Aryan Khan Released: ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ (Aryan Khan Drugs Case) ಜಾಮೀನು ಪಡೆದು 22 ದಿನಗಳ ನಂತರ ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ (Aryan Khan) ಬಿಡುಗಡೆಯಾಗಿದ್ದಾರೆ. ಇದಾದ ನಂತರ ಆರ್ಯನ್ ನೇರವಾಗಿ ತಂದೆ ಶಾರುಖ್ ಖಾನ್ ಅವರ ಜೊತೆಗೆ ತಮ್ಮ ನಿವಾಸ 'ಮನ್ನತ್'ಗೆ ತಲುಪಿದ್ದಾರೆ. ಶಾರುಖ್ ಖಾನ್ (Sharukh Khan) ಖುದ್ದು ಆರ್ಥರ್ ರೋಡ್ ಜೈಲಿಗೆ (Arthur Road Jail) ಬಂದು ಆರ್ಯನ್ ಖಾನ್ ಅವರನ್ನು ತಮ್ಮ ಬೆಂಗಾವಲು ಪಡೆಯೊಂದಿಗೆ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಶಾರುಖ್ ಅವರ ಮನೆ ಮನ್ನತ್‌ನ (Mannat) ಹೊರಗೆ ಭಾರಿ ಸಂಖ್ಯೆಯಲ್ಲಿ ಜನರು, ಅಭಿಮಾನಿಗಳು ನೆರೆದಿದ್ದರು.
ಆರ್ಯನ್ ಖಾನ್ ತಮ್ಮ ಬಿಡುಗಡೆಯ ಬಳಿಕ ಭಾರಿ ಖುಷಿಯಲ್ಲಿದ್ದರು ಎಂದು ಆರ್ಥರ್ ರೋಡ್ ಜೈಲಿನ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅವರು ಜೈಲಿನ ಇತರ ಕೈದಿಗಳ ಜೊತೆಗೂ ಕೂಡ ಮಾತನಾಡಿ ಅವರನ್ನು ತಬ್ಬಿಕೊಂಡಿದ್ದಾರೆ. ಇದಕ್ಕೂ ಮೊದಲು ಆರ್ಯನ್ ಅಧಿಕಾರಿಗಳಿಗೆ ತಮ್ಮ ಬಿಡುಗಡೆಯ ಸಮಯದ ಕುರಿತು ವಿಚಾರಣೆ ನಡೆಸಿದ್ದರು ಎನ್ನಲಾಗಿದೆ. ಜೈಲಿನ ನಿಯಮಗಳ ಅನುಸಾರ ಬೆಳಗ್ಗೆ 11 ಗಂಟೆಗೆ ಆರ್ಯನ್ ಖಾನ್ ನನ್ನು ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 2ರ NCB ರೇಡ್ (NCB Raid) ಬಳಿಕ ದೀರ್ಘ ಕಾಲದವರೆಗೆ ಆರ್ಯನ್ ಗೆ ಜೈಲಿನಲ್ಲಿಯೇ ಕಾಲ ಕಳೆಯಬೇಕಾದ ಸಂದರ್ಭ ಬಂದೊದಗಿತ್ತು. ಆದರೆ, ಶಾರುಕ್ ಮಗನಿಗೆ ಇದು ಸುಲಭದ ಮಾತಾಗಿರಲಿಲ್ಲ. ಅವನ ಮುಂದಿನ ದಾರಿಯೂ ಕೂಡ ಇನ್ನೂ ಸುಗಮವಾಗಿಲ್ಲ. ಏಕೆಂದರೆ ಆರ್ಯನ್ ಖಾನ್ ಗೆ ಕೇವಲ ಜಾಮೀನು ಮಾತ್ರ ದೊರೆತಿದೆ. ಪ್ರಕರಣದಿಂದ ಇನ್ನು ಮುಕ್ತಿ ಸಿಗುವುದು ಬಾಕಿ ಇದೆ.
ಆರ್ಯನ್ ಖಾನ್ ಜೈಲಿನಿಂದ ಬಿಡುಗಡೆಯಾಗಿದ್ದಾನೆ, ಆದರೆ, ಆತನ ಬಿಡುಗಡೆಗಾಗಿ ನ್ಯಾಯಾಲಯ ಸುಮಾರು 14 ಷರತ್ತುಗಳನ್ನು ವಿಧಿಸಿದೆ.
>> ತನಿಖಾಧಿಕಾರಿಯ ಅನುಮತಿ ಇಲ್ಲದೆ ಆರ್ಯನ್ ಖಾನ್ ಮುಂಬೈ ಬಿಡುವಂತಿಲ್ಲ.
>> ಪ್ರತಿ ಶುಕ್ರವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರ ನಡುವೆ ಎನ್‌ಸಿಬಿ ಕಚೇರಿಗೆ ಹಾಜರಾಗಬೇಕು.
