Actress Tragic Deaths: ಬಾಲಿವುಡ್ ಉದ್ಯಮವು ಎಲ್ಲರಿಗೂ ಹೊರಗಿನಿಂದ ನೋಡಲು ಮನಮೋಹಕ ಮತ್ತು ಬೆರಗುಗೊಳಿಸುವ ವೇದಿಕೆ ಎಂದು ಪರಿಗಣಿಸಲಾಗಿದೆ. ಇದು ಸಹ ಸಹಜ ಏಕೆಂದರೆ ನಾವು ಯಾವಾಗಲೂ ದೊಡ್ಡ ಪರದೆಯ ಮೇಲೆ ಇಂತಹದನ್ನು ನೋಡುತ್ತೇವೆ ಅಷ್ಟೇ ಅಲ್ಲದೆ ಕೆಲವೊಮ್ಮೆ ಚಲನಚಿತ್ರ ಕಲಾವಿದರನ್ನು ಅನುಸರಿಸುವುದು ಮತ್ತು ಅವರಂತೆ ಜೀವನಶೈಲಿಯನ್ನು ನಡೆಸುವುದು ನಮಗೆ ಒಂದು ರೀತಿಯ ಹುಮ್ಮಸ್ಸು ಮತ್ತು ಉತ್ಸಾಹವನ್ನು ತರುತ್ತದೆ.ಆದರೆ ತೆರೆಮರೆಯ ಸತ್ಯ ಬೇರೆಯೇ ಇರುತ್ತದೆ. ಏಕೆಂದರೆ ಈ ಸಿನಿಮಾ ತಾರೆಯರ ಜೀವನವೂ ಸಹ ದುಃಖ, ಸಮಸ್ಯೆಗಳಿಂದ ಕೂಡಿದೆ. ಇದರಿಂದ ಬೇಸತ್ತು ಸಾವಿಗೆ ಶರಣಾದ ಅನೇಕ ಬಾಲಿವುಡ್ ನಟಿಯರಿದ್ದಾರೆ.ಈ ಲೇಖನದಲ್ಲಿ ಅಂತಹ ದುರಂತ ಸಾವನ್ನು ಕಂಡಂತಹ ನಟಿಯರ ಬಗ್ಗೆ ತಿಳಿಸುತ್ತೇವೆ.
ಇದನ್ನೂ ಓದಿ: Chitradurga: ನೀಟ್ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಸಾವು!
ಮಧುಬಾಲಾ
ಹಿಂದಿ ಚಿತ್ರರಂಗದ ಹಿರಿಯ ನಟಿಯೊಬ್ಬರ ಹೆಸರು ಚರ್ಚೆಯಾದಾಗಲೆಲ್ಲಾ ಅದರಲ್ಲಿ ನಟಿ ಮಧುಬಾಲಾ ಅವರ ಹೆಸರೂ ಸೇರಿಕೊಳ್ಳುತ್ತದೆ. ಅವರ ನಟನೆ ಮತ್ತು ಸೌಂದರ್ಯದ ಆಧಾರದ ಮೇಲೆ, ಮಧುಬಾಲಾ ಸಾರ್ವಕಾಲಿಕ ಅತ್ಯುತ್ತಮ ನಟಿಯರಲ್ಲಿ ಒಬ್ಬರು.ಆದರೆ ಸೂಪರ್ ಸ್ಟಾರ್ ದಿಲೀಪ್ ಕುಮಾರ್ ಜೊತೆಗಿನ ಬ್ರೇಕ್ ಅಪ್ ನಂತರ ಮಧುವಾಲಾ ಅವರ ಜೀವನ ತುಂಬಾ ದುಃಖಕರವಾಗತೊಡಗಿತು. ಆದರೆ ನಂತರ ಮಧುಬಾಲಾ ಜನ್ಮಜಾತ ಹೃದಯ ಕಾಯಿಲೆಯಿಂದ ಬಳಲಿ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪಿದರು.
ಮೀನಾ ಕುಮಾರಿ
ಈ ಪಟ್ಟಿಯಲ್ಲಿ ಯುಗದ ಅತ್ಯುತ್ತಮ ನಟಿ ಎಂದು ಕರೆಸಿಕೊಂಡಂತಹ ಮೀನಾ ಕುಮಾರಿ ಅವರ ಹೆಸರೂ ಸೇರಿದೆ. ‘ಬೈಜು ಬಾವ್ರಾ, ಸಾಹೇಬ್ ಬಿವಿ ಔರ್ ಗುಲಾಮ್, ಪಕೀಜಾ’ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿದ್ದ ಮೀನಾ ಕುಮಾರಿ ಅವರ ಜೀವನದ ಕೊನೆಯ ಕ್ಷಣಗಳಲ್ಲಿ ಆಸ್ಪತ್ರೆಯ ಬಿಲ್ ಕಟ್ಟಲು ಕೂಡ ಹಣವಿರಲಿಲ್ಲ ಎಂದು ನಂಬಲಾಗಿದೆ. ಲಿವರ್ ಸಿರೋಸಿಸ್‌ನೊಂದಿಗೆ ಹೋರಾಡುತ್ತಿರುವಾಗ ಮೀನಾ ನೋವಿನಿಂದ ಇಹಲೋಕಕ್ಕೆ ವಿದಾಯ ಹೇಳಿದ್ದರು.
