಾವುದು..?

ನಟ ಆಶಿಶ್ ವಿದ್ಯಾರ್ಥಿ ಮೊದಲು ಮದುವೆಯಾದದ್ದು ಜನಪ್ರಿಯ ಬಾಲಿವುಡ್ ನಟಿ ರೋಜೋಶಿ ಬರುವಾ ಅವರನ್ನು. ಕಾರಣಾಂತರದಿಂದ ಇಬ್ಬರೂ ವಿಚ್ಛೇದನ ಪಡೆದರು. ಈ ಪರಿಸ್ಥಿತಿಯಲ್ಲಿ ನಟ ಆಶಿಶ್ ವಿದ್ಯಾರ್ಥಿ ಕಳೆದ ಮೇ ತಿಂಗಳಲ್ಲಿ ಅಸ್ಸಾಂನ ರೂಪಾಲಿ ಅವರನ್ನು ವಿವಾಹವಾದರು. ಅವರ ಮದುವೆಯ ಫೋಟೋಗಳು ಅಂತರ್ಜಾಲದಲ್ಲಿ ಸದ್ದು ಮಾಡಿದ್ದವು. 

 
 
 
 

 
 
 
 
 
 
 
 
 
 
 

A post shared by Rupali Barua (@ru.pa.li.73)

ಇದೀಗ ಆಶಿಶ್ ತಮ್ಮ ಪತ್ನಿಯೊಂದಿಗೆ ಇಂಡೋನೇಷ್ಯಾದ ಬಾಲಿ ದ್ವೀಪಕ್ಕೆ ಹನಿಮೂನ್‌ಗೆ ತೆರಳಿದ್ದಾರೆ. ಈ ಕುರಿತು ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಅಲ್ಲದೆ, "ನಾವು ಏಕತೆಯಲ್ಲಿ ಸಂತೋಷವನ್ನು ಕಾಣುತ್ತಿದ್ದೆವೆ" ಅಂತ ಶೀರ್ಷಿಕೆ ಬರೆದುಕೊಂಡು ಚಿತ್ರಗಳನ್ನು ಶೇರ್‌ ಮಾಡಿದ್ದಾರೆ.

ಇದನ್ನೂ ಓದಿ:  ಟ್ರೇಲರ್ ಮೂಲಕ ಗಮನಸೆಳೆದ ಹೊಸಬರ ʻಆರʼ : ಜುಲೈ 28 ರಂದು ಸಿನಿಮಾ ರಿಲೀಸ್

ಇನ್ನು ಈ ಫೋಟೋಸ್‌ಗೆ ‘ಈ ವಯಸ್ಸಿಗೆ ಇದೆಲ್ಲಾ ಬೇಕಾ...’ ಎಂದು ಕೆಲ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ಇನ್ನು ಹಲವರು ಒಳ್ಳೆಯದಾಗಲಿ ಅಂತ ಹಾರೈಸಿದ್ದಾರೆ. ಅಲ್ಲದೆ, ‘ಪ್ರೀತಿಸಿದರೆ ಹೀಗೆ ಪ್ರೀತಿಸಬೇಕು’ ಎಂದು ಒಬ್ಬರು ಕಾಮೆಂಟ್ ಕೂಡ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News