Sandalwood Actress Amulya Come Back: ಚಂದನವನದಲ್ಲಿ ಗೋಲ್ಡನ್ ಕ್ವೀನ್‌ಯೆಂದೇ ಖ್ಯಾತಿ ಪಡೆದ ನಟಿ ಅಮೂಲ್ಯ, ಚಿಕ್ಕ ವಯಸ್ಸಿನಿಂದಲೇ ಹಲವಾರು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಸ್ಸು ಗೆದ್ದದರು. ಆದರೆ ಅಮೂಲ್ಯ ಚೆಲುವಿನ ಚಿತ್ತಾರದ ಸಿನಿಮಾ ಮೂಲಕ ಮೊದಲ ಬಾರಿ ನಾಯಕಿ ನಟಿಯಾಗಿ ಅಭಿನಯಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ಅಮೂಲ್ಯ 2017 ರಲ್ಲಿ ತೆರೆಕಂಡ ಮಾಸ್ತಿ ಗುಡಿ ಹಾಗೂ ಮುಗುಳುನಗೆ ಚಿತ್ರಗಳಲ್ಲಿ ಕೊನೆಯದಾಗಿ ಕಾಣಿಸಿಕೊಂಡು, ಮದುವೆ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದರು.
ಸದಾ ಸೋಷಿಯಲ್ ಮಿಡಿಯಾದಲಲ್ಲಿ ಆಕ್ಟೀವ್ ಆಗಿರುವ ಅಮೂಲ್ಯ ಆಗಾಗ ತಾವು ಪ್ರವಾಸಕ್ಕೆ ತೆರೆಳಿರುವ ಹಾಗೂ ತಮ್ಮ ಮಕ್ಕಳ ಫೋಟೋಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದರು. ಹಾಗೆಯೇ ಚುನಾವಣೆ ಸಮಯದಲ್ಲಿ ಪ್ರಚಾರದಲ್ಲಿ ಭಾಗವಹಿಸಿತ್ತಿದ್ದರು. ಇದೀಗ ಅಮೂಲ್ಯ ಮತ್ತೆ ಚಿತ್ರರಂಗಕ್ಕೆ ಬರುವ ಕುರಿತು ಸುಳಿವು ನೀಡಿದ್ದಾರೆ. ಸಿನಿಮಾ ರಂಗಕ್ಕೆ ಅಮೂಲ್ಯ ಮತ್ತೆ ಮರು ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಲೇ ಇದ್ದರೂ, ಇಲ್ಲಿಯವರೆಗೂ ಅಧಿಕೃತ ಮಾಹಿತಿ ಇರಲಿಲ್ಲ.
ಇದನ್ನೂ ಓದಿ: ಪಸಂದಾಗವ್ನೇ.. ಹಾಡಿಗೆ ಡ್ಯಾನ್ಸ್ ಮಾಡಿದ ಪುಟ್ಟಕ್ಕನ ಮಗಳು: ಸಂಜನಾ ವೈರಲ್ ವಿಡಿಯೋ!
ಹೌದು.. ನಟಿ ಅಮೂಲ್ಯ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ 2024ರ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡುತ್ತಿರುವಾಗ, ಆಗಲೇ ಎರಡು ಸ್ಕ್ರಿಪ್ಟ್ ಕೇಳಿದ್ದೇನೆ. ಸ್ಕ್ರಿಪ್ಟ್ ಇಷ್ಟವಾದ ತಕ್ಷಣವೇ ತಿಳಿಸುತ್ತೇನೆ ಎಂದಿದ್ದಾರೆ. ಸದ್ಯ ಸ್ವತಃ ಅಮೂಲ್ಯ ಅವರೇ ಸಿನಿಮಾ ರಂಗಕ್ಕೆ ಕಂಬ್ಯಾಕ್ ಕುರಿತು ಮಾತನಾಡಿದ್ದು, ಮತ್ತೆ ಅಭಿಮಾನಿಗಳಿಗೆ ಈ ಮೂಲಕ ಖುಷಿ ಸುದ್ದಿ ಕೊಟ್ಟಿದ್ದಾರೆ. ಸುಮಾರು ಎಂಟು ವರ್ಷದಿಂದ ಬಳಿಕ ಈ ಸುದ್ದಿ ಕೇಳಿ ಅಮೂಲ್ಯ ಫಾನ್ಸ್‌ಗೆ ಸಿಹಿ ಉಣಿಸಿದಂತಾಗಿದೆ.
ಗೋಲ್ಡನ್ ಕ್ವೀನ್ ಅಮೂಲ್ಯ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ 2024ರ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ "ಬಾಲ್ಯದಿಂದಲೂ ನಾನು ಸಿನಿಮಾ ರಂಗದ ಜೊತೆನೇ ಬೆಳೆದೋಳು. ನನಗೆ ಸಿನಿಮಾ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಬ್ಯುಸಿನೆಸ್ ಅರ್ಥವಾಗಲ್ಲ. ಹಾಗಾಗಿ ಸಿನಿಮಾವನ್ನೇ ನಾನು ಮಾಡಬೇಕು. ಕಂಡಿತಾ ಮತ್ತೆ ಸಿನಿಮಾ ರಂಗಕ್ಕೆ ಬರ್ತೀನಿ. ಸಿನಿಮಾಗಳನ್ನು ಮಾಡುತ್ತೇನೆ. ಅತೀ ಶೀಘ್ರದಲ್ಲೇ ಎಲ್ಲವನ್ನೂ ತಿಳಿಸ್ತೀನಿ" ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.