56ನೇ ವಯಸ್ಸಿನಲ್ಲಿ 17 ವರ್ಷ ಕಿರಿಯ ಹುಡುಗಿಯನ್ನು ವರಿಸಿದ ನಟ, ನಿರ್ಮಾಪಕ ! ತಂದೆಯ ವಿವಾಹದಲ್ಲಿ ಕುಣಿದು ಕುಪ್ಪಳಿಸಿದ ಪುತ್ರ!

Arbaaz Khan and Sshura Khan:ಶುರಾ ಖಾನ್  ಅರ್ಬಾಜ್ ಅವರಿಂದ 17 ವರ್ಷ ಚಿಕ್ಕವರು ಎನ್ನಲಾಗಿದೆ. ಅರ್ಬಾಜ್ ಖಾನ್ ಅವರಿಗೆ 56 ವರ್ಷ ವಯಸ್ಸಾಗಿದ್ದು,  ಶುರಾ ಖಾನ್ ಗೆ 39 ವರ್ಷ ಎನ್ನಲಾಗಿದೆ. 

Written by - Ranjitha R K | Last Updated : Dec 26, 2023, 10:09 AM IST
  • ಅರ್ಬಾಜ್ ಖಾನ್ ಮತ್ತೊಮ್ಮೆ ವಿವಾಹ
  • ಶುರಾ ಖಾನ್ ಮತ್ತು ಅರ್ಬಾಜ್ ವಿವಾಹ
  • ಶುರಾ ಖಾನ್ ಅರ್ಬಾಜ್ ಅವರಿಂದ 17 ವರ್ಷ ಚಿಕ್ಕವರು
56ನೇ ವಯಸ್ಸಿನಲ್ಲಿ 17 ವರ್ಷ ಕಿರಿಯ ಹುಡುಗಿಯನ್ನು ವರಿಸಿದ ನಟ, ನಿರ್ಮಾಪಕ ! ತಂದೆಯ ವಿವಾಹದಲ್ಲಿ ಕುಣಿದು ಕುಪ್ಪಳಿಸಿದ ಪುತ್ರ! title=

Arbaaz Khan and Sshura Khan : ಮಲೈಕಾ ಆರೋರಾ ಜೊತೆ ವಿಚ್ಛೇದನದ ಬಳಿಕ ಇದೀಗ ಅರ್ಬಾಜ್ ಖಾನ್ ಮತ್ತೊಮ್ಮೆ ವಿವಾಹವಾಗಿದ್ದಾರೆ. ಮೆಕ್ ಅಪ್ ಆರ್ಟಿಸ್ಟ್ ಶುರಾ ಖಾನ್ ಅವರೊಂದಿಗೆ  ಹೊಸ  ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 24 ರಂದು ಶುರಾ ಖಾನ್ ಮತ್ತು ಅರ್ಬಾಜ್ ವಿವಾಹ ನೆರವೇರಿದೆ. ಕಳೆದ ವಾರವಷ್ಟೇ ಇವರಿಬ್ಬರ ಹೆಸರು ಮೊದಲ ಬಾರಿಗೆ ಕೇಳಿಬಂದಿತ್ತು. ಇದಕ್ಕೂ ಮೊದಲು, ಶುರಾ ಖಾನ್  ಹೆಸರು  ಅರ್ಬಾಜ್‌ ಜೊತೆ ಕೇಳಿ ಬಂದಿರಲಿಲ್ಲ.  ಶುರಾ ಖಾನ್  ಅರ್ಬಾಜ್ ಅವರಿಂದ 17 ವರ್ಷ ಚಿಕ್ಕವರು ಎನ್ನಲಾಗಿದೆ. ಅರ್ಬಾಜ್ ಖಾನ್ ಅವರಿಗೆ 56 ವರ್ಷ ವಯಸ್ಸಾಗಿದ್ದು,  ಶುರಾ ಖಾನ್ ಗೆ 39 ವರ್ಷ ಎನ್ನಲಾಗಿದೆ. 

ಇದೀಗ ಶುರಾ ಖಾನ್ ಮತ್ತು ಅರ್ಬಾಜ್ ವಿವಾಹದ ಕೆಲವು ಚಿತ್ರಗಳು  ಹೊರಬಿದ್ದಿವೆ. ಅರ್ಬಾಜ್ ಖಾನ್ ಸ್ವತಃ Instagram ನಲ್ಲಿ ಮದುವೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಇಡೀ ಕುಟುಂಬವು ಒಟ್ಟಿಗೆ ಕಾಣಿಸಿಕೊಂಡಿದ್ದು, ಕುಟುಂಬ ಸದಸ್ಯರ ಮುಖದಲ್ಲಿ ಸಂತೋಷದ ಅಲೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಅರ್ಬಾಜ್ ಒಂದರ ನಂತರ ಒಂದರಂತೆ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಸಲ್ಮಾನ್ ಖಾನ್ ಕೂಡಾ ಕಾಣಿಸಿಕೊಂಡಿದ್ದಾರೆ. ಅವರು ಮದುವೆಯ ವೇಳೆ ನಡೆಯುವ ಪ್ರತಿಯೊಂದು  ಶಾಸ್ತ್ರವನ್ನು ಬಹಳ ಎಚ್ಚರಿಕೆಯಿಂದ ವೀಕ್ಷಿಸುತ್ತಿರುವುದನ್ನು ಇಲ್ಲಿ ಕಾಣಬಹುದು. 

