ನನ್ನ ತಂದೆ ತಾಯಿ ಸೌಮ್ಯದ ಹುಡುಗನೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಾರೆ- ಸೋನಾಕ್ಷಿ ಸಿನ್ಹಾ

ನಟಿ ಸೋನಾಕ್ಷಿ ಸಿನ್ಹಾ ಅವರ ಪೋಷಕರು  ಸೌಮ್ಯ ಸ್ವಭಾವದ (ಸುಶೀಲ್ ಲಡ್ಕಾ) ಹುಡುಗನನ್ನು  ಡೇಟ್ ಮಾಡಲು ಬಯಸುತ್ತಾರೆ, ಆದರೆ ಬಾಲಿವುಡ್ ನಲ್ಲಿ  ಅಂತಹ ವ್ಯಕ್ತಿಯನ್ನು ಕಂಡುಹಿಡಿಯುವುದು ಕಷ್ಟ ಎಂದು ಅವರು ಹೇಳುತ್ತಾರೆ. 

Last Updated : Jul 19, 2019, 07:36 PM IST
ನನ್ನ ತಂದೆ ತಾಯಿ ಸೌಮ್ಯದ ಹುಡುಗನೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಾರೆ- ಸೋನಾಕ್ಷಿ ಸಿನ್ಹಾ  title=
file photo

ಮುಂಬೈ: ನಟಿ ಸೋನಾಕ್ಷಿ ಸಿನ್ಹಾ ಅವರ ಪೋಷಕರು  ಸೌಮ್ಯ ಸ್ವಭಾವದ (ಸುಶೀಲ್ ಲಡ್ಕಾ) ಹುಡುಗನನ್ನು  ಡೇಟ್ ಮಾಡಲು ಬಯಸುತ್ತಾರೆ, ಆದರೆ ಬಾಲಿವುಡ್ ನಲ್ಲಿ  ಅಂತಹ ವ್ಯಕ್ತಿಯನ್ನು ಕಂಡುಹಿಡಿಯುವುದು ಕಷ್ಟ ಎಂದು ಅವರು ಹೇಳುತ್ತಾರೆ. 

ಉದ್ಯಮದಲ್ಲಿ ಯಾರೊಂದಿಗಾದರೂ ಡೇಟಿಂಗ್ ಮಾಡುವ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಸೋನಾಕ್ಷಿ  'ನನ್ನ ಪೋಷಕರು ಸೌಮ್ಯ ಸ್ವಭಾವದ( ಸುಶೀಲ್ ಲಡ್ಕಾ) ಹುಡುಗನನ್ನು ಡೇಟ್ ಮಾಡಲು ಬಯಸುತ್ತಾರೆ. ಆದರೆ ಬಾಲಿವುಡ್ ಚಲನಚಿತ್ರೋದ್ಯಮದ ಯಾರೂ ಆ ರೀತಿ ಇಲ್ಲ' ಎಂದು ಹೇಳಿದರು.

ಇನ್ನು ಮುಂದುವರೆದು ಮಾತನಾಡಿದ ಸೋನಾಕ್ಷಿ ಸಿನ್ಹಾ ' ತಾವು ಈ ಹಿಂದೆ ಪ್ರಸಿದ್ಧ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಿದ್ದೇನೆ. ಆದರೆ ಅದು ಹೊರ ಜಗತ್ತಿಗೆ ತಿಳಿದಿಲ್ಲ ಎಂದರು. ಒಂದು ವೇಳೆ ನನಗೆ ನನ್ನ ಗೆಳೆಯ ಮೋಸ ಮಾಡಿದರೆ ಮರುದಿನ ಅವರನ್ನು ನೇರವಾಗಿ ನೋಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು

ಶಿಲ್ಪಿ ದಾಸ್‌ಗುಪ್ತಾ ನಿರ್ದೇಶನದ ಖಂಡಾನಿ ಶಫಖಾನಾ ಚಿತ್ರದಲ್ಲಿ  ಸೋನಾಕ್ಷಿ ನಟಿಸುತ್ತಿದ್ದಾರೆ ಈ ಚಿತ್ರ ಆಗಸ್ಟ್ 2 ರಂದು ಬಿಡುಗಡೆಯಾಗಲಿದೆ. ಶಿಲ್ಪಿ ಅವರೊಂದಿಗಿನ ಕೆಲಸದ ಅನುಭವದ ಬಗ್ಗೆ  ಕೇಳಿದಾಗ ಅವರು "ಮಹಿಳಾ ನಿರ್ದೇಶಕರು ಪುರುಷ ನಿರ್ದೇಶಕರು ಹೊಂದಿರದ ಒಂದು ರೀತಿಯ ಸಂವೇದನೆ ಮತ್ತು ಸೂಕ್ಷ್ಮತೆಯನ್ನು ಹೊಂದಿರುತ್ತಾರೆ ಎಂದು ಹೇಳಿದರು.
 

Trending News