ಪರ್ವೀನ್ ಬಾಬಿ
80ರ ದಶಕದಲ್ಲಿ ತಮ್ಮ ನಟನೆ ಮತ್ತು ಸೌಂದರ್ಯದಿಂದ ಸಂಚಲನ ಮೂಡಿಸಿದ್ದ ನಟಿ ಪರ್ವೀನ್ ಬಾಬಿ ಜನವರಿ 22, 2005 ರಂದು, ಪರ್ವೀನ್ ಅವರ ಶವ ಆಕೆಯ ಮನೆಯಲ್ಲಿ ಪತ್ತೆಯಾಗಿತ್ತು. ಮೂರರವರೆಗೂ ಪರ್ವೀನ್ ಶವ ಆಕೆಯ ಮನೆಯಲ್ಲಿಯೇ ಇತ್ತು ಎನ್ನಲಾಗಿದೆ. ಎಡಗಾಲಿನಲ್ಲಿ ಗ್ಯಾಂಗ್ರೀನ್ ಇದ್ದು, ಪರ್ವೀನ್ ಬಾಬಿ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು. ನಿರ್ದೇಶಕ ಮಹೇಶ್ ಭಟ್ ಜೊತೆಗಿನ ಸಂಬಂಧದ ಬಗ್ಗೆ ಪರ್ವೀನ್ ಹೆಸರು ಯಾವಾಗಲೂ ಚರ್ಚೆಯಲ್ಲಿತ್ತು.
ಸ್ಮಿತಾ ಪಾಟೀಲ್
ಬಾಲಿವುಡ್ ಹಿರಿಯ ನಟ ರಾಜ್ ಬಬ್ಬರ್ ಅವರ ಎರಡನೇ ಪತ್ನಿ ಹಾಗೂ ಖ್ಯಾತ ನಟಿ ಸ್ಮಿತಾ ಪಾಟೀಲ್ ಕೂಡ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿದರು. 1986 ರಲ್ಲಿ ಅವರ ಮಗ ಮತ್ತು ನಟ ಪ್ರತೀಕ್ ಬಬ್ಬರ್ ಜನಿಸಿದ ನಂತರ, ಸ್ಮಿತಾ ಬಹಳಷ್ಟು ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಿದರು ಎಂದು ನಂಬಲಾಗಿದೆ. ಇದರಿಂದಾಗಿ ಸ್ಮಿತಾ ತಮ್ಮ 31ನೇ ವಯಸ್ಸಿನಲ್ಲಿಯೇ ಕೊನೆಯುಸಿರೆಳೆದರು.
ಇದನ್ನೂ ಓದಿ: Lok sabha Election 2024: ಲೋಕಸಭಾ ಚುನಾವಣೆಯ ನಂತರ ಬದಲಾಗ್ತಾರಾ ಸಿಎಂ?
ದಿವ್ಯಾ ಭಾರತಿ
90ರ ದಶಕದಲ್ಲಿ ಕೇವಲ ಎರಡೇ ವರ್ಷದಲ್ಲಿ 12 ಸಿನಿಮಾ ಮಾಡಿದ್ದ ಖ್ಯಾತ ನಟಿ ದಿವ್ಯಾ ಭಾರತಿ ಅವರನ್ನು ಯಾರು ಮರೆಯಲು ಸಾಧ್ಯವಿಲ್ಲ. ದಿವ್ಯಾ ಅವರ ಈ 12 ಚಿತ್ರಗಳಲ್ಲಿ, 'ದೀವಾನಾ, ವಿಶ್ವಾತ್ಮ, ಶೋಲಾ ಮತ್ತು ಶಬನಂ' ಮುಂತಾದ ಹಲವು ಚಿತ್ರಗಳು ಸೂಪರ್‌ಹಿಟ್ ಎಂದು ಸಾಬೀತಾಯಿತು. ಆದರೆ 1993ರ ಏಪ್ರಿಲ್ 5ರಂದು ಐದನೇ ಮಹಡಿಯಲ್ಲಿರುವ ಮನೆಯ ಕಿಟಕಿಯಿಂದ ಬಿದ್ದು ದಿವ್ಯಾ ಭಾರತಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಇದರಿಂದ ಅವರ ಅಭಿಮಾನಿಗಳು ಎದೆಗುಂದಿದ್ದರು. ಈ ಮನೆಯಲ್ಲಿ ದಿವ್ಯಾ ತನ್ನ ಪತಿ ಸಾಜಿದ್ ನಾಡಿಯಾಡ್ವಾಲಾ ಜೊತೆ ವಾಸವಿದ್ದರು ಎನ್ನಲಾಗಿತ್ತು.
ಜಿಯಾ ಖಾನ್
ಸೂಪರ್ ಸ್ಟಾರ್ ಅಮೀರ್ ಖಾನ್ ಜೊತೆಗಿನ ಗಜನಿ ಚಿತ್ರದ ಮೂಲಕ ತಮ್ಮ ಛಾಪು ಮೂಡಿಸಿದ್ದ ನಟಿ ಜಿಯಾ ಖಾನ್ ಸಾವು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ನಟಿ ಜೂನ್ 3, 2013 ರಂದು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಜಿಯಾ ತನ್ನ ವೃತ್ತಿಜೀವನದ ಬಗ್ಗೆ ಚಿಂತಿತರಾಗಿದ್ದರು ಎಂದು ಹೇಳಲಾಗಿದೆ. ಜಿಯಾ ಅವರ ತಾಯಿ ರಬಿಯಾ ಖಾನ್ ಅವರು ತಮ್ಮ ಗೆಳೆಯ ಮತ್ತು ನಟ ಸೂರಜ್ ಪಂಚೌಲಿ ಅವರೊಂದಿಗಿನ ಸಂಬಂಧದ ಬಗ್ಗೆ ತುಂಬಾ ಚಿಂತಿತರಾಗಿದ್ದರು ಎಂದು ಆರೋಪಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.