ಅಣ್ಣಾಮಲೈ ಅಭಿನಯದ 'ಅರಬ್ಬೀ' ಟ್ರೈಲರ್ ಬಿಡುಗಡೆ: ಕೈಗಳಿಲ್ಲದೆ ಈಜಿ ಗೆದ್ದ ಸಾಧಕನ ಕತೆ..!

Arabbie Movie Trailer: ವಿಶೇಷಚೇತನ ಯುವಕನೊಬ್ಬ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಕಥೆಯನ್ನು ನಿರ್ದೇಶಕ ರಾಜ್‌ಕುಮಾರ್ ಅವರು  ಅರಬ್ಬೀ ಎಂಬ  ಚಿತ್ರದ ಮೂಲಕ  ಹೇಳಹೊರಟಿದ್ದಾರೆ.

Written by - YASHODHA POOJARI | Edited by - Chetana Devarmani | Last Updated : Mar 14, 2024, 11:30 AM IST
  • ಅಣ್ಣಾಮಲೈ ಅಭಿನಯದ ಸಿನಿಮಾ
  • 'ಅರಬ್ಬೀ' ಟ್ರೈಲರ್ ಬಿಡುಗಡೆ
  • ವಿಶೇಷಚೇತನ ಯುವಕನ ಯಶೋಗಾಥೆ
ಅಣ್ಣಾಮಲೈ ಅಭಿನಯದ 'ಅರಬ್ಬೀ' ಟ್ರೈಲರ್ ಬಿಡುಗಡೆ: ಕೈಗಳಿಲ್ಲದೆ ಈಜಿ ಗೆದ್ದ ಸಾಧಕನ ಕತೆ..!  title=

Arabbie Movie Trailer: ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ, ಅಂಗವಿಕಲತೆಯೂ ಸಹ  ಅಡ್ಡಿಯಾಗಲಾರದು ಎಂದು ವಿಶ್ವಾಸ್ ಎಂಬ ವಿಶೇಷಚೇತನ ಯುವಕನೊಬ್ಬ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಕಥೆಯನ್ನು ನಿರ್ದೇಶಕ ರಾಜ್‌ಕುಮಾರ್ ಅವರು  ಅರಬ್ಬೀ ಎಂಬ  ಚಿತ್ರದ ಮೂಲಕ  ಹೇಳಹೊರಟಿದ್ದಾರೆ, ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯ ಜೊತೆಗೆ ತನ್ನ ಎರಡೂ ಕೈಗಳನ್ನು ಕಳೆದುಕೊಳ್ಳುವ ವಿಶ್ವಾಸ್, ತನ್ನ ಅಂಗವಿಕಲತೆಯ ಕಾರಣದಿಂದಲೇ  ಸಮಾಜದಲ್ಲಿ ಸಾಕಷ್ಟು ಅವಮಾನ ಅನುಭವಿಸುತ್ತಾನೆ. ನಂತರ ತನ್ನನ್ನು ಅವಮಾನಿಸಿದವರೆದುರೇ ಸಾಧನೆಮಾಡಿ ತೋರಿಸಬೇಕೆಂದು ನಿರ್ಧರಿಸಿ, ಹಠ, ಆತ್ಮವಿಶ್ವಾಸದಿಂದಲೇ ಗೆಲುವು ಸಾಧಿಸುತ್ತಾನೆ. ಸ್ವಿಮ್ಮಿಂಗ್ ಕೋಚ್  ಆಗಿ ನಾಯಕನಿಗೆ ಸ್ಪೂರ್ತಿ ತುಂಬುವ ಪಾತ್ರವನ್ನು ಅಣ್ಣಾಮಲೈ ಅವರು ನಿರ್ವಹಿಸಿದ್ದಾರೆ. 

ನಾಯಕನ ಗೆಳತಿಯೂ ಬೆನ್ನೆಲುಬಾಗಿ ನಿಲ್ಲುತ್ತಾಳೆ. ವಿಶ್ವಾಸ್ ಕೊನೆಗೂ ಅಂದುಕೊಂಡದ್ದನ್ನು ಸಾಧಿಸಿ ತೋರಿಸಿದನೇ ಇಲ್ಲವೇ ಎನ್ನುವುದೇ ಅರಬ್ಬೀ ಚಿತ್ರದ ಕಾನ್ಸೆಪ್ಟ್.  ಶ್ರೀ ವಿಜಯ ರಾಘವೇಂದ್ರ ಪ್ರೊಡಕ್ಷನ್ಸ್ ಮೂಲಕ ಚೇತನ್ ಸಿ.ಎಸ್. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ,  ಇತ್ತೀಚೆಗೆ ಈ ಚಿತ್ರದ ಟ್ರೈಲರ್‌ನ್ನು  ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ಅವರು  ಬಿಡುಗಡೆಗೊಳಿಸಿದರು. ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಆನಂದ್ ದಿಂಡವಾರ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.

ಇದನ್ನೂ ಓದಿ: Tukali Santhosh : ಬಿಗ್ ಬಾಸ್ ತುಕಾಲಿ ಸಂತೋಷ್​ ಕಾರು ಅಪಘಾತ.!

