ನಿರ್ಮಾಪಕ ವೀರೇಂದ್ರ ಚೌಧರಿಯನ್ನು ವರಿಸಿದ ನಟಿ ನಮಿತಾ

   

Last Updated : Nov 24, 2017, 05:55 PM IST
ನಿರ್ಮಾಪಕ ವೀರೇಂದ್ರ ಚೌಧರಿಯನ್ನು ವರಿಸಿದ ನಟಿ ನಮಿತಾ title=
Pic Courtesy : India.com

ದಕ್ಷಿಣ ಭಾರತದ ಮಾದಕ ನಟಿ ಎಂದೇ ಖ್ಯಾತಿಯಾಗಿದ್ದ ನಮಿತಾ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. 

ತಮಿಳು ನಟ, ನಿರ್ಮಾಪಕ ವೀರೇಂದ್ರ ಚೌಧರಿ ಅವರನ್ನು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ನಮಿತಾ, ಇಂದು ತಿರುಪತಿಯ ಇಸ್ಕಾನ್ ಮಂದಿರದಲ್ಲಿ ಹಿರಿಯರ ಸಮ್ಮುಖದಲ್ಲಿ ವಿವಾಹವಾದರು. 

ಕುಟುಂಬಸ್ಥರು ಹಾಗೂ ಚಿತ್ರರಂಗದ ಗಣ್ಯರಿಗಾಗಿ ನಮಿತಾ-ವೀರೇಂದ್ರ ಆರತಕ್ಷತೆ ಕಾರ್ಯಕ್ರಮ ಚೆನ್ನೈನಲ್ಲಿ ನಡೆಯಲಿದೆ. 

ಈ ಹಿಂದೇ ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆಯಾಗಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದ ನಮಿತಾ, ತಮಿಳಿನ ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಹೆಸರು ಮಾಡಿದ್ದರು. 

Trending News