ಮಲೈಕಾ ಅರೋರಾ-ಅರ್ಜುನ್ ಕಪೂರ್ ವೆಡ್ಡಿಂಗ್‌ ಡೇಟ್‌ ಫಿಕ್ಸ್‌!?

Malaika Arora-Arjun Kapoor Wedding: ವರದಿಯ ಪ್ರಕಾರ, ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಚಳಿಗಾಲದ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.  

Written by - Chetana Devarmani | Last Updated : May 18, 2022, 05:40 PM IST
  • ಮಲೈಕಾ ಅರೋರಾ-ಅರ್ಜುನ್ ಕಪೂರ್ ವೆಡ್ಡಿಂಗ್‌ ಡೇಟ್‌ ಫಿಕ್ಸ್‌!?
  • ಈ ವರ್ಷದ ನವೆಂಬರ್‌ನಲ್ಲಿ ಮದುವೆ!!
  • ಪರಸ್ಪರ ಪ್ರೀತಿಸುತ್ತಿರುವ ಅರ್ಜುನ್ ಮತ್ತು ಮಲೈಕಾ
ಮಲೈಕಾ ಅರೋರಾ-ಅರ್ಜುನ್ ಕಪೂರ್ ವೆಡ್ಡಿಂಗ್‌ ಡೇಟ್‌ ಫಿಕ್ಸ್‌!?  title=
ಅರ್ಜುನ್ ಮತ್ತು ಮಲೈಕಾ

ನವದೆಹಲಿ: ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮತ್ತು ರಣಬೀರ್ ಕಪೂರ್-ಆಲಿಯಾ ಭಟ್ ನಂತರ, ಮತ್ತೊಂದು ಬಿ-ಟೌನ್ ಜೋಡಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರೀಕ್ಷೆಯಿದೆ. ನಟ ಅರ್ಜುನ್ ಕಪೂರ್ ಈ ವರ್ಷದ ನವೆಂಬರ್‌ನಲ್ಲಿ ಮಲೈಕಾ ಅರೋರಾ ಅವರನ್ನು ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು 2019 ರಲ್ಲಿ ಅವರ ಸಂಬಂಧದ ಬಗ್ಗೆ ಬಹಿರಂಗಪಡಿಸಿದರು. ಮದುವೆಗೆ ಕೇವಲ ಕುಟುಂಬ ಮತ್ತು ನಿಕಟ ಸ್ನೇಹಿತರು ಸಾಕ್ಷಿಯಾಗಲಿದ್ದಾರೆ ಎನ್ನಲಾಗುತ್ತಿದೆ. 

ಇದನ್ನೂ ಓದಿ:BREAKING NEWS: ನಾಳೆ ಮಧ್ಯಾಹ್ನ 12.30ಕ್ಕೆ SSLC ಫಲಿತಾಂಶ

ಬಾಲಿವುಡ್ ಲೈಫ್‌ನ ವರದಿಯ ಪ್ರಕಾರ,  ಅರ್ಜುನ್ ಮತ್ತು ಮಲೈಕಾ ಪರಸ್ಪರ ಪ್ರೀತಿಸುತ್ತಿದ್ದಾರೆ. ಈಗ ಅವರು ಮದುವೆಯಾಗುವ ಮೂಲಕ ತಮ್ಮ ಸಂಬಂಧದಲ್ಲಿ ಒಂದು ಹೆಜ್ಜೆ ಮುಂದಿಡಲು ನಿರ್ಧರಿಸಿದ್ದಾರೆ. ಈ ಜೋಡಿಯು ಮುಂಬೈನಲ್ಲಿ ವಿವಾಹವಾಗುವ ಸಾಧ್ಯತೆಯಿದೆ. ಮಲೈಕಾ ಮತ್ತು ಅರ್ಜುನ್ ಇಬ್ಬರೂ ಚಳಿಗಾಲದ ಹವಾಮಾನವನ್ನು ಇಷ್ಟಪಡುತ್ತಾರೆ ಮತ್ತು ಆದ್ದರಿಂದ ಅವರು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ವೆಡ್ಡಿಂಗ್‌ ದಿನಾಂಕವನ್ನು ಅಂತಿಮಗೊಳಿಸಲು ನಿರ್ಧರಿಸಿದ್ದಾರಂತೆ. ಈ ಮದುವೆ ಕಾರ್ಯಕ್ರಮದಲ್ಲಿ ಸ್ನೇಹಿತರು ಮತ್ತು ಕುಟುಂಬದವರು, ಆತ್ಮೀಯರು ಮಾತ್ರ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಮಾಜಿ ಪ್ರಧಾನಿ H.D Devegowdaರಿಗೆ ಹುಟ್ಟುಹಬ್ಬದ ಸಂಭ್ರಮ: ʼಮಣ್ಣಿನ ಮಗʼನಿಗೆ 90ರ ಹರೆಯ...!

ಅರ್ಜುನ ಮತ್ತು ಮಲೈಕಾ ಅದ್ದೂರಿ ವಿವಾಹವನ್ನು ಬಯಸುವುದಿಲ್ಲವಂತೆ. ಅವರು ಸರಳತೆಯನ್ನು ಇಷ್ಟಪಡುವ ಕಾರಣ, ರಿಜಿಸ್ಟರ್ಡ್‌ ಮ್ಯಾರೇಜ್‌ ಆಗಲು ಬಯಸಿದ್ದಾರಂತೆ. ನಂತರ ಅವರು ಮದುವೆಯ ಪಾರ್ಟಿಯನ್ನು ಆಯೋಜಿಸಲಿದ್ದಾರೆ. ಮಲೈಕಾ ತಮ್ಮ ಮದುವೆ ನೋಂದಣಿಗಾಗಿ ಸರಳ ಮತ್ತು ಸೊಗಸಾದ ಸೀರೆಯನ್ನು ಧರಿಸುತ್ತಾರೆ ಎಂದು ಬಾಲಿವುಡ್ ಲೈಫ್ ಬಹಿರಂಗಪಡಿಸಿದೆ. ಅರ್ಜುನ್ ಕುರ್ತಾ ಧರಿಸಲಿದ್ದಾರೆ. ಇಬ್ಬರೂ ತಮ್ಮ ಮದುವೆಯ ಪಾರ್ಟಿಗೆ ಪಾಶ್ಚಾತ್ಯ ಉಡುಗೆಗಳನ್ನು ಆರಿಸಿಕೊಳ್ಳುತ್ತಾರಂತೆ.

ಆದರೆ ಇದು ವರೆಗೂ ಈ ಕುರಿತು ಬಾಲಿವುಡ್‌ನ ಲವ್ ಬರ್ಡ್ಸ್ ಏನನ್ನೂ ದೃಢಪಡಿಸಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News