ಸ್ಯಾಂಡಲ್‌ವುಡ್‌ನ ಈ ನಟ-ನಟಿಯರ ಮದುವೆಗಾಗಿ ನೀವು ಕಾಯ್ತಾ ಇದ್ದೀರಾ..?

ಸ್ಯಾಂಡಲ್‌ವುಡ್‌ನಲ್ಲಿ ನಮಗೆ ತಿಳಿದಿರುವ ಹಾಗೆ ಸಾಕಷ್ಟು ನಟ ನಟಿಯರು ಮದುವೆ ಮಾಡಿಕೊಂಡು ದಾಂಪತ್ಯೆ ಜೀವನಕ್ಕೆ ಕಾಲಿಟ್ಟರು. ಆದರೆ ಸ್ವಲ್ಪ ಜನ ನಟ-ನಟಿಯರು ಮದುವೆ ವಿಚಾರದಲ್ಲಿ ಹಿಂದುಳಿಯುತ್ತಿರುವುದು ತಿಳಿದೆ ಇದೆ. ಹಾಗಾದ್ರೆ ಅವರು ಯಾರನ್ನ ಮದುವೆ ಆಗುತ್ತರೆ ಯಾವಾಗ ಆಗುತ್ತಾರೆ ಅನ್ನೋದೆ ಕುತೂಹಲಕಾರಿಯಾದ ವಿಷಯ. 

Written by - Zee Kannada News Desk | Last Updated : Mar 3, 2023, 12:28 PM IST
  • ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ.
  • 'ಜಯನಗರ 4th ಬ್ಲಾಕ್'​ ಎಂಬ ಕಿರುಚಿತ್ರದ ಮೂಲಕ ಚಿತ್ರರಂಗದಲ್ಲಿ ವಿಶಿಷ್ಟವಾಗಿ ಛಾಪು ಮೂಡಿಸಿದ ಡಾಲಿ ಧನಂಜಯ್,
  • ರಕ್ಷಿತ್ ಶೆಟ್ಟಿ ಮದುವೆ ಬಗ್ಗೆ ಸಾಕಷ್ಟು ಕುತೂಹಲವಿದೆ.
 ಸ್ಯಾಂಡಲ್‌ವುಡ್‌ನ ಈ ನಟ-ನಟಿಯರ ಮದುವೆಗಾಗಿ ನೀವು ಕಾಯ್ತಾ ಇದ್ದೀರಾ..?  title=

ರಮ್ಯಾ
ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ. ರಮ್ಯಾ 2003ರಲ್ಲಿ ಪುನೀತ್ ರಾಜ್‍ಕುಮಾರ್ ಅಭಿನಯಿಸಿದ ಅಭಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು. ನಂತರ ಕನ್ನಡ ಚಿತ್ರರಂಗದ ದೊಡ್ಡ-ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ಅಭಿನಯಿಸಿ, ಸ್ಯಾಂಡಲ್‌ವುಡ್‌ನ ಕ್ವೀನ್ ಆಗಿ ಹೊರಹೊಮ್ಮಿದರು. ಇವರು ಕನ್ನಡ ಚಿತ್ರಗಳು ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಮ್ಯಾಗೆ 40 ವರ್ಷ ವಯಸ್ಸಾಗಿದ್ದು, ಇನ್ನು ಮದುವೆಯಾಗಿಲ್ಲ. ಆದರೆ, ಅಭಿಮಾನಿಗಳು ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಕೂಡ ಮದುವೆ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಇತ್ತೀಚೆಗೆ ಅಭಿಮಾನಿಯೊಬ್ಬರು ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ರಮ್ಯಾ, ಸಿಂಗಲ್ ಆಗಿರುವುದೇ ಬೆಸ್ಟ್ ಎಂದಿದ್ದರು. ಆದಾರೂ ಕೂಡ ರಮ್ಯಾ ಫ್ಯಾನ್ಸ್ ಅವರ ಮದುವೆಯ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.  

 ರಕ್ಷಿತ್ ಶೆಟ್ಟಿ
2017ರ ಜುಲೈ 5ರಂದು ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಜೊತೆ ಅದ್ಧೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಬಳಿಕ ಇವರಿಬ್ಬರ ನಡುವೆ 14 ವರ್ಷಗಳ ಅಂತರವಿದೆ ಎಂಬ ವಿಚಾರ ಸದ್ದು ಮಾಡಿತ್ತು. ಆದರೆ, ಈ ಜೋಡಿ ಇದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, 2018ರ ಅಕ್ಟೋಬರ್ ತಿಂಗಳಲ್ಲಿ ರಶ್ಮಿಕಾ ಅವರು ರಕ್ಷಿತ್ ಜೊತೆಗಿನ ನಿಶ್ಚಿತಾರ್ಥ ಮುರಿದುಕೊಂಡಿದ್ದರು. ಸದ್ಯ ರಕ್ಷಿತ್ ಅವರಿಗೆ 39 ವರ್ಷ ವಯಸ್ಸಾಗಿದ್ದು, ಆದರೂ ಇವರು ಮದುವೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ.  ರಕ್ಷಿತ್ ಶೆಟ್ಟಿ ಮದುವೆ ಬಗ್ಗೆ ಸಾಕಷ್ಟು ಕುತೂಹಲವಿದೆ. 

