ಮತ್ತೆ ತೆರೆ ಮೇಲೆ ಮೋಹಕ ತಾರೆ ರಮ್ಯಾ...ಯಾವುದು ಆ ಸಿನಿಮಾ..!?

ಮೋಹಕ ತಾರೆ ರಮ್ಯಾ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ. ಹಸಿ ಹಸಿ ಮುನಿಸು ಇಷ್ಟ ಆಗುತ್ತೆ. ನಕ್ಕರೆ ಸಕ್ಕರೆಯಂತಹ ಗುಳಿ ಕೆನ್ನೆ ನೋಡೋದೇ ಚೆಂದ.

Written by - YASHODHA POOJARI | Edited by - Manjunath N | Last Updated : May 4, 2022, 07:34 PM IST
  • ಮೋಹಕ ತಾರೆ ರಮ್ಯಾ ಪ್ರತಿಯೊಬ್ಬರ ಕನಸಿನ ರಾಣಿ. ತಮ್ಮ ಮುದ್ದಾದ ಅಭಿನಯ ಮತ್ತು ಕ್ಯೂಟ್‌ ಕ್ಯೂಟ್‌ ಲುಕ್‌ ಮತ್ತು ಸ್ಮೈಲ್‌ನಿಂದ ಪಡ್ಡೆ ಹುಡುಗರ ನಿದ್ದೆ ಕದ್ದ ಅಂದದ ಚೆಲುವೆ.
  • ರಮ್ಯಾರನ್ನ ಮತ್ತೆ ತೆರೆ ಮೇಲೆ ನೋಡಬೇಕು ಅನ್ನೋದು ಅವರ ಅಭಿಮಾನಿಗಳ ಆಸೆ . ಅದಕ್ಕಾಗಿ ಬಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.
 ಮತ್ತೆ ತೆರೆ ಮೇಲೆ ಮೋಹಕ ತಾರೆ ರಮ್ಯಾ...ಯಾವುದು ಆ ಸಿನಿಮಾ..!? title=

ಬೆಂಗಳೂರು: ಮೋಹಕ ತಾರೆ ರಮ್ಯಾ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ. ಹಸಿ ಹಸಿ ಮುನಿಸು ಇಷ್ಟ ಆಗುತ್ತೆ. ನಕ್ಕರೆ ಸಕ್ಕರೆಯಂತಹ ಗುಳಿ ಕೆನ್ನೆ ನೋಡೋದೇ ಚೆಂದ. ರಾಜಕೀಯ ಎಂಟ್ರಿ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದು, ರಮ್ಯಾ ಇದೀಗ ಮತ್ತೆ ಅಭಿಮಾನಿಗಳಿಗೆ ದರ್ಶನ ಕೊಡುತ್ತಿದ್ದಾರೆ. 

ಮೋಹಕ ತಾರೆ ರಮ್ಯಾ ಪ್ರತಿಯೊಬ್ಬರ ಕನಸಿನ ರಾಣಿ. ತಮ್ಮ ಮುದ್ದಾದ ಅಭಿನಯ ಮತ್ತು ಕ್ಯೂಟ್‌ ಕ್ಯೂಟ್‌ ಲುಕ್‌  ಮತ್ತು ಸ್ಮೈಲ್‌ನಿಂದ ಪಡ್ಡೆ ಹುಡುಗರ ನಿದ್ದೆ ಕದ್ದ ಅಂದದ ಚೆಲುವೆ.ಕನ್ನಡದಲ್ಲಿ ಮೂವತ್ತಕ್ಕೂ ಹೆಚ್ಚು ಸಿನಿಮಾಗಳನ್ನ ಕೊಟ್ಟ ಅದ್ಭುತ ಪ್ರತಿಭೆ ಅಂದ್ರೆ ಅದು ದಿವ್ಯ ಸ್ಪಂದನ ಅಲಿಯಾಸ್‌ ರಮ್ಯಾ. ಲುಕ್,  ಆಟಿಟ್ಯೂಡ್‌, ಮೂಗಿನ ತುದೀಲಿ ಕೋಪ... ಇವು ಕ್ಯೂಟ್‌ ರಮ್ಯಾರ ಟ್ರೇಡ್‌ ಮಾರ್ಕ್‌ ಅಂದ್ರೆ ತಪ್ಪಾಗಲಾರದು.

