ಹಾರ್ದಿಕ್ ಪಾಂಡ್ಯ ಜೊತೆಗಿನ ವಿಚ್ಛೇದನದ ಬಳಿಕ ನತಾಶಾ ಜೀವನದಲ್ಲಿ 'ಈ' ವ್ಯಕ್ತಿಯ ಆಗಮನ.. ವಿಡಿಯೋ ಶೇರ್ ಮಾಡಿ ಆತನನ್ನು ಪರಿಚಯಿಸಿದ ನಟಿ!

natasha stankovic: ಹಾರ್ದಿಕ್ ಪಾಂಡ್ಯದಿಂದ ಬೇರ್ಪಟ್ಟ ನಂತರ, ನತಾಸಾ ಸ್ಟಾಂಕೋವಿಕ್ ಈಗ ಮಗ ಅಗಸ್ತ್ಯನೊಂದಿಗೆ ತನ್ನ ತಾಯ್ನಾಡು ಸರ್ಬಿಯಾಕ್ಕೆ ಮರಳಿದ್ದಾರೆ. ಆಕೆ ವಿಡಿಯೋವೊಂದನ್ನು ಶೇರ್ ಮಾಡಿದ್ದು ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ.

Written by - Savita M B | Last Updated : Aug 17, 2024, 07:23 PM IST
  • ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಕಳೆದ ಹಲವು ತಿಂಗಳುಗಳಿಂದ ಸುದ್ದಿಯಲ್ಲಿದ್ದಾರೆ.
  • ಹಾರ್ದಿಕ್ ಪಾಂಡ್ಯ ತೊರೆದ ನಂತರ, ನತಾಶಾ ಜೀವನದಲ್ಲಿ ವಿಶೇಷ ವ್ಯಕ್ತಿಯ ಆಗಮನವಾಗಿದೆ
ಹಾರ್ದಿಕ್ ಪಾಂಡ್ಯ ಜೊತೆಗಿನ ವಿಚ್ಛೇದನದ ಬಳಿಕ ನತಾಶಾ ಜೀವನದಲ್ಲಿ 'ಈ' ವ್ಯಕ್ತಿಯ ಆಗಮನ.. ವಿಡಿಯೋ ಶೇರ್ ಮಾಡಿ ಆತನನ್ನು ಪರಿಚಯಿಸಿದ ನಟಿ! title=

 natasha Stankovic-Hardik padnya: ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಕಳೆದ ಹಲವು ತಿಂಗಳುಗಳಿಂದ ಸುದ್ದಿಯಲ್ಲಿದ್ದಾರೆ. ಕೇವಲ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ಜನಪ್ರಿಯ ದಂಪತಿಗಳು ಈಗ ಬೇರ್ಪಟ್ಟಿದ್ದಾರೆ... ಸದ್ಯ ನತಾಶಾ ತನ್ನ ಮಗ ಅಗಸ್ತ್ಯನೊಂದಿಗೆ ಸೆರ್ಬಿಯಾಕ್ಕೆ ಮರಳಿದ್ದಾರೆ.. ಆದರೆ ಹಾರ್ದಿಕ್ ಅವರನ್ನು ತೊರೆದಿದ್ದಕ್ಕಾಗಿ ಆಕೆ ಸಾಕಷ್ಟು ಟ್ರೋಲಿಂಗ್‌ಗೆ ಒಳಗಾಗಿದ್ದಳು. ಆದರೆ ಈಗ ಹಾರ್ದಿಕ್ ಪಾಂಡ್ಯ ಮತ್ತೆ ಸುದ್ದಿಯಲ್ಲಿದ್ದಾರೆ ಮತ್ತು ಮಾಡೆಲ್ ಜಾಸ್ಮಿನ್ ವಾಲಿಯಾ ಅವರೊಂದಿಗಿನ ಸಂಬಂಧದ ಚರ್ಚೆ ಪ್ರಾರಂಭವಾಗಿದೆ.. ಸಂಬಂಧ ಮುರಿದುಬಿದ್ದಿದ್ದಕ್ಕೆ ನತಾಶಾ ಅವರನ್ನು ದೂಷಿಸುತ್ತಿರುವ ಜನರು, ಇದೀಗ ದಾಂಪತ್ಯ ವೈಫಲ್ಯಕ್ಕೆ ಹಾರ್ದಿಕ್‌ಗೆ ದೂಷಿಸುತ್ತಿದ್ದಾರೆ.

ಈ ಸಂಬಂಧ ಮುರಿದುಬಿದ್ದ ನಂತರ, ನತಾಶಾ ತನ್ನ ಮಗುವಿನೊಂದಿಗೆ ಮನೆಗೆ ಮರಳಿದ್ದಾರೆ ಮತ್ತು ಅಲ್ಲಿಂದ ಅನೇಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ತೊರೆದ ನಂತರ, ನತಾಶಾ  ಜೀವನದಲ್ಲಿ ವಿಶೇಷ ವ್ಯಕ್ತಿಯ ಆಗಮನವಾಗಿದೆ.. ನಟಿ ಸದ್ಯ ಅವರ ಬಗ್ಗೆ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ-ನಯನತಾರಾ.. ದೀಪಿಕಾ.. ಪ್ರಿಯಾಂಕಾ ಇವರ್ಯಾರು ಅಲ್ಲ.. ಮೊದಲ ಸಿನಿಮಾಗೆ 50 ಕೋಟಿ ಸಂಭಾವನೆ ಪಡೆದ ಸೌತ್‌ ನಟಿ ಈಕೆ!!

