Anushka Shetty : ಏನಾಯ್ತು ಚೆಂದುಳ್ಳಿ ಚೆಲುವೆಗೆ..! ಹೇಗಿದ್ದ ʼಅನುಷ್ಕಾʼ ಹೇಗಾಗಿದಾರೆ ನೋಡಿ

ಸೌತ್‌ನ ಸೂಪರ್‌ಹಿಟ್ ನಟಿ ಅನುಷ್ಕಾ ಶೆಟ್ಟಿ ಕುರಿತು ಪರಿಚಯ ನೀಡುವ ಅಗತ್ಯವಿಲ್ಲ. ತಮ್ಮ ಅಮೋಘ ಅಭಿನಯ ಮತ್ತು ಸೌಂದರ್ಯದ ಮೂಲಕ ಭಾರತೀಯ ಸಿನಿರಂಗದಲ್ಲಿ ಮಿಂಚಿದ ನಟಿ. ಸದ್ಯ ಅನುಷ್ಕಾಗೆ ಏನಾಯಿತೋ ಏನೋ ತುಂಬಾ ಸೈಲೆಂಟ್‌ ಆಗಿದ್ದಾರೆ. ಹೊಸ ಹೊಸ ಸಿನಿಮಾಗಳ ಮೂಲಕ ಸುದ್ದಿಯಲ್ಲಿರುತ್ತಿದ್ದ ಕರಾವಳಿ ಸುಂದರಿ ಸದ್ಯ ಸುಮ್ಮನಾಗಿದ್ದಾರೆ. ಅಲ್ಲದೆ, ಬಳುಕುವ ಬಳ್ಳಿಯಂತಿದ್ದ ನಟಿ ಸದ್ಯ ತುಂಬಾ ಬದಲಾಗಿದ್ದು, ಅನುಷ್ಕಾ ಅಭಿಮಾನಿಗಳಿಗೆ ಶಾಕ್‌ ನೀಡಿದೆ.

Written by - Krishna N K | Last Updated : Mar 4, 2023, 06:37 PM IST
  • ಸೂಪರ್‌ಹಿಟ್ ನಟಿ ಅನುಷ್ಕಾ ಶೆಟ್ಟಿ ಕುರಿತು ಪರಿಚಯ ನೀಡುವ ಅಗತ್ಯವಿಲ್ಲ.
  • ಬಳುಕುವ ಬಳ್ಳಿಯಂತಿದ್ದ ನಟಿ ಸದ್ಯ ತುಂಬಾ ಬದಲಾಗಿದ್ದು, ಅನುಷ್ಕಾ ಅಭಿಮಾನಿಗಳಿಗೆ ಶಾಕ್‌ ನೀಡಿದೆ.
  • ಇತ್ತೀಚೆಗೆ ದೇವಸ್ಥಾನವೊಂದರಲ್ಲಿ ಅನುಷ್ಕಾ ಕಾಣಿಸಿಕೊಂಡಾಗ ಬಗೆ ಕಂಡು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
Anushka Shetty : ಏನಾಯ್ತು ಚೆಂದುಳ್ಳಿ ಚೆಲುವೆಗೆ..! ಹೇಗಿದ್ದ ʼಅನುಷ್ಕಾʼ ಹೇಗಾಗಿದಾರೆ ನೋಡಿ title=

Anushka Shetty : ಸೌತ್‌ನ ಸೂಪರ್‌ಹಿಟ್ ನಟಿ ಅನುಷ್ಕಾ ಶೆಟ್ಟಿ ಕುರಿತು ಪರಿಚಯ ನೀಡುವ ಅಗತ್ಯವಿಲ್ಲ. ತಮ್ಮ ಅಮೋಘ ಅಭಿನಯ ಮತ್ತು ಸೌಂದರ್ಯದ ಮೂಲಕ ಭಾರತೀಯ ಸಿನಿರಂಗದಲ್ಲಿ ಮಿಂಚಿದ ನಟಿ. ಸದ್ಯ ಅನುಷ್ಕಾಗೆ ಏನಾಯಿತೋ ಏನೋ ತುಂಬಾ ಸೈಲೆಂಟ್‌ ಆಗಿದ್ದಾರೆ. ಹೊಸ ಹೊಸ ಸಿನಿಮಾಗಳ ಮೂಲಕ ಸುದ್ದಿಯಲ್ಲಿರುತ್ತಿದ್ದ ಕರಾವಳಿ ಸುಂದರಿ ಸದ್ಯ ಸುಮ್ಮನಾಗಿದ್ದಾರೆ. ಅಲ್ಲದೆ, ಬಳುಕುವ ಬಳ್ಳಿಯಂತಿದ್ದ ನಟಿ ಸದ್ಯ ತುಂಬಾ ಬದಲಾಗಿದ್ದು, ಅನುಷ್ಕಾ ಅಭಿಮಾನಿಗಳಿಗೆ ಶಾಕ್‌ ನೀಡಿದೆ.