ಇದನ್ನೂ ಓದಿ-Megha Shetty: ನಟಿ ಮೇಘಾ ಶೆಟ್ಟಿ ಫುಲ್ ಬೋಲ್ಡ್ ವಿಡಿಯೋ.. ಪಡ್ಡೆ ಹೈಕ್ಳು ನಿದ್ದೆ ಕೆಡೋದು ಪಕ್ಕಾ.!

ರಚಿತಾ ರಾಮ್
 ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಚಿತಾಗೆ ಈಗ 30 ವರ್ಷ ವಯಸ್ಸಾಗಿದೆ. ರಚಿತಾ ರಾಮ್ ಮದುವೆ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಒಮ್ಮೆ ರಚಿತಾ ತಾವು ಗೌಡರ ಹುಡುಗನನ್ನೇ ಮದುವೆಯಾಗುವುದು ಎಂದಿದ್ದರು. ಹೀಗಾಗಿ ಆ ಹುಡುಗ ಯಾರು ಎಂಬ ಚರ್ಚೆ ಆರಂಭವಾಗಿತ್ತು. ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಮತ್ತು ಧನ್ವಿರ್ ಗೌಡ ಜೊತೆ ಡಿಂಪಲ್ ಕ್ವೀನ್ ಮದುವೆ ಎಂಬ ವದಂತಿಯೂ ಹರಡಿತ್ತು. 

ಧನಂಜಯ
'ಜಯನಗರ 4th ಬ್ಲಾಕ್'​ ಎಂಬ ಕಿರುಚಿತ್ರದ ಮೂಲಕ ಚಿತ್ರರಂಗದಲ್ಲಿ ವಿಶಿಷ್ಟವಾಗಿ ಛಾಪು ಮೂಡಿಸಿದ ಡಾಲಿ ಧನಂಜಯ್, ಇಂದು ಬಹುಭಾಷಾ ನಟರಾಗಿ ಹೊರಹೊಮ್ಮಿದ್ದಾರೆ. ಪ್ರತಿ ಸಿನಿಮಾಗೂ ವಿಭಿನ್ನ ಪಾತ್ರ ಆಯ್ಕೆ ಮಾಡಿಕೊಳ್ಳುವ ಧನಂಜಯ್ ಅವರಿಗೆ ಈಗ 36 ವಯಸ್ಸು. ಹೀಗಾಗಿ ಇವರ ಮದುವೆ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ಆದರೆ, ಧನಂಜಯ್ ಈಗಷ್ಟೆ ಕೆರಿಯರ್ ಆರಂಭವಾಗಿದೆ. ಸದ್ಯಕ್ಕೆ ಮದುವೆಯಾಗಲ್ಲ ಎನ್ನುತ್ತಿದ್ದಾರೆ. ಡಾಲಿ ಅಭಿಮಾನಿಗಳು ಅವರ ಮದುವೆಗಾಗಿ ಕಾಯುತ್ತಿದ್ದಾರೆ.  

ಚಿಕ್ಕಣ್ಣ
ಕಾಮಿಡಿ ಶೋ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಚಿಕ್ಕಣ್ಣ, ಇಂದು ಬಹುಬೇಡಿಕೆಯ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ನಾಯಕನಾಗಿಯೂ ನಟಿಸುತ್ತಿದ್ದಾರೆ.  ಕನ್ನಡ ಸಿನಿಮಾರಂಗದ ಎಲ್ಲಾ ನಟರ ಜೊತೆ ತೆರೆ ಹಂಚಿಕೊಂಡಿರುವ ನಟ ಚಿಕ್ಕಣ್ಣ ಅವರಿಗೆ ಈಗ 36 ವರ್ಷ. ಇವರ ಮದುವೆ ವಿಚಾರವಾಗಿ ಈಗಗಾಲೇ ಹಲವು ಗಾಸಿಪ್ ಹರಡಿದ್ದವು. ಚಿಕ್ಕಣ್ಣ ನಿರೂಪಕಿ ಅನುಶ್ರೀ ಜೊತೆ ಮದುವೆಯಾಗಿದ್ದಾರೆ ಎನ್ನುವುದರಿಂದ ಹಿಡಿದು ನಾನಾ ನಟಿಯರ ಹೆಸರಿನ ಹೆಸರಿನ ಜೊತೆ ವದಂತಿಗಳು ಹರಡಿವೆ. ಆದರೆ, ಚಿಕ್ಕಣ್ಣ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಅವರ ಅಭಿಮಾನಿಗಳು ಮಾತ್ರ ಅವರು ಯಾವಾಗ ಸಪ್ತಪದಿ ತುಳಿಯಲಿದ್ದಾರೆ ಎಂದು ಕಾಯುತ್ತಿದ್ದಾರೆ.  

ಇದನ್ನೂ ಓದಿ-Amitabh Bachchan: ಥಿಯೇಟರ್‌ನಲ್ಲಿ ಅಮಿತಾಭ್ ಪ್ಯಾಂಟ್​ ಒಳಗಡೆ ಇಲಿ ಹೋದಾಗ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News