ಅದು ಬೇರಾರೂ ಅಲ್ಲ.. ಅವರ ಮಗ ಅಗಸ್ತ್ಯ.. ತಾಯಿ ತನ್ನ ಮಕ್ಕಳಿಗಾಗಿ ಎಂತಹ ಕಷ್ಟದ ಪರಿಸ್ಥಿತಿಯಲ್ಲಾದರೂ ಏನು ಬೇಕಾದರೂ ಮಾಡಬಹುದು.. ಅದೇ ಮಕ್ಕಳ ಕಾರಣದಿಂದಾಗಿ, ಅವಳು ಬದುಕುವ ಭರವಸೆಯನ್ನು ಪಡೆಯುತ್ತಾಳೆ. ಹಾರ್ದಿಕ್ ಅಗಲಿಕೆಯ ನೋವಿನಿಂದ ಬಳಲುತ್ತಿರುವ ನತಾಶಾಗೆ ಸದ್ಯ ಮಗ ಅಗಸ್ತ್ಯ ಬೆಂಬಲ ನೀಡಿದ್ದಾನೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರ ಪ್ರೀತಿಯ ಮಗ ಗಾಜಿನ ಟೇಬಲ್ ಅನ್ನು ಕಾಗದದ ಟವಲ್‌ನಿಂದ ಒರೆಸುತ್ತಿರುವುದನ್ನು ಕಾಣಬಹುದು. ಅವನು ತನ್ನ ತಾಯಿಯ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾನೆ..

ಇದನ್ನೂ ಓದಿ-ನಾನು ಹೀರೋಯಿನ್ ಆಗುವುದು ನನ್ನ ಮನೆಯವರಿಗೆ ಇಷ್ಟವಿರಲಿಲ್ಲ.. ಆಗ ನನ್ನನ್ನು ಬೆಂಬಲಿಸಿದ್ದು ʼಈʼ ವ್ಯಕ್ತಿ! ಸಕ್ಸಸ್‌ಗೆ ಕಾರಣವಾದವರನ್ನು ಮೊದಲ ಬಾರಿ ಪರಿಚಯಿಸಿದ ನಟಿ ಶ್ರೀಲೀಲಾ!!

 ಇನ್ನು ಹಾರ್ದಿಕ್ ಮಾಡೆಲ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳು ಇವೆ.. ನತಾಶಾ ಸ್ಟಾಂಕೋವಿಕ್ ಬ್ರೇಕಪ್ ನಂತರ ವೃತ್ತಿ ಜೀವನಕ್ಕೆ ಮರಳಿದ್ದಾರೆ. 13 ಆಗಸ್ಟ್ 2024 ರಂದು, ಅವರು ತಮ್ಮ ಕೆಲಸಕ್ಕೆ ಸಂಬಂಧಿಸಿದ ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಬ್ರಾಂಡ್‌ಗಾಗಿ ಶೂಟಿಂಗ್ ಮಾಡುತ್ತಿದ್ದ ನತಾಶಾ ನೀಲಿ ಬಣ್ಣದ ಡ್ರೆಸ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು.

ಒಂದೆಡೆ, ನತಾಶಾ ತನ್ನ ಮಗ ಅಗಸ್ತ್ಯನೊಂದಿಗೆ ಸೈಬೀರಿಯಾದಲ್ಲಿ ಹೊಸ ಜೀವನವನ್ನು ಪ್ರಾರಂಭಿಸುತ್ತಿದ್ದಾರೇ.. ಮತ್ತೊಂದೆಡೆ ಹಾರ್ದಿಕ್ ಗ್ರೀಸ್‌ನಲ್ಲಿ ರಜೆ ಕಳೆಯುತ್ತಿದ್ದಾರೆ. ಕ್ರಿಕೆಟಿಗನ ಜೀವನದಲ್ಲಿ ಹೊಸ ಪ್ರೀತಿ ಬಂದಿದೆ ಎಂಬ ವದಂತಿ ಹಬ್ಬಿದೆ. ಕೆಲವು ದಿನಗಳ ಹಿಂದೆ ಹಾರ್ದಿಕ್ ಮತ್ತು ಮಾಡೆಲ್ ಜಾಸ್ಮಿನ್ ವಾಲಿಯಾ ಗ್ರೀಸ್‌ನಲ್ಲಿರುವ ಫೋಟೋಗಳು ವೈರಲ್ ಆಗಿವೆ. ಆದರೆ ಅವರು ಒಟ್ಟಿಗೆ ಇರಲಿಲ್ಲ. ಆದರೆ ಆ ಫೋಟೋಗಳಲ್ಲಿ ಒಂದೇ ಸ್ಥಳವನ್ನು ನೋಡಿದ ನೆಟಿಜನ್‌ಗಳು ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಊಹಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News