ಇದನ್ನೂ ಓದಿ: ರವಿಚಂದ್ರನ್‌ ಪುತ್ರನ ʻವಿವಾಹ ಆಹ್ವಾನʼ ಪತ್ರಿಕೆ! ಇಲ್ಲಿದೆ ವೈರಲ್ ಫೋಟೋದ ಅಸಲಿಯತ್ತು

ರಮ್ಯಾ ಕನ್ನಡ ಮತ್ತು ತಮಿಳು ಚಿತ್ರರಂಗಗಳಲ್ಲಿ ಸಾಕಷ್ಟು ಸಿನಿಮಾಗಳನ್ನ ಮಾಡುವ ಮೂಲಕ ಸೈ ಅನ್ನಿಸಿಕೊಂಡ ಅಚ್ಚ ಕನ್ನಡದ ನಟಿ.ಇವರ ಹುಟ್ಟು ಹೆಸರು ದಿವ್ಯ ಸ್ಪಂದನ. ರಮ್ಯಾ ಅವರು 'ಅಭಿ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಇವರು 'ತನನಂ ತನನಂ' ಮತ್ತು 'ಸಂಜು ವೆಡ್ಸ್ ಗೀತಾ' ಚಿತ್ರಗಳಿಗೆ ಎರಡು ಬಾರಿ ಬೆಸ್ಟ್ ಫಿಲಂ ಫೇರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕರ್ನಾಟಕ ರಾಜ್ಯದ ಪ್ರದೇಶ ಕಾಂಗ್ರೆಸ್‌ ಸಮಿತಿಯ ಸಕ್ರಿಯ ಸದಸ್ಯರಾಗಿದ್ದು, ಮಂಡ್ಯ ಕ್ಷೇತ್ರದಿಂದ ಲೋಕಸಭೆ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌  ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಪ್ರಥಮ ಪ್ರಯತ್ನದಲ್ಲೇ ಲೋಕಸಭೆಗೆ ಪ್ರವೇಶ ಮಾಡಿದ್ದರು. ರಾಜ್ಯದಿಂದ ಕನ್ನಡ ನಟಿಯೊಬ್ಬರು ಲೋಕಸಭೆಗೆ ಪ್ರವೇಶ ಮಾಡಿದವರಲ್ಲಿ ರಮ್ಯಾ ಮೊದಲಿಗರು.

ಇದನ್ನೂ ಓದಿ: ಬಾಹುಬಲಿ 2 ಚಿತ್ರಕ್ಕೂ ಸಾಧ್ಯವಾಗದ ಹೊಸ ದಾಖಲೆ ನಿರ್ಮಿಸಿದ ಕೆಜಿಎಫ್ 2..!

ಲೋಕಸಭೆಗೆ  ೨೦೧೪ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಅವರು ಸೋಲನುಭವಿಸಿದರು.ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರೂ ಅಭಿಮಾನಿಗಳೇನು ಕಮ್ಮಿಯಾಗಿಲ್ಲ. ಹೆಚ್ಚು ಕಡಿಮೆ ಆರು ವರ್ಷಗಳಿಂದ ಸಿನಿಮಾದಿಂದ ದೂರವೇ ಉಳಿದಿದ್ದರು. ರಾಜಕೀಯದ ಕಡೆಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದ ಮೋಹಕ ತಾರೆ ರಮ್ಯಾ ಈಗ ಮತ್ತೆ ಸಿನಿಮಾಗಳಲ್ಲಿ ನಟಿಸಲು ಮನಸ್ಸು ಮಾಡುತ್ತಿದ್ದಾರೆ. 

ರಮ್ಯಾರನ್ನ ಮತ್ತೆ ತೆರೆ ಮೇಲೆ ನೋಡಬೇಕು ಅನ್ನೋದು ಅವರ ಅಭಿಮಾನಿಗಳ ಆಸೆ . ಅದಕ್ಕಾಗಿ ಬಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ರಮ್ಯಾ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಜೊತೆ ಡೈರೆಕ್ಟ್‌ ಕಾಂಟ್ಯಾಕ್ಟ್‌ನಲ್ಲಿದ್ದಾರೆ.ರಮ್ಯಾ ಫ್ಯಾನ್ಸ್‌ ಪ್ರತಿ ಬಾರಿಯೂ ಮ್ಯಾಮ್‌, ಪ್ಲೀಸ್‌ ಮತ್ತೆ ಸಿನಿಮಾಗಳನ್ನ ಮಾಡಿ ಅಂತ ರಿಕ್ವೆಸ್ಟ್‌ ಮಾಡಿಕೊಳ್ಳುತ್ತಲೇ ಇದ್ದಾರೆ. ರಮ್ಯಾ ಕಮ್ ಬ್ಯಾಕ್ ಮಾಡಬೇಕು ಅಂತ ಸಿನಿಪ್ರಿಯರು ಒತ್ತಡ ಕೂಡ ಹಾಕುತ್ತಿದ್ದರು. 