>> ಬೇರೆ ಯಾವುದೇ ಆರೋಪಿಗಳೊಂದಿಗೆ ಸಂಪರ್ಕದಲ್ಲಿರಬೇಕಾಗಿಲ್ಲ.
>> ತನಿಖೆಗೆ ಸಂಬಂಧಿಸಿದ ವಿಷಯಗಳನ್ನು ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವಂತಿಲ್ಲ.
>> ಆರ್ಯನ್ ತನ್ನ ಪಾಸ್‌ಪೋರ್ಟ್ ಅನ್ನು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ಸಲ್ಲಿಸಬೇಕು.
>> ನ್ಯಾಯಾಲಯದ ಅನುಮತಿ ಇಲ್ಲದೆ ದೇಶದಿಂದ ಹೊರಗೆ ಹೋಗುವಂತಿಲ್ಲ.
>> ಯಾವುದೇ ಷರತ್ತನ್ನು ಉಲ್ಲಂಘಿಸಿದರೆ, ವಿಶೇಷ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಲು ಎನ್‌ಸಿಬಿಗೆ ಅಧಿಕಾರ ಇದೆ.
ಇದನ್ನೂ ಓದಿ-Aryan Khan get Bail : ಆರ್ಯನ್ ಖಾನ್ ಗೆ ಜಾಮೀನು ಕೊಡಿಸಿದ ವಕೀಲ ಮುಕುಲ್ ರೋಹಟಗಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ
ಕೈದಿಗಳನ್ನು ಜೈಲಿನಿಂದ ಹೊರಗೆ ಬಿಡುವ ನಿಯಮ-ಪ್ರಕ್ರಿಯೆ ಏನು?
ಇದಕ್ಕೂ ಮೊದಲು ಆರ್ಡರ್ ಬಾಕ್ಸ್‌ನಲ್ಲಿರುವ ಎಲ್ಲಾ ಬಿಡುಗಡೆಗಳನ್ನು ಪತ್ರಗಳನ್ನು ಹೊರತೆಗೆದು ಜೈಲಿನೊಳಗಿನ ಕಚೇರಿಗೆ ಕೊಂಡೊಯ್ಯಲಾಗುತ್ತದೆ. ಇದರ ನಂತರ ಖುಲಾಸೆಗೊಳಿಸಲಾಗುವ ಎಲ್ಲಾ ಕೈದಿಗಳ ಹೆಸರನ್ನು ಕರೆಯಲಾಗುತ್ತದೆ ಮತ್ತು ಅವರನ್ನು ಅವರ ಬ್ಯಾರಕ್‌ಗಳಿಂದ ಹೊರಗೆ ಕರೆತರಲಾಗುತ್ತದೆ. ಅವರ ಬಳಿಯಿಂದ ಜೈಲಿನಲ್ಲಿ ನೀಡಲಾಗಿರುವ ವಸ್ತುಗಳನ್ನು ಮರಳಿ ಪಡೆಯಲಾಗುತ್ತದೆ. (ಉದಾಹರಣೆಗೆ ಹಾಸಿಗೆ, ಮತ್ತು ಆರ್ಯನ್ ಓದಲು ತೆಗೆದುಕೊಂಡ ಪುಸ್ತಕ ಇತ್ಯಾದಿ). ಏಕಕಾಲದಲ್ಲಿ ಜೈಲು ಸಿಬ್ಬಂದಿಯಿಂದ ಬಿಡುಗಡೆ ಆದೇಶಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಪರಿಶೀಲನೆ ಪೂರ್ಣಗೊಂಡ ನಂತರ 10 ಗಂಟೆಯ ಸುಮಾರಿಗೆ ಜೈಲು ತೆರೆದಾಗ, ಜನರನ್ನು ಒಬ್ಬೊಬ್ಬರಾಗಿ ಬಿಡುಗಡೆ ಮಾಡುವ ಪ್ರಕ್ರಿಯೆಯು ಆರಂಭಿಸಲಾಗುತ್ತದೆ. ಒಟ್ಟಾರೆ ಹೇಳುವುದಾದರೆ ದೀಪಾವಳಿಗೂ ಮುನ್ನ ಆರ್ಯನ್ ಖಾನ್ ಮನೆ ತಲುಪಿದ್ದು, ಕುಟುಂಬ ಸದಸ್ಯರಿಗೆ ಭಾರಿ ನೆಮ್ಮದಿಯೇ ದೊರೆತಂತಾಗಿದೆ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ-Aryan Drugs Case : ಆರ್ಯನ್ ಖಾನ್‌ಗೆ ಕೊನೆಗೂ ಸಿಕ್ಕಿತು ಜಾಮೀನು : ಇಂದಿಗೆ ಅಂತ್ಯೆ 25 ದಿನಗಳ ಜೈಲು ವಾಸ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