Ileana D'cruz : ತಾಯಿಯಾಗಲಿದ್ದಾರಾ ನಟಿ ಇಲಿಯಾನಾ ಡಿಕ್ರೂಜ್? ತಂದೆ ಯಾರು ಎಂದ ನೆಟ್ಟಿಜನ್ಸ್‌!!

Ileana D'cruz Pregnant: ನಟಿ ಇಲಿಯಾನಾ ಡಿಕ್ರೂಜ್ ಅವರ ಇತ್ತೀಚಿನ ಪೋಸ್ಟ್ ನೋಡಿ ಎಲ್ಲರೂ ಆಶ್ಚರ್ಯ ಪಡಲೇಬೇಕು. ತಾನು ತಾಯಿಯಾಗಲಿದ್ದೇನೆ ಎಂದು ಪರೋಕ್ಷವಾಗಿ ಪೋಸ್ಟ್ ಮಾಡಿದಂತಿದೆ. ಇಲಿಯಾನಾ ತಾಯಿಯಾಗಲಿದ್ದಾರಾ? ತಂದೆ ಯಾರು? ಎಂದು ನೆಟಿಜನ್‌ಗಳು ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

Written by - Chetana Devarmani | Last Updated : Apr 18, 2023, 11:33 AM IST
  • ನಟಿ ಇಲಿಯಾನಾ ಡಿಕ್ರೂಜ್
  • ತಾಯಿಯಾಗಲಿದ್ದಾರಾ ಇಲಿಯಾನಾ?
  • ತಂದೆ ಯಾರು ಎಂದ ನೆಟ್ಟಿಜನ್ಸ್‌!!
Ileana D'cruz : ತಾಯಿಯಾಗಲಿದ್ದಾರಾ ನಟಿ ಇಲಿಯಾನಾ ಡಿಕ್ರೂಜ್? ತಂದೆ ಯಾರು ಎಂದ ನೆಟ್ಟಿಜನ್ಸ್‌!! title=
Ileana D'cruz

Ileana D'cruz Pregnant: ಗೋವಾದ ಸುಂದರಿ ಇಲಿಯಾನಾ ಅವರ ಸಿನಿಮಾ ಕೆರಿಯರ್ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇಲಿಯಾನಾಗೆ ಬಾಲಿವುಡ್, ಟಾಲಿವುಡ್ ಎಲ್ಲೂ ಹಿಟ್ ಸಿಗುತ್ತಿಲ್ಲ. ಹೇಗೋ ಕೆರಿಯರ್ ಸಾಗುತ್ತಿದೆ. ಆದರೆ ಇಲಿಯಾನಾ ಈಗ ಆಶ್ಚರ್ಯಕರ ಪೋಸ್ಟ್‌ ಮಾಡಿದ್ದಾರೆ. ತಾನು ತಾಯಿಯಾಗುತ್ತಿದ್ದೇನೆ ಎಂದು ಪರೋಕ್ಷವಾಗಿ ಹೇಳುವ ರೀತಿಯಿರುವ ಪೋಸ್ಟ್‌ ಮಾಡಿದ್ದಾರೆ. ಇದರಿಂದಾಗಿ ತಂದೆ ಯಾರು ಎಂದು ಎಲ್ಲರೂ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಕೆಲವರು ಅಭಿನಂದನೆಗಳನ್ನು ಹೇಳುತ್ತಿದ್ದಾರೆ. 

ಇದನ್ನೂ ಓದಿ : 5 ಲಕ್ಷದ ಹ್ಯಾಂಡ್‌ಬ್ಯಾಗ್‌, 100 ಕೋಟಿಯ ನೆಕ್ಲೇಸ್.. ಇದು ನೀತಾ ಅಂಬಾನಿಯ ಐಷಾರಾಮಿ ಜೀವನ

ಮೊದಲ ಫೋಟೋದಲ್ಲಿ ಪುಟ್ಟ ಟೀ ಶರ್ಟ್.. ಆ ಟೀ ಶರ್ಟ್‌ ಮೇಲೆ And So the Adventure begins ಎಂದು ಬರೆದಿದೆ. ಎರಡನೇ ಫೋಟೋದಲ್ಲಿ mama ಎಂಬ ಲಾಕೆಟ್ ಕಾಣುತ್ತದೆ. ಇದೆಲ್ಲ ನೋಡಿದ ಮೇಲೆ ʻನಾನು ಅಮ್ಮನಾಗಲಿದ್ದೇನೆʼ ಎಂದು ಇಲಿಯಾನಾ ಹೇಳಿದಂತಿದೆ ಎಂದು ಹಲವರು ಹೇಳುತ್ತಿದ್ದಾರೆ. ಫೋಟೋಗಳ ಜೊತೆ "Coming soon! Can’t wait to meet you my little darling.." ಎಂದು ಬರೆದು ಇಲಿಯಾನಾ ಪೋಸ್ಟ್ ಮಾಡಿದ್ದಾರೆ.

 

 

ಇದಕ್ಕೆ ಜನರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಇಲಿಯಾನಾಗೆ ಅಭಿನಂದನೆಗಳು ಮತ್ತು ಆಲ್ ದಿ ಬೆಸ್ಟ್ ಎನ್ನುತ್ತಾರೆ. ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ನೀವು ಮದುವೆಯಾಗಲೇ ಇಲ್ಲ.. ಮಗು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಆ ಮಗುವಿನ ತಂದೆ ಯಾರು? ಅದನ್ನು ಮೊದಲು ಬಹಿರಂಗಪಡಿಸಲಿ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇದೆಲ್ಲಾ ಆಕೆಯ ವೈಯಕ್ತಿಕ ವಿಚಾರಗಳು.. ಈ ಎಲ್ಲ ವಿಷಯಗಳು ಯಾಕೆ ಎಂದು ಕೆಲ ನೆಟಿಜನ್‌ಗಳು ಇಲಿಯಾನಾ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ:  Priyanka - Nick: ಪ್ರಿಯಾಂಕಾ ಚೋಪ್ರಾ - ನಿಕ್ ಜೋನಾಸ್ ಖಾಸಗಿ ಫೋಟೋಗಳು ವೈರಲ್

ಇಲಿಯಾನಾ ಈಗ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಆಕೆಯ ಯಾವ ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ ವರ್ಕ್ ಔಟ್ ಆಗುತ್ತಿಲ್ಲ. ಇಲಿಯಾನಾ ದಕ್ಷಿಣದಿಂದ ದೂರ ಉಳಿದು ಬಹಳ ದಿನಗಳಾಗಿವೆ. ರವಿತೇಜಾ ಅವರ ಜೊತೆಯಲ್ಲಿ ನಟಿಸಿದ ಕೊನೆಯ ಚಿತ್ರ ಅಮರ್ ಅಕ್ಬರ್ ಆಂಟೋನಿ. ಇಲಿಯಾನಾ ಅವರ ಸಿನಿಮಾ ವೃತ್ತಿಜೀವನವು ಸೌತ್‌ನಲ್ಲಿ ಕೊನೆಗೊಂಡಿದೆಯಂತೆ ಎಂದು ಅನೇಕರು ಹೇಳುವರು. ಇಲಿಯಾನಾ ಬಾಲಿವುಡ್‌ನಲ್ಲಿ ಸಹ ಹಿಟ್ ಆಗಲೇ ಇಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News