ವೇದಿಕೆಯಲ್ಲಿ ನಿರ್ಮಾಪಕ ಚೇತನ್ ಸಿ.ಎಸ್. ಮಾತನಾಡಿ ಈ ಹಿಂದೆ ಮಾಚಿದೇವ ಎಂಬ ಚಿತ್ರ ಮಾಡಿದ್ದೆ, ನಿರ್ದೇಶಕ ರಾಜ್‌ಕುಮಾರ್  ಬಂದು ಈ ಕಾನ್ಸೆಪ್ಟ್ ಹೇಳಿದಾಗ  ಇಷ್ಟವಾಯಿತು.  ಛಲವಿದ್ದರೆ ಏನನ್ನಾದರೂ ಮಾಡಿ ತೋರಿಸಬಹುದು ಎಂದು ಈ ಚಿತ್ರದಲ್ಲಿ ತೋರಿಸಿದ್ದೇವೆ,  ಉಡುಪಿ, ಅರಬ್ಬೀ ಸಮುದ್ರದಲ್ಲಿ 32 ದಿನಗಳವರೆಗೆ ಚಿತ್ರೀಕರಿಸಿದ್ದೇವೆ, ಎಂದು ಹೇಳಿದರು.

ನಿರ್ದೇಶಕ ರಾಜಕುಮಾರ್ ಮಾತನಾಡಿ ಕಳೆದ 18 ವರ್ಷಗಳಿಂದ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ.  ಕಾರ್ಯಕ್ರಮವೊಂದರಲ್ಲಿ  ವಿಶ್ವಾಸ್‌ರನ್ನು ನೋಡಿ, ಅವರ ಮೇಲೇ ಒಂದು ಸಿನಿಮಾ ಮಾಡಬಾರದೇಕೆ ಅನಿಸಿತು, ವಿಶ್ವಾಸ್ ರನ್ನು  ಒಪ್ಪಿಸಿ, ನಂತರ ಕೋಚ್ ಪಾತ್ರಕ್ಕೆ ಅಣ್ಣಾ ಮಲೈ ಅವರನ್ನು ಕರೆತಂದೆವು, ಅವರು ಯಾವುದೇ ಸಂಭಾವನೆ ಪಡೆಯದೆ ಅಭಿನಯಿಸಿದರು. ಚಿತ್ರವೀಗ ಬಿಡುಗಡೆಗೆ ಸಿದ್ದವಿದೆ ಎಂದು ಹೇಳಿದರು.

ನಾಯಕ ವಿಶ್ವಾಸ್ ಮಾತನಾಡಿ ಮೊದಲ ಬಾರಿಗೆ ಸಿನಿಮಾದಲ್ಲಿ ಆಕ್ಟ್ ಮಾಡಿದ್ದೇನೆ. ಅಣ್ಣಾಮಲೈ ಅವರೂ ನನ್ನ ಬಗ್ಗೆ ಕೇಳಿ ಒಪ್ಪಿದರು. ಚಿತ್ರದಲ್ಲಿ ನಾನೊಬ್ಬ ಈಜುಗಾರನಾಗಿ ಕಾಣಿಸಿಕೊಂಡಿದ್ದೇನೆ. ದೇವರ ಮೇಲಿನ ಕೋಪವನ್ನು ಹೇಗೆ ವ್ಯಕ್ತಪಡಿಸುವೆ, ದಿನನಿತ್ಯದ ಕೆಲಸಗಳನ್ನು ಹೇಗೆ ಮಾಡಿಕೊಳ್ಳುವೆ. ಸೊಸೈಟಿ ನನ್ನನ್ನು ಯಾವರೀತಿ ನೋಡುತ್ತದೆ ಎಂಬುದನ್ನೂ ಚಿತ್ರದಲ್ಲಿ ತೋರಿಸಿದ್ದಾರೆ. ಈವರೆಗೆ ನಾನು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: Ragini Dwivedi: ಸಿನಿಮಾ ಶೂಟಿಂಗ್ ವೇಳೆ ನಟಿ ರಾಗಿಣಿ ದ್ವಿವೇದಿ ಕಾಲಿಗೆ ಪೆಟ್ಟು, ಬ್ಯಾಂಡೇಜ್‌ ಹಾಕಿರುವ ಫೋಟೋ ವೈರಲ್

ಸಂಗೀತ ನಿರ್ದೇಶಕ ಕಂಬದ ರಂಗಯ್ಯ ಮಾತನಾಡಿ ಹಂಸಲೇಖ ಅವೇ ನನಗೆ ಸ್ಪೂರ್ತಿ. ವೇದಿಕೆಯಲ್ಲಿ ಹಾಡ್ತಿದ್ದ ನನ್ನನ್ನು ಕರೆದು ಈ ಅವಕಾಶ ನೀಡಿದರು. ಚಿತ್ರದಲ್ಲಿ 2 ಹಾಡುಗಳಿದ್ದು, ಚಂದನ್ ಶೆಟ್ಟಿ, ರಾಜೇಶ್ ಕೃಷ್ಣನ್ ಹಾಡಿದ್ದಾರೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದು ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್, ಉಪಾಧ್ಯಕ್ಷ ವೆಂಕಟೇಶ್, ಯಶವಂತಪುರ ಸರ್ಕಲ್ ಇನ್ಸ್ಪೆಕ್ಟರ್ ಅಜಯ್ ಸಾರಥಿ, ನಾಗೇಂದ್ರ ಅರಸ್, ವಿಜಯ್ ಚೆಂಡೂರ್ ಮುಂತಾದವರು ಚಿತ್ರದ ಬಗ್ಗೆ ಮಾತನಾಡಿದರು. ವಿಶ್ವಾಸ್‌ರಂಥ ವಿಶೇಷಚೇತನರಿಗೆ ನಮ್ಮ ಸಮಾಜ ಬರೀ ಅನುಕಂಪ ತೋರಿಸದೆ, ಅವರ ಪ್ರತಿಭೆಗೆ ತಕ್ಕಂತೆ ಅವಕಾಶಗಳನ್ನು ಕೊಟ್ಟರೆ,  ದೊಡ್ಡ ಸಾಧನೆ ಮಾಡುವರು ಎನ್ನುವುದೇ ಈ ಚಿತ್ರದ ಸಂದೇಶ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News