ಬಾಹುಬಲಿ ದೇವಸೇನಾ ಪಾತ್ರದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ ಮಿಂಚಿ ಎಲ್ಲರ ಪ್ರೀತಿಗೆ ಅನುಷ್ಕಾ ಪಾತ್ರರಾಗಿದ್ದರು. ಅನುಷ್ಕಾ ಅಂದರೆ ಬಾಹುಬಲಿ ದೇವಸೇನ ಅಂದ ಕಣ್ಮುಂದೆ ಬರುತ್ತದೆ. ಅಲ್ಲದೆ, ಪ್ರಭಾಸ್ ಹೆಗಲ ಮೇಲೆ ಏರಿ ನದಿ ದಾಟುವ ದೃಶ್ಯ ಮತ್ತು ಖತ್ತಿ ಹಿಡಿದು ಶತ್ರುಗಳ ಜೊತೆ ಹೋರಾಡುತ್ತ ಎಂಟ್ರಿ ಕೊಡುವ ಸೀನ್‌ ಇನ್ನೂ ಅನುಷ್ಕಾ ಅಭಿಮಾನಿಗಳ ಕಣ್ಣಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಇತ್ತೀಚೆಗೆ ದೇವಸ್ಥಾನವೊಂದರಲ್ಲಿ ಅನುಷ್ಕಾ ಕಾಣಿಸಿಕೊಂಡಾಗ ಬಗೆ ಕಂಡು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ಇದನ್ನೂ ಓದಿ: Urfi Javed: ಉರ್ಫಿ ಜೊತೆ ಅರ್ಜುನ್ ಕಪೂರ್ ಫೋಟೋ : ಸಖತ್‌ ಟ್ರೋಲ್‌!

ಅನುಷ್ಕಾ ಶೆಟ್ಟಿಯ ಇತ್ತೀಚಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅನುಷ್ಕಾ ದೇವಸ್ಥಾನದಲ್ಲಿ ಬಿಳಿ ಸಲ್ವಾರ್ ಸೂಟ್‌ನಲ್ಲಿ ಕುಳಿತು, ಕಿವಿಯಲ್ಲಿ ಜುಮ್ಕಾವನ್ನು ಧರಿಸಿ ಕಂಡುಬಂದರು. ಈ ಸಮಯದಲ್ಲಿ, ಅವಳು ಮೊದಲಿಗಿಂತ ಹೆಚ್ಚು ಬದಲಾಗಿದ್ದಾಳೆ. ಅನುಷ್ಕಾ ತೂಕ ಹೆಚ್ಚಿಸಿಕೊಂಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಬಾಹುಬಲಿಯ ಅನುಷ್ಕಾ ಹಾಗೂ ಇಂದಿನ ಅನುಷ್ಕಾಗೆ ಸಾಕಷ್ಟು ಬದಲಾವಣೆಯನ್ನು ಕಾಣಬಹುದು.

ಈ ಚಿತ್ರಗಳಿಗೆ ಅನುಷ್ಕಾ ಅಭಿಮಾನಿಗಳು ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಆಕೆಯ ಬದಲಾದ ನೋಟವನ್ನು ಕುರಿತು ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು ತೂಕ ಇಳಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಕೆಲವು ಅಭಿಮಾನಿಗಳು ಈ ಲುಕ್‌ ಕೂಡ ಚನ್ನಾಗಿದೆ. ಕ್ಯೂಟ್‌ ಆಗಿ ಕಾಣುತ್ತಿದ್ದಿರಾ ಅಂತ ಸಮರ್ಥಿಸಿಕೊಂಡಿದ್ದಾರೆ. ಸದ್ಯ ಅನುಷ್ಕಾ ʼಮಿಸ್‌ ಶೆಟ್ಟಿ ಮಿಸ್ಟರ್‌ ಪೊಲಿಶೆಟ್ಟಿʼ ಸಿನಿಮಾದ ಮೂಲಕ ಮತ್ತೇ ತೆರೆಗೆ ಬರಲು ಸಿದ್ಧರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News