'ಅಯೋಗ್ಯ'ನ ಎಂಟ್ರಿ ಸಾಂಗ್ ಬಿಡುಗಡೆ ಮಾಡಿದ ರೆಬಲ್ ಸ್ಟಾರ್

 'ಅಯೋಗ್ಯ' ಚಿತ್ರದ ಟೈಟಲ್ ಹಾಡನ್ನು ಗುರುವಾರ ರೆಬಲ್ ಸ್ಟಾರ್ ಅಂಬರೀಶ್ ಬಿಡುಗಡೆ ಮಾಡಿದರು.   

Last Updated : Jul 19, 2018, 06:29 PM IST
'ಅಯೋಗ್ಯ'ನ ಎಂಟ್ರಿ ಸಾಂಗ್ ಬಿಡುಗಡೆ ಮಾಡಿದ ರೆಬಲ್ ಸ್ಟಾರ್  title=

ಬೆಂಗಳೂರು: ನೀನಾಸಂ ಸತೀಶ್ ಅಭಿನಯದ ಮಂಡ್ಯದ ಹಳ್ಳಿಗೆಲ್ಲ ಇವ್ನೆ ಒಳ್ಳೇ ಲೀಡರ್... ಆಗೋಕೆ ಮುಂಚೆ ಯೋಗ್ಯ, ಆಗ್ಬೇಕು ನೀ ಅಯೋಗ್ಯ..' ಎನ್ನುವ 'ಅಯೋಗ್ಯ' ಚಿತ್ರದ ಟೈಟಲ್ ಹಾಡನ್ನು ಗುರುವಾರ ರೆಬಲ್ ಸ್ಟಾರ್ ಅಂಬರೀಶ್ ಬಿಡುಗಡೆ ಮಾಡಿದರು. 

ಅಯೋಗ್ಯ ಚಿತ್ರದ ಹೀರೋ ಎಂಟ್ರಿ ಹಾಡಿಗೆ ಸುಮಾರು 35 ಲಕ್ಷ ರೂಪಾಯಿ ವೆಚ್ಚದ ದುಬಾರಿ ಸೆಟ್​ ಹಾಕಿ ಚಿತ್ರೀಕರಣ ಮಾಡಲಾಗಿದ್ದು, ಸತೀಶ್ ಜೊತೆ 60 ಮಂದಿ ಡ್ಯಾನ್ಸರ್​ಗಳು ಸ್ಟೆಪ್ ಹಾಕಿದ್ದಾರೆ. ಚಿತ್ರದ ಹೀರೋ ಎಂಟ್ರಿ ಹಾಡು ಯೂಟ್ಯೂಬ್'ನಲ್ಲಿ ಅಪ್ಲೋಡ್ ಮಾಡಿದ ಮೂರೇ ಗಂಟೆಗಳಲ್ಲಿ 15 ಸಾವಿರ ಮಂದಿ ಹಾಡನ್ನು ವೀಕ್ಷಿಸಿದ್ದಾರೆ. 

ಮಂಡ್ಯ ಭಾಷೆಯ, ಹಳ್ಳಿ ಸೊಗಡಿನ ಧಾಟಿಯಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ಚಿತ್ರದ ಹೀರೋ ನೀನಾಸಂ ಸತೀಶ್ ಅವರನ್ನು ಭರ್ಜರಿಯಾಗಿ ಬಿಂಬಿಸಲಾಗಿದೆ. ಈ ಚಿತ್ರದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನ ಪಾತ್ರದಲ್ಲಿ ಸತೀಶ್‌ ನೀನಾಸಂ ಕಾಣಿಸಿಕೊಂಡಿದ್ದು, ಅಯೋಗ್ಯನೊಬ್ಬ ಗ್ರಾಮ ಪಂಚಾಯ್ತಿ ಸದಸ್ಯನಾಗಿ ಹೇಗೆ ಯೋಗ್ಯನಾಗಿ ಬದಲಾಗುತ್ತಾನೆ ಎನ್ನುವುದು ಕಥೆ. ಮೊದಲ ಬಾರಿಗೆ ಸತೀಶ್​ ಹಾಗೂ ರಚಿತಾ ರಾಮ್​ ಒಟ್ಟಿಗೇ ಅಭಿನಯಿಸಿದ್ದಾರೆ. 

ಈಗಾಗಲೇ ಬಿಡುಗಡೆಯಾಗಿರುವ 'ಅಯೋಗ್ಯ' ಚಿತ್ರದ ಟೀಸರ್‌ನಿಂದಾಗಿ ಜನರಲ್ಲಿ ಸಿಕ್ಕಾಪಟ್ಟೆ ಕ್ರೇಜ್‌ ಕ್ರಿಯೇಟ್‌ ಆಗಿದೆ. ತನ್ನ ಮೇಕಿಂಗ್‌ ಮತ್ತು ಸ್ಟಿಲ್‌ಗಳಿಂದಾಗಿ ಸಿಕ್ಕಾಪಟ್ಟೆ ಗಮನ ಸೆಳೆದಿದ್ದ ಅಯೋಗ್ಯ ಸಿನಿಮಾದ ಏನಮ್ಮಿ ಹಾಡನ್ನು ಇತ್ತೀಚೆಗೆ ನಟ ಧ್ರುವ ಸರ್ಜಾ ರಿಲೀಸ್‌ ಮಾಡಿದ್ದರು. ಆ ಹಾಡನ್ನು ಇದುವರೆಗೂ 1,350,849ಮಂದಿ ವೀಕ್ಷಿಸಿದ್ದಾರೆ. 

ಮಹೇಶ್ ಕುಮಾರ್ ನಿರ್ದೇಶನದ 'ಅಯೋಗ್ಯ' ಸಿನಿಮಾಕ್ಕೆ ಶರತ್ ಚಕ್ರವರ್ತಿ ಸಂಭಾಷಣೆ, ಅರ್ಜುನ್ ಜನ್ಯ ಅವರ ಸಂಗೀತ, ಪ್ರೀತಮ್‌ ತೆಗ್ಗಿನಮನೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌.ಪೇಟೆ, ಸರಿತ, ರವಿಶಂಕರ್‌, ರಂಗಾಯಣ ರಘು, ತಬಲಾ ನಾಣಿ, ಸಾಧು ಕೋಕಿಲ, ಬುಲೆಟ್‌ ಪ್ರಕಾಶ್‌, ಕುರಿ ಪ್ರತಾಪ್‌ ಸೇರಿದಂತೆ ನುರಿತ ಕಲಾವಿದರು ಅಭಿನಯಿಸುತ್ತಿದ್ದಾರೆ. ಒಟ್ಟಾರೆ ಸಿತ್ರದ ತಿಸರ್ ಮತ್ತು ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಸಿನಿಪ್ರಿಯರು ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.
 

Trending News