ಇದನ್ನೂ ಓದಿ : "ಸಲಾರ್‌ ನೋಡಿ ಹೊಟ್ಟೆಯಲ್ಲಿರುವ ಮಗುನೂ ಎಂಜಾಯ್‌ ಮಾಡ್ತು": ಗರ್ಭಿಣಿಯ ರಿವ್ಯೂ ವೈರಲ್!‌

ತಂದೆಯ ವಿವಾಹದಲ್ಲಿ ಕುಣಿದು ಕುಪ್ಪಳಿಸಿದ ಪುತ್ರ : 
ಒಂದು ಫೋಟೋದಲ್ಲಿ ಅರ್ಬಾಜ್ ಮತ್ತು ಶುರಾ ಅವರೊಂದಿಗೆ ಪುತ್ರ ಅರ್ಹಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಅರ್ಹಾನ್ ಖಾನ್ ತಂದೆಯ ಮದುವೆಯಲ್ಲಿ ಬಹಿರಂಗವಾಗಿ ಡ್ಯಾನ್ಸ್ ಮಾಡಿ, ಹಾಡುಗಳನ್ನು ಹಾಡಿ, ಗಿಟಾರ್ ನುಡಿಸಿ ಸಂತಸ ಪಟ್ಟಿದ್ದಾರೆ. ಇನ್ನು ಗ್ರೂಪ್ ಫೋಟೋದಲ್ಲಿ ಇಡೀ ಖಾನ್ ಕುಟುಂಬ ಒಟ್ಟಿಗೆ ಕಾಣಿಸಿಕೊಂಡಿದೆ.   

 

ಮಲೈಕಾ ಜೊತೆ ವಿಚ್ಛೇದನ, ಜಾರ್ಜಿಯಾ ಜೊತೆ ಅಫೇರ್ : 
ಮಲೈಕಾ ಮತ್ತು ಅರ್ಬಾಜ್ 1998 ರಲ್ಲಿ ಮದುವೆಯಾದರು. 5 ವರ್ಷಗಳ ಡೇಟಿಂಗ್ ನಂತರ ಅವರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ 2017 ರಲ್ಲಿ ಪರಸ್ಪರರು ವಿಚ್ಛೇದನ ಪಡೆಯುವ ಮೂಲಕ ಈ ಸಂಬಂಧಕ್ಕೆ ಕೊನೆ ಹಾಡಿದರು. ಇದಾದ ನಂತರ ಮಲೈಕಾ ಮತ್ತು ಅರ್ಜುನ್ ಕಪೂರ್ ನಡುವಿನ ಪ್ರೀತಿ ಪ್ರಕರಣ ಎಲ್ಲೆಡೆ ಸುದ್ದಿಯಾಯಿತು.  ಮತ್ತೊಂದೆಡೆ,  ಅರ್ಬಾಜ್  ಜೊತೆಗೆ ಜಾರ್ಜಿಯಾ ಆಂಡ್ರಿಯಾನಿ ಹೆಸರೂ ಕೇಳಿ ಬಂದಿತ್ತು. ಕೆಲವು ವರ್ಷಗಳ ಡೇಟಿಂಗ್ ನಂತರ ಅವರ ಸಂಬಂಧ ಮುರಿದುಬಿತ್ತು. ಜಾರ್ಜಿಯಾ  ಮತ್ತು ಅರ್ಬಾಜ್ 2020 ರಲ್ಲಿಯೇ ಬೇರೆಯಾಗಿದ್ದಾರೆ ಎನ್ನುವುದನ್ನು ಸ್ವತಃ  ಜಾರ್ಜಿಯಾ  ಬಹಿರಂಗಪಡಿಸಿದ್ದರು. ಈಗ, ಕೇವಲ ಒಂದು ವರದ ಹಿಂದಷ್ಟೇ ಶುರಾ ಖಾನ್ ಅವರ ಹೆಸರು ಇದ್ದಕ್ಕಿದ್ದಂತೆ ಅರ್ಬಾಜ್ ಜೊತೆ ಕೇಳಿ ಬಂದಿದ್ದು,  ಇವರಿಬ್ಬರ ಮದುವೆ ಕೂಡಾ ನೆರವೇರಿದೆ.

ಇದನ್ನೂ ಓದಿ : ಐಶ್ವರ್ಯಾರಿಂದ ಅಭಿಷೇಕ್ ದೂರವಾಗಿದ್ರೂ ಇನ್ನೂ ಡಿವೋರ್ಸ್ ನೀಡದಿರಲು ನಿಜವಾದ ಕಾರಣವೇನು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News