ಬೆಂಗಳೂರು : ಕನ್ನಡ ಚಿತ್ರರಂಗದ ಬಹು ಬೇಡಿಕೆಯ, ಆರ್ಮುಗಂ ಖ್ಯಾತಿಯ ಖಳನಟ ರವಿಶಂಕರ್ ಅವರಿಗೆ ಇಂದು 51ನೇ ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ನ್ಯಾಯಾಂಗ ಬಡಾವಣೆ ತಮ್ಮ ನಿವಾಸದಲ್ಲಿ ತಡರಾತ್ರಿ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಅವರು ಹುಟ್ಟುಹಬ್ಬ ಆಚರಿಸಿಕೊಂಡರು.
ಕಿಚ್ಚ ಸುದೀಪ್ ನಟಿಸಿ ನಿರ್ದೇಶಿಸಿದ್ದ ‘ಕೆಂಪೇಗೌಡ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ವಿಭಿನ್ನ ಅಭಿನಯದೊಂದಿಗೆ ಗುರುತಿಸಿಕೊಂಡ ರವಿಶಂಕರ್ ಅವರು ಶರಣ್ ಅಭಿನಯದ ವಿಕ್ಟರಿ, ಅಧ್ಯಕ್ಷ, ಧ್ರುವಸರ್ಜಾ ನಟನೆಯ ಬಹದ್ದೂರ್, ದಂಡುಪಾಳ್ಯ ಮೊದಲಾದ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕಲಾವಿದರಾಗಿ 35ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ತಮ್ಮ 9 ನೇ ವಯಸ್ಸಿನಲ್ಲೇ ‘ಆಲೋಚಿಂಚಂಡಿ’ ಸಿನಿಮಾದಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ರವಿಶಂಕರ್ ಅವರ ಜರ್ನಿ ಇಂದಿಗೂ ಯಶಸ್ವಿಯಾಗಿ ಮುಂದುವರೆದಿದ್ದು, ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.