Anushka shetty : ಸಿನಿಮಾಗೆ ಬರೋಕಿಂತ ಮುಂಚೆ ನಟಿ ಅನುಷ್ಕಾ ಶೆಟ್ಟಿ ಈ ಶಾಲೆಯಲ್ಲಿ ಟೀಚರ್‌ ಆಗಿದ್ರು..! ಸಂಬಳ ಎಷ್ಟಿತ್ತು ಗೊತ್ತೆ..?

Anushka Shetty : ದಕ್ಷಿಣದ ಲೇಡಿ ಸೂಪರ್‌ಸ್ಟಾರ್ ಅನುಷ್ಕಾ ಶೆಟ್ಟಿ ನಟಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅರುಂಧತಿಯಲ್ಲಿ ಜೇಜಮ್ಮ, ಬಾಹುಬಲಿಯಲ್ಲಿ ದೇವಸೇನಾ ಸೇರಿದಂತೆ ಹಲವು ಹಿಟ್‌ ಸಿನಿಮಾಗಳಲ್ಲಿನ ತಮ್ಮ ಅದ್ಭುತ ಪಾತ್ರಗಳ ಮೂಲಕ ಕರಾವಳಿ ಬೆಡಗಿ ಜಗತ್ಪಸಿದ್ಧರಾಗಿದ್ದಾರೆ.

Written by - Krishna N K | Last Updated : Apr 15, 2024, 06:13 PM IST
    • ದಕ್ಷಿಣದ ಲೇಡಿ ಸೂಪರ್‌ಸ್ಟಾರ್ ಅನುಷ್ಕಾ ಶೆಟ್ಟಿ
    • ಬಾಹುಬಲಿಯಲ್ಲಿ ದೇವಸೇನಾ ಆಗಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದರು.
    • ನಟಿ ಇದೀಗ ಲೇಡಿ ಸೂಪರ್‌ ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
Anushka shetty : ಸಿನಿಮಾಗೆ ಬರೋಕಿಂತ ಮುಂಚೆ ನಟಿ ಅನುಷ್ಕಾ ಶೆಟ್ಟಿ ಈ ಶಾಲೆಯಲ್ಲಿ ಟೀಚರ್‌ ಆಗಿದ್ರು..! ಸಂಬಳ ಎಷ್ಟಿತ್ತು ಗೊತ್ತೆ..? title=

Anushka Shetty life story : ಕಳೆದ ವರ್ಷ ಮಿಸ್ಟರ್‌ ಆಂಡ್‌ ಮಿಸೆಸ್‌ ಪೋಲಿ ಶೆಟ್ಟಿ ಸಿನಿಮಾದ ಮೂಲಕ ಸಾಕಷ್ಟು ಸಮಯದ ನಂತರ ತೆರೆ ಮೇಲೆ ಬಂದಿದ್ದ ಸ್ವೀಟಿ ಇದೀಗ ಸ್ವಲ್ಪ ಬ್ರೇಕ್‌ ಪಡೆದುಕೊಂಡಿದ್ದಾರೆ. 2005 ರಲ್ಲಿ ಪುರಿ ಜಗನ್ನಾಥ್‌ ನಿರ್ದೇಶನದ ಸೂಪರ್‌ ಸಿನಿಮಾದ ಮೂಲಕ ಸಿನಿ ವೃತ್ತಿ ಪ್ರಾರಂಭಿಸಿದ ನಟಿ ಇದೀಗ ಲೇಡಿ ಸೂಪರ್‌ ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ತಮ್ಮ ಅಮೋಘ ನಟನೆ ಮತ್ತು ಸೌಂದರ್ಯದಿಂದಾಗಿ ಸೌತ್‌ ಸಿನಿ ರಸಿಕರ ಮೆಚ್ಚಿನ ನಟಿಯಾಗಿರುವ ಅನುಷ್ಕಾ, ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮನ್ನಣೆಗಳಿಸಿದರು. ಈ ಸಿನಿಮಾದಲ್ಲಿ ಪ್ರಭಾಸ್‌ಗೆ ಜೊತೆಯಾಗಿ ದೇವಸೇನಾ ಪಾತ್ರದಲ್ಲಿ ಅನುಷ್ಕಾ ನಟಿಸಿದ್ದಾರೆ. 

ಇದನ್ನೂ ಓದಿ:ನಟಿ ಮಹಾಲಕ್ಷ್ಮೀ, ನಿರ್ಮಾಪಕ ರವೀಂದರ್‌ ವಿಚ್ಛೇದನ ಫಿಕ್ಸ್?!‌ ವೈರಲ್‌ ಪೋಸ್ಟ್‌ನಿಂದ ಹೊರಬಿತ್ತು ಬಿಗ್‌ ಸಿಕ್ರೇಟ್!!

ಸ್ವೀಟಿ ಶೆಟ್ಟಿ : ಅನುಷ್ಕಾ ಶೆಟ್ಟಿ ಅವರ ನಿಜವಾದ ಹೆಸರು ಸ್ವೀಟಿ ಶೆಟ್ಟಿ. ವಿಶೇಷ ಅಂದ್ರೆ ಹೆಸರು ಬದಲಾವಣೆಯ ನಂತರವೂ ನಿರ್ದೇಶಕ ಎಸ್‌ಎಸ್ ರಾಜಮೌಳಿ ಮಾತ್ರ ಅವನ್ನು ನಿಜವಾದ ಹೆಸರಿನಿಂದ ಕರೆಯುವವರಲ್ಲಿ ಒಬ್ಬರು. ಅವರಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಮಂದಿ ಅನುಷ್ಕಾ ಅವರನ್ನು ಸ್ವೀಟಿ ಎಂದು ಮುದ್ದಾಗಿ ಕರೆಯುತ್ತಾರೆ.

ಅನುಷ್ಕಾ ಶೆಟ್ಟಿ ಸಿನಿರಂಗಕ್ಕೆ ಪ್ರವೇಶಿಸುವ ಮೊದಲು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಯಾವ ಊರಿನ ಶಾಲೆ ಅಂತ ಗೊತ್ತಿಲ್ಲ. ಸಂದರ್ಶನವೊಂದರಲ್ಲಿ ನಟಿ ತಾವು ಸುಮಾರು ಎರಡು ವರ್ಷಗಳ ಕಾಲ ಶಾಲಾ ಮಕ್ಕಳಿಗೆ ಪಾಠ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಜೈಲಿನಿಂದ ಹೊರ ಬರ್ತಿದ್ದಂತೆ 3 ಕೋಟಿ ರೂ. ಬೆಲೆ ಬಾಳುವ ಕಾರು ಖರೀದಿಸಿ ಬಿಗ್​ಬಾಸ್​ ವಿನ್ನರ್​..!

ಅನುಷ್ಕಾ ಪಾಠ ಮಾಡುವುದರ ಜೊತೆಗೆ ಮಕ್ಕಳಿಗೆ ಯೋಗ ಕಲಿಸುತ್ತಿದ್ದರು ಎಂದು ತಿಳಿದು ಬಂದಿದೆ. ಸ್ವೀಟಿ ಜನಪ್ರಿಯ ಯೋಗ ತರಬೇತುದಾರರಾಗಿರುವ ಭರತ್ ಠಾಕೂರ್ ಅವರ ಬಳಿ ತರಬೇತಿ ಪಡೆದಿದ್ದಾರೆ. ಹಿಂದಿನ ಸಂದರ್ಶನದಲ್ಲಿ ನಟಿ ಇದು ತನ್ನ ಜೀವನದ ಅತ್ಯುತ್ತಮ ಹಂತ ಎಂದು ಹೇಳಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News