ತಮ್ಮ ಅಭಿಮಾನಿಗಳ ಒತ್ತಾಯದಂತೆ ಮೋಹಕ ತಾರೆ ಸ್ಯಾಂಡಲ್‌ವುಡ್‌ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಶೀಘ್ರದಲ್ಲೇ ಆ ಸುದ್ದಿ ಹೊರ ಬೀಳಲಿದೆ. ಈ ಹಿಂದೆ ರಮ್ಯಾ ಇನ್‌ಸ್ಟಾದಲ್ಲಿ 'ಆಸ್ಕ್ ಮಿ ಎನೀ ಥಿಂಗ್'ನಲ್ಲಿ ಫ್ಯಾನ್ಸ್ ಜೊತೆಗೆ ಪ್ರಶ್ನೋತ್ತರ ಸೆಷನ್‌ನಲ್ಲಿ ಭಾಗವಹಿಸಿದ್ದರು. ಅದರಲ್ಲಿ ಬಹಳಷ್ಟು ಜನ ಅವರ ಸಿನಿಮಾ ಕಮ್ ಬ್ಯಾಕ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆಗ ರಮ್ಯಾ ಹೇಳಿದ ಮಾತು ಅವರೆಲ್ಲರನ್ನೂ ಬೆಚ್ಚಿ ಬೀಳಿಸಿದೆ. ಸಿನಿಮಾ ಅನ್ನೋ ಹಡಗು ನನ್ನಿಂದ ಬಹು‌ ದೂರ ಹೋಗಿದೆ. ನನ್ನ ಪಾಲಿಗೆ ಅದೇನಿದ್ದರೂ ಮುಳುಗಿದ ಹಡಗು. ಅದನ್ನೇರಲು ಸಾಧ್ಯವಿಲ್ಲ, ಅದರಲ್ಲಿ ಜರ್ನಿ ಮಾಡುವುದೂ ಅಸಾಧ್ಯ ಎಂಬರ್ಥದ ಮಾತುಗಳನ್ನು ಹೇಳಿದ್ದರು. ಇದಕ್ಕೆ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿದ್ದರು. ರಮ್ಯಾ ಹೀಗೆಲ್ಲ ಹೇಳ್ಬೇಡಿ. ನೀವು ವಾಪಸ್ ಸಿನಿಮಾಕ್ಕೆ ಬರಲೇಬೇಕು ಅಂದಿದ್ದಾರೆ. ರಮ್ಯಾ ಇದನ್ನ ನಯವಾಗಿ ನಿರಾಕರಿಸಿದ್ದಾರೆ. ಆಮೇಲೆ ಜನರು ರಮ್ಯಾ ಸಿನಿಮಾಕ್ಕೆ ಬರುವ ಆಸೆ ಬಿಟ್ಟಿದ್ದರು.

ಇದನ್ನು ಓದಿ: ಸೋಶಿಯಲ್‌ ಮೀಡಿಯಾ ಸೆನ್ಶೇಶನ್‌ ನಿಹಾರಿಕಾ ಕುರಿತು ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್‌ 

ಆದರೆ ಇದೀಗ ಬಂದ ಬ್ರೇಕಿಂಗ್‌ ನ್ಯೂಸ್‌ ಪ್ರಕಾರ ಶೀಘ್ರದಲ್ಲಿ ಮೋಹಕ ತಾರೆಯನ್ನು ತೆರೆ ಮೇಲೆ ನೋಡಬಹುದು ಎನ್ನುತ್ತಿದೆ ಸ್ಯಾಂಡಲ್‌ವುಡ್‌. ಅಷ್ಟಕ್ಕೂ ರಮ್ಯಾ ಕಮ್ ಬ್ಯಾಕ್ ಮಾಡಿರುವ ಆ ಸಿನಿಮಾ ಯಾವುದು, ಅದರಲ್ಲಿ ಅವರ ಪಾತ್ರ ಏನು ಅನ್ನೋದು ಇನ್ನೂ ಗುಟ್ಟಾಗಿದೆ. ಆದರೆ ಸಿನಿಮಾವೊಂದರಲ್ಲಿ ಅವರು  ಅತಿಥಿ ಪಾತ್ರದಲ್ಲಿ ಈಗಾಗಲೇ ನಟಿಸಿದ್ದಾರೆ ಎನ್ನುವ ಮಾತು ಸ್ಯಾಂಡಲ್‌ವುಡ್‌ನಲ್ಲಿ ಕೇಳಿ ಬರುತ್ತಿದೆ. ಕಮ್ ಬ್ಯಾಕ್ ಸಿನಿಮಾದಲ್ಲಿ ರಮ್ಯಾ ಇದುವರೆಗೂ ಮಾಡದ ಪಾತ್ರವೊಂದರಲ್ಲಿ ನಟಿಸಿದ್ದು, ಪಾತ್ರ ಚಿಕ್ಕದಿದ್ದರೂ ಸಿನಿಮಾದ ಹೈಲೈಟ್ ಈ ಪಾತ್ರವೇ ಆಗಿರುತ್ತಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News