Pavithra Gowda daughter visited Parappana Agrahara Jail: ಪೊಲೀಸ್ ಕಸ್ಟಡಿಯಲ್ಲಿರುವಾಗ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರಿಗೆ ಮೇಕಪ್ ಕಿಟ್ ನೀಡಲು ಅನುಮತಿಸಿದ ಪೊಲೀಸ್ ಅಧಿಕಾರಿ ನೇತ್ರಾವತಿ (ಎಸ್‌ಐ) ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ನೀಡಲಾಗಿದೆ.. ಕೊಲೆ ಆರೋಪಿ ಪವಿತ್ರಾ ಗೌಡ ನಿನ್ನೆ ಪೋಷಕರ ಜೊತೆ ಮಾತಾಡಿ ಅಗತ್ಯ ವಸ್ತುಗಳ ಲಿಸ್ಟ್ ನೀಡಿದ್ದು, ಇಂದು ಬಟ್ಟೆ, ಮೇಕಪ್ ಕಿಡ್ ಸೇರಿದಂತೆ ಅನೇಕ ವಸ್ತುಗಳನ್ನು ಆಕೆಯ ಪೋಷಕರು ತಂದು ಕೊಟ್ಟಿದ್ದಾರೆ ಎನ್ನಲಾಗ್ತಿದೆ..
ರೇಣುಕಾಸ್ವಾಮಿ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ನಟಿ ಪವಿತ್ರಾ ಗೌಡ ಲಿಪ್ ಸ್ಟಿಕ್ ಹಾಗೂ ಮುಖಕ್ಕೆ ಮೇಕಪ್ ಹಾಕಿಕೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.. ಇದರೊಂದಿಗೆ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಬೆಂಗಳೂರು ನಗರದ ವಿಜಯನಗರ ಪೊಲೀಸ್ ಠಾಣೆಯ ಲೇಡಿ ಎಸ್‌ಐ ನೇತ್ರಾವತಿ ಅವರಿಗೆ ಡಿಸಿಪಿ ಅವರು ನಿಯಮ 7ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ-Shatabhisha Movie : ಶತಭಿಷ ಚಿತ್ರದ ಟ್ರೈಲರ್ ಬಿಡುಗಡೆ
ಅಲ್ಲದೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿದ್ದ ಪವಿತ್ರಾ ಗೌಡ ಅವರನ್ನು ತನಿಖೆಗಾಗಿ ಜೂನ್ 15ರಂದು ಮನೆಗೆ ಕಳುಹಿಸಲಾಗಿತ್ತು.. ಆ ವೇಳೆ ನಟಿ ಪವಿತ್ರಾ ಗೌಡ ಅವರನ್ನು ಎಸ್‌ಐ ನೇತ್ರಾವತಿ ಅವರ ಮನೆಗೆ ಕರೆದುಕೊಂಡು ಹೋಗಿದ್ದರು.
"ಮನೆಗೆ ಹೋಗುವಾಗ ಎಂದಿನಂತೆ ಹೋಗಿದ್ದೆ, ನಂತರ ಮನೆಯಿಂದ ಹೊರಗೆ ಬಂದಾಗ ಫುಲ್ ಫೇಸ್ ಮೇಕಪ್ ಮತ್ತು ತುಟಿಗೆ ಲಿಪ್ ಸ್ಟಿಕ್ ಹಾಕಿಕೊಂಡು ಹೊರಬಂದೆ" ಎಂದು ಪೊಲೀಸ್ ಕಸ್ಟಡಿಯಲ್ಲಿರುವ ಪವಿತ್ರಾ ಗೌಡ ಹೇಳಿದ್ದಾರೆ. ಆ ವೇಳೆ ತೆಗೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾಗಲೂ ಪವಿತ್ರಾ ಗೌಡ ಅವರಿಗೆ ಮೇಕಪ್ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನುವ ಆರೋಪ ಇದೀಗ ಕೇಳಿಬರುತ್ತಿದೆ.. ಜೊತೆಗೆ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದಾಗ, ನಟಿ ಪವಿತ್ರಾ ಗೌಡ ಅವರ ಬಳಿ ಮೇಕಪ್ ಕಿಟ್ ಇರುವುದು ಕಂಡುಬಂದಿದೆ.
ಇದನ್ನೂ ಓದಿ-ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಸ್ವೀಟಿ.. ಅನುಷ್ಕಾ ಶೆಟ್ಟಿಯನ್ನು ಕಾಡುತ್ತಿರುವ ಸಮಸ್ಯೆ ಇದು!