ಲಾಕ್ ಡೌನ್ ನಡುವೆ ಜಾಲಿ‌ ರೈಡ್ ಮಾಡುತ್ತಿದ್ದ ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ

ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಟಿ ಶರ್ಮಿಳಾ ಮಾಂಡ್ರೆ ತಮ್ಮ ಜಾಗ್ವಾರ್ ಕಾರಿನಲ್ಲಿ ಸ್ನೇಹಿತರ ಜೊತೆಗೆ ಜಾಲಿ ರೈಡ್ ಮಾಡುತ್ತಿದ್ದರು.    

Written by - Yashaswini V | Last Updated : Apr 4, 2020, 12:35 PM IST
ಲಾಕ್ ಡೌನ್ ನಡುವೆ ಜಾಲಿ‌ ರೈಡ್ ಮಾಡುತ್ತಿದ್ದ ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ title=
Pic Courtesy: Instagram

ಬೆಂಗಳೂರು:  ಕಾನೂ‌ನು ಜನಸಾಮಾನ್ಯರಿಗೊಂದು ಸೆಲಬ್ರಿಟಿಗಳಿಗೊಂದು ಎಂದು ಮತ್ತೊಮ್ಮೆ ಸಾಬೀತಾಗಿದೆ.  ಲಾಕ್‌ಡೌನ್ (Lockdown) ನಡುವೆಯೂ ಕಾರಿನಲ್ಲಿ ಜಾಲಿ ರೈಡ್ ಮಾಡುತ್ತಿದ್ದ ನಟಿ ಶರ್ಮಿಳಾ ಮಾಂಡ್ರೆಯವರ ಅಪಘಾತಕ್ಕೀಡಾಗಿ ಗಾಯಗೊಂಡಿರುವ ಘಟನೆ ಇಂದು ವಸಂತನಗರದಲ್ಲಿ ನಡೆದಿದೆ. ಅಲ್ಲದೆ ಡ್ರೈವಿಂಗ್ ಮಾಡುವ ವೇಳೆ ಶರ್ಮಿಳಾ ಮಾಂಡ್ರೆ ಮದ್ಯಪಾನ ಮಾಡಿದ್ದರೆಂದು ತಿಳಿದುಬಂದಿದೆ.

Lockdown: ಕಾಲ್ನಡಿಗೆಯಲ್ಲಿ ಸೂರತ್‌ನಿಂದ ಬಾಂಡಾ ತಲುಪಿದ ಗರ್ಭಿಣಿ ಮಹಿಳೆ

ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಟಿ ಶರ್ಮಿಳಾ ಮಾಂಡ್ರೆ ತಮ್ಮ ಜಾಗ್ವಾರ್ ಕಾರಿನಲ್ಲಿ ಸ್ನೇಹಿತರ ಜೊತೆಗೆ ಜಾಲಿ ರೈಡ್ ಮಾಡುತ್ತಿದ್ದರು.  ವಸಂತನಗರ ಅಂಡಲ್ ಪಾಸ್ ಪಿಲ್ಲರ್ ಬಳಿ ತೆರಳುತ್ತಿದ್ದಾಗ ಅವರ ಕಾರು ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶರ್ಮಿಳಾ ಅವರ ಮುಖ ಹಾಗೂ ತಲೆಗೆ ಗಾಯವಾಗಿದೆ. ಕಾರಿನಲ್ಲಿ  ಶರ್ಮಿಳಾ ಮಾಂಡ್ರೆಯವರ ಸ್ನೇಹಿತ ಲೋಕೇಶ್ ಎಂಬುವರು ಇದ್ದರು. ಅವರಿಗೆ ಕೈ ಮೂಳೆ ಮುರಿದಿದೆ. ಇಬ್ಬರನ್ನೂ  ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಲಾಕ್‌ಡೌನ್ ಮಧ್ಯೆ ಟ್ರೆಂಡ್ ಆಗಿದೆ ಈ App, ಆದರೂ ಬಳಕೆದಾರರು ಇದನ್ನ ಡಿಲೀಟ್ ಮಾಡ್ತಿರೋದು ಏಕೆ?

ಶರ್ಮಿಳಾ ಮಾಂಡ್ರೆ ನೂರು ಕಿಲೋ ಮೀಟರ್ ಹೆಚ್ಚು‌ ವೇಗವಾಗಿ ಕಾರು ಚಲಾಯಿಸುತ್ತಿದ್ದರು. ಆಗ ಅಪಘಾತವಾಗಿದ್ದು ಅರ್ಧ ಗಂಟೆಯ ಬಳಿಕ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು, ಕಾರಿನ ಬಳಿ ಇದ್ದ ಓರ್ವ ಯುವಕನನ್ನು ವಿಚಾರಣೆ ಮಾಡಿದ್ದಾರೆ.‌ ಆಗ ಆತ ಇದು ನನ್ನದೇ ಕಾರು, ತಾನೆ ಡ್ರೈವ್ ಮಾಡುತಿದ್ದೆ ಎಂದು ಹೇಳಿದ್ದಾನೆ. ಪರಿಶೀಲನೆಗೊಳಪಡಿಸಿದ ಬಳಿಕ ಕಾರಿನಲ್ಲಿ ನಟಿ ಇದ್ದಿದು ಬೆಳಕಿಗೆ ಬಂದಿದೆ. ಡ್ರೈವಿಂಗ್ ಮಾಡುವಾಗ ಶರ್ಮಿಳಾ ಮಾಂಡ್ರೆ ಮದ್ಯಪಾನ ಮಾಡಿದ್ದರೆಂದು ಪ್ರಾಥಮಿಕ ಹಂತದ ತನಿಖೆಯಿಂದ ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ.

Trending News