Shriya Saran Video: ನಟಿ ಶ್ರಿಯಾ ಶರಣ್‌ ಬಾತ್​ರೂಮ್ ವಿಡಿಯೋ ವೈರಲ್‌! ಬ್ಯೂಟಿಗೆ ಬೋಲ್ಡ್‌ ಆದ ಫ್ಯಾನ್ಸ್‌

Shriya Saran bathroom video : ಬ್ಯೂಟಿ ಸ್ಟಾರ್ ಶ್ರಿಯಾ ಶರಣ್‌ ಪರಿಚಯದ ಅಗತ್ಯವಿಲ್ಲ. ಸುಮಾರು ಇಪ್ಪತ್ತು ವರ್ಷಗಳಿಂದ ಟಾಲಿವುಡ್ ನಲ್ಲಿ ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 

Written by - Chetana Devarmani | Last Updated : Nov 9, 2022, 01:12 PM IST
  • ಬಾತ್​ರೂಮ್ ವಿಡಿಯೋ ಹಂಚಿಕೊಂಡ ಕಬ್ಜ ನಟಿ!
  • ಪಡ್ಡೆ ಹೈಕ್ಳ ನಿದ್ದೆ ಕದ್ದ ಶ್ರೀಯಾ ಶರಣ್‌
  • ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ವೈರಲ್‌
Shriya Saran Video: ನಟಿ ಶ್ರಿಯಾ ಶರಣ್‌ ಬಾತ್​ರೂಮ್ ವಿಡಿಯೋ ವೈರಲ್‌! ಬ್ಯೂಟಿಗೆ ಬೋಲ್ಡ್‌ ಆದ ಫ್ಯಾನ್ಸ್‌ title=
ಶ್ರೀಯಾ ಶರಣ್‌

Shriya Saran bathroom video : ಬ್ಯೂಟಿ ಸ್ಟಾರ್ ಶ್ರಿಯಾ ಶರಣ್‌ ಪರಿಚಯದ ಅಗತ್ಯವಿಲ್ಲ. ಸುಮಾರು ಇಪ್ಪತ್ತು ವರ್ಷಗಳಿಂದ ಟಾಲಿವುಡ್ ನಲ್ಲಿ ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಮಗುವಿಗೆ ಜನ್ಮ ನೀಡಿದ ನಂತರ ತಾಯ್ತನವನ್ನು ಅನುಭವಿಸುತ್ತಿದ್ದಾರೆ. ಇದಲ್ಲದೆ, ತಾಯಿಯಾದ ನಂತರವೂ ಅವರ ಗ್ಲಾಮರ್‌ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಶ್ರಿಯಾ ಶರಣ್ ಕಳೆದ ಎರಡು ದಶಕಗಳಿಂದ ತೆಲುಗು ಚಿತ್ರರಂಗದಲ್ಲಿ ತನ್ನ ನಟನೆ ಮತ್ತು ಗ್ಲಾಮರ್‌ನಿಂದ ಮಿಂಚಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 

ಇದನ್ನೂ ಓದಿ : Amitabh Bachchan : ಜಯಾ ಬಚ್ಚನ್‌ಗೆ ಮದುವೆಗೂ ಮುನ್ನ ಅಮಿತಾಬ್‌ ಹಾಕಿದ್ರಂತೆ ಈ ಕಂಡೀಷನ್‌!

ಸಾಮಾನ್ಯವಾಗಿ, ನಾಯಕಿಯರು ಮದುವೆಯಾದಾಗ ಅಥವಾ ಮಕ್ಕಳಾದ ನಂತರ ಬಣ್ಣದ ಲೋಕದಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವುದು ಸಾಮಾನ್ಯ. ಆದರೆ ಶ್ರಿಯಾ ವಿಷಯದಲ್ಲಿ ಹಾಗಲ್ಲ. ನಾಯಕಿಯಾಗಿದ್ದ ದಿನಗಳಿಗಿಂತ ಈಗ ಹೆಚ್ಚು ಗ್ಲಾಮರಸ್ ಶೋ ಮಾಡುತ್ತಿದ್ದಾರೆ. ಅದರ ಭಾಗವಾಗಿ, ಇತ್ತೀಚೆಗೆ ಜಾಹೀರಾತಿಗಾಗಿ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಶ್ರಿಯಾ ಇತ್ತೀಚೆಗೆ ಗೀಸರ್ ಕಂಪನಿಯ ಜಾಹೀರಾತು ಮಾಡಿದ್ದಾರೆ. ಈ ಜಾಹೀರಾತಿನಲ್ಲಿ, ಶ್ರಿಯಾ ಸಖತ್‌ ಬೋಲ್ಡ್‌ ಆಗಿ ಕಾಣಿಸಿದ್ದು, ಪಡ್ಡೆ ಹೈಕ್ಳ ನಿದ್ದೆಗೆ ಕನ್ನ ಹಾಕಿದ್ದಾರೆ. ಇದಲ್ಲದೆ, ಅವರೇ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಆ ವಿಡಿಯೋ ಮತ್ತು ಫೋಟೋ ವೈರಲ್ ಆಗಿದೆ. 

 

 

ಇತ್ತೀಚೆಗೆ ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದರು. ಆಗ ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಮ್ಮೆ ಟ್ರೆಂಡಿಂಗ್ ಆಗಿದ್ದರು. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಇನ್ನು ಶ್ರಿಯಾ ನಟಿಸುತ್ತಿರುವ ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ಹಿಂದಿಯಲ್ಲಿ 'ದೃಶ್ಯಂ 2' ಎಂಬ ಸಿನಿಮಾ ಮಾಡುತ್ತಿದ್ದಾರೆ. ಇದು ನವೆಂಬರ್ 17 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ಹೊರತಾಗಿ ಸದ್ಯ ಈ ಸುಂದರಿ ಕನ್ನಡದಲ್ಲಿ ಉಪೇಂದ್ರ ಅಭಿನಯದ ಕಬ್ಜಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ಇದನ್ನೂ ಓದಿ : Samantha : ನಾನಿನ್ನೂ ಸತ್ತಿಲ್ಲ, ನಾನು ಹೋರಾಟಗಾರ್ತಿ.. ಹೋರಾಡುತ್ತೇನೆ - ನಟಿ ಸಮಂತಾ

ಶ್ರಿಯಾ ಮಗುವಿಗೆ ಜನ್ಮ ನೀಡಿದ ನಂತರ ತಾಯ್ತನವನ್ನು ಆನಂದಿಸುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರತಿ ಕ್ಷಣವನ್ನೂ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇದಲ್ಲದೆ, ಅವರು ಯಾವಾಗಲೂ ತಮ್ಮ ಮಗುವಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ತನ್ನ ಸೌಂದರ್ಯದಿಂದ ತೆಲುಗು ಸಿನಿ ಪ್ರಿಯರ ಮನ ಗೆದ್ದಿದ್ದಾರೆ. ಜೊತೆಗೆ ದಕ್ಷಿಣ ಭಾರತದಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News