ಶಾರುಖ್ ಖಾನ್ ಪುತ್ರನನ್ನು ಹಗ್ ಮಾಡಿಕೊಂಡು ಆರಾಧ್ಯ ಬಚ್ಚನ್ ಡಾನ್ಸ್ ! ಇಲ್ಲಿದೆ ವಿಡಿಯೋ

Aradhya Bachchan Dance Video :ಇದೀಗ ಆರಾಧ್ಯ ಬಚ್ಚನ್ ಮತ್ತು ಶಾರುಖ್ ಖಾನ್ ಪುತ್ರನ ಕೆಲವೊಂದು ವಿಡಿಯೋ ಮತ್ತು ಫೋಟೋಗಳು ಕೂಡಾ ವೈರಲ್ ಆಗುತ್ತಿವೆ.  

Written by - Ranjitha R K | Last Updated : Dec 19, 2023, 11:05 AM IST
  • ಧೀರೂಭಾಯಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಾರ್ಷಿಕೋತ್ಸವಕಾರ್ಯಕ್ರಮ
  • ಐಶ್ವರ್ಯಾ ಪುತ್ರಿಯ ನಟನೆ ಬಹಳ ದೊಡ್ಡ ಸುದ್ದಿಯಾಗಿತ್ತು.
  • ಕೆಲವೊಂದು ವಿಡಿಯೋ ಮತ್ತು ಫೋಟೋಗಳು ಕೂಡಾ ವೈರಲ್ ಆಗುತ್ತಿವೆ.
ಶಾರುಖ್ ಖಾನ್ ಪುತ್ರನನ್ನು ಹಗ್ ಮಾಡಿಕೊಂಡು ಆರಾಧ್ಯ ಬಚ್ಚನ್ ಡಾನ್ಸ್ ! ಇಲ್ಲಿದೆ ವಿಡಿಯೋ  title=

Aradhya Bachchan Dance Video : ಧೀರೂಭಾಯಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಾರ್ಷಿಕೋತ್ಸವ ಕಾರ್ಯಕ್ರಮ ಅನೇಕ ವಿಷಯಗಳಿಂದ ಚರ್ಚೆಗೆ ಗ್ರಾಸವಾಗಿತ್ತು. ಈ ಕಾರ್ಯಕ್ರಮದಲ್ಲಿ ಐಶ್ವರ್ಯಾ ಪುತ್ರಿಯ ನಟನೆ ಬಹಳ ದೊಡ್ಡ ಸುದ್ದಿಯಾಗಿತ್ತು. ಈ ಸಮಾರಂಭದಲ್ಲಿ ಐಶ್ವರ್ಯ ರೈ ಬಚ್ಚನ್-ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಬಚ್ಚನ್ ಮಾತ್ರವಲ್ಲದೆ, ಕರೀನಾ ಕಪೂರ್ ಖಾನ್ ಅವರ ಮಗ ತೈಮೂರ್ ಅಲಿ ಖಾನ್, ಕರಣ್ ಜೋಹರ್ ಅವರ ಮಕ್ಕಳಾದ ಯಶ್ ಮತ್ತು ರೂಹಿ, ಶಾಹಿದ್ ಕಪೂರ್ ಮಕ್ಕಳಾದ ಮಿಶಾ ಕಪೂರ್ ಮತ್ತು ಝೈನ್ ಕಪೂರ್ ಕೂಡಾ ಉತ್ತಮ ಪ್ರದರ್ಶನ ನೀಡಿದ್ದರು. ಇದಾದ ಬಳಿಕ ಇದೀಗ ಆರಾಧ್ಯ ಬಚ್ಚನ್ ಮತ್ತು ಶಾರುಖ್ ಖಾನ್ ಪುತ್ರನ ಕೆಲವೊಂದು ವಿಡಿಯೋ ಮತ್ತು ಫೋಟೋಗಳು ಕೂಡಾ ವೈರಲ್ ಆಗುತ್ತಿವೆ.  

ಈ ಫೋಟೋ ಮತ್ತು ವಿಡಿಯೋದಲ್ಲಿ ಐಶ್ವರ್ಯ ಪುತ್ರಿ ಆರಾಧ್ಯ ಶಾರುಖ್ ಖಾನ್ ಪುತ್ರನನ್ನು ಪ್ರೀತಿಯಿಂದ ತಬ್ಬಿ ಮುದ್ದಾಡುತ್ತಿರುವುದನ್ನು ಕಾಣಬಹುದು. ಶಾರುಖ್  ಕಿರಿಯ ಪುತ್ರ  ಅಬ್‌ರಾಮ್‌ನನ್ನು ತಬ್ಬಿಕೊಂಡು ಆರಾಧ್ಯ ಡಾನ್ಸ್ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. 

ಇದನ್ನೂ ಓದಿ : Prashanth Neel: ʼನನಗೆ ಆ ಸಮಸ್ಯೆ ಇದೆ..ʼ ನಿರ್ದೇಶಕ ಪ್ರಶಾಂತ್‌ ನೀಲ್‌ ಕತ್ತಲಲ್ಲಿ ಸಿನಿಮಾ ಮಾಡೋಕೆ ಕಾರಣ ಇದೆ!

ಸ್ಟಾರ್ ಕಿಡ್ಸ್ ವಾರ್ಷಿಕ ದಿನಾಚರಣೆಯಿಂದ ಆನ್‌ಲೈನ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಅಲ್ಲಿ SRK ಅವರ ಕಿರಿಯ ಮಗ ಅಬ್‌ರಾಮ್ ಐಶ್ವರ್ಯಾ ರೈ ಪುತ್ರಿ ಜೊತೆ ನೃತ್ಯ ಮಾಡುವುದನ್ನು ಕಾಣಬಹುದು.

ಆರಾಧ್ಯ ಬಚ್ಚನ್ ಮತ್ತು ಅಬ್‌ರಾಮ್ ಖಾನ್ ಅವರ ವೀಡಿಯೊವನ್ನು ಇಲ್ಲಿ ನೋಡಿ:

 

ಇದನ್ನೂ ಓದಿ : ಬಿಗ್‌ಬಾಸ್‌ ವಿನಯ್ ಬೆಂಬಲಕ್ಕೆ ನಿಂತ ಕಿರುತೆರೆ ನಟಿ: ಅನು ಪೂವಮ್ಮಗೆ ನೆಗೆಟಿವ್‌ ಕಮೆಂಟ್ಸ್‌!

ಇನ್ನು ಆರಾಧ್ಯ ಬಚ್ಚನ್ ತಾತ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ತಮ್ಮ ಬ್ಲಾಗ್‌ನಲ್ಲಿ ಆರಾಧ್ಯ ಅಭಿನಯದ ವೀಡಿಯೊವನ್ನು ಹಂಚಿಕೊಂಡಿದ್ದು, ಕೊಂಡಾಡಿದ್ದಾರೆ. ವೇದಿಕೆಯಲ್ಲಿ ಆರಾಧ್ಯ ಅವರ ಪರ್ಫಾರ್ಮೆನ್ಸ್ ನೋಡುವುದು ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ. 

ಆರಾಧ್ಯ ಮತ್ತು ಅಬ್ ರಾಮ್ ಪರ್ಫಾರ್ಮೆನ್ಸ್  ನೋಡಲು ಐಒಶ್ವರ್ಯ, ಅಭಿಷೇಕ್ ಬಚ್ಚನ್, ಶಾರುಖ್ ಖಾನ್ ಮತ್ತು ಗೌರಿ ಖಾನ್ ಉಪಸ್ಥಿತರಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News