ವಿಷ್ಣು ʼಕಣ್ಣಪ್ಪʼ ಚಿತ್ರದಲ್ಲಿ ಶಿವಣ್ಣ : ಪ್ರಭಾಸ್‌ ಶಿವನಾದ್ರೆ, ಹ್ಯಾಟ್ರಿಕ್‌ ಹೀರೋ ಪಾತ್ರವೇನು?

Vishnu Manchu Kannappa movie : ಟಾಲಿವುಡ್‌ ಕಣ್ಣಪ್ಪ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ 'ಕಣ್ಣಪ್ಪ' ಈ ಚಿತ್ರದಲ್ಲಿ ನಟಿಸಲಿದ್ದಾರೆ. ಶಿವ ಪಾರ್ವತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಚಿತ್ರತಂಡಕ್ಕೆ ನಟ ಡಾ. ಶಿವರಾಜ್‌ಕುಮಾರ್‌ ಅವರು ಸೇರಿಕೊಂಡಿದ್ದಾರೆ. ಶಿವಣ್ಣ ಯಾವ ಪಾತ್ರ ಮಾಡ್ತಾರೆ, ಏನ್‌ ಕತೆ ಅಂತ ತಿಳಿಯೋಣ ಬನ್ನಿ

Written by - Krishna N K | Last Updated : Oct 12, 2023, 05:15 PM IST
  • 'ಕಣ್ಣಪ್ಪ' ಚಿತ್ರ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ.
  • ಟಾಲಿವುಡ್‌ ಡೈನಾಮಿಕ್ ಸ್ಟಾರ್ ವಿಷ್ಣು ಮಂಚು 'ಕಣ್ಣಪ್ಪ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
  • ಈ ಚಿತ್ರತಂಡಕ್ಕೆ ನಟ ಡಾ. ಶಿವರಾಜ್‌ಕುಮಾರ್‌ ಅವರು ಸೇರಿಕೊಂಡಿದ್ದಾರೆ.
ವಿಷ್ಣು ʼಕಣ್ಣಪ್ಪʼ ಚಿತ್ರದಲ್ಲಿ ಶಿವಣ್ಣ : ಪ್ರಭಾಸ್‌ ಶಿವನಾದ್ರೆ, ಹ್ಯಾಟ್ರಿಕ್‌ ಹೀರೋ ಪಾತ್ರವೇನು? title=

Shivarajkumar in Kannappa movie : ಟಾಲಿವುಡ್‌ ಡೈನಾಮಿಕ್ ಸ್ಟಾರ್ ವಿಷ್ಣು ಮಂಚು 'ಕಣ್ಣಪ್ಪ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಈ ಚಿತ್ರದಲ್ಲಿ ಪ್ರಭಾಸ್‌ ಶಿವನ ಪಾತ್ರದಲ್ಲಿ ನಟಿಸುತ್ತಿರುವುದಾಗಿ ವಿಷ್ಣು ಮಾಹಿತಿ ನೀಡಿದ್ದರು. ಇದೀಗ ಈ ಚಿತ್ರತಂಡಕ್ಕೆ ಕನ್ನಡದ ಸೂಪರ್ ಸ್ಟಾರ್ ನಟ ಡಾ. ಶಿವರಾಜ್‌ಕುಮಾರ್‌ ಸಹ ಸೇರಿಕೊಂಡಿದ್ದಾರೆ.

ಹೌದು.. ಟಾಲಿವುಡ್‌ ನಟ ವಿಷ್ಣು ಮಂಚು 'ಕಣ್ಣಪ್ಪ' ಎಂಬ ಪೌರಾಣಿಕ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಣ್ಣಪ್ಪ- ಎ ಟ್ರೂ ಎಪಿಕ್ ಇಂಡಿಯನ್ ಟೇಲ್ ಎಂಬ ಉಪಶೀರ್ಷಿಕೆ ಸಿನಿಮಾದಲ್ಲಿ ವಿಷ್ಣು ಜೊತೆಗೆ ಬೇರೆ ಬೇರೆ ಭಾಷೆಯ ಸೂಪರ್ ಸ್ಟಾರ್‌ಗಳು ನಟಿಸಲಿದ್ದಾರೆ. 

ಇದನ್ನೂ ಓದಿ: ಗಂಡಾಗಿ ಹುಟ್ಟಿ ಹೆಣ್ಣಾದ ಬಿಗ್‌ಬಾಸ್‌ ಸ್ಪರ್ಧಿ..! ಗದಗ ʼಮಂಜುನಾಥ್‌ʼ ನೀತು ಆದ ಕತೆ

ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ 'ಕಣ್ಣಪ್ಪ' ಈ ಚಿತ್ರದಲ್ಲಿ ನಟಿಸಲಿದ್ದಾರೆ. ಶಿವ ಪಾರ್ವತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಇವರ ಜೊತೆಗೆ ಕನ್ನಡದ ಸೂಪರ್ ಸ್ಟಾರ್ ನಟ ಶಿವರಾಜ್‌ಕುಮಾರ್‌ ಸಹ ಈ ಸಿನಿಮಾದಲ್ಲಿ ನಟಿಸಲಿದ್ದು, ಯಾವ ಪಾತ್ರ ಮಾಡ್ತಾರೆ ಎಂಬುವುದೇ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಕಾರಣ ಕನ್ನಡದ ʼಶಿವ ಮೆಚ್ಚಿದ ಕಣ್ಣಪ್ಪʼ ಸಿನಿಮಾದಲ್ಲಿ ಶಿವಣ್ಣ ನಾಯಕನಾಗಿ ನಟಿಸಿದ್ದರು. 

ಅಲ್ಲದೆ, 'ಕಣ್ಣಪ್ಪ' ಚಿತ್ರದಲ್ಲಿ ಹಿಂದಿ ಚಿತ್ರರಂಗದ ಕೆಲವು ಟಾಪ್ ಹೀರೋಗಳು ಮತ್ತು ನಾಯಕಿಯರು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಅವರ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಸ್ಟಾರ್‌ ನಟರ ಆಗಮನದಿಂದ ದಿನದಿಂದ ದಿನಕ್ಕೆ ಈ ಚಿತ್ರದ ರೇಂಜ್ ಹೆಚ್ಚುತ್ತಿದ್ದು, ಸಿನಿಮಾದ ಮೇಲೆ ಕ್ಯೂರಿಯಾಸಿಟಿ ಹುಟ್ಟುತ್ತಿದೆ.

ಇದನ್ನೂ ಓದಿ: ನೆಚ್ಚಿನ ನಟಿಗಾಗಿ ದ್ವಿಚಕ್ರ ವಾಹನದಲ್ಲಿ 1000 ಕಿಲೋಮೀಟರ್‌ ಪ್ರಯಾಣಿಸಿದ ಫ್ಯಾನ್‌ : ರಾಕುಲ್‌ ಬರ್ತ್‌ಡೇ ಸ್ಪೆಷಲ್

ಇನ್ನು 'ಕಣ್ಣಪ್ಪ' ಚಿತ್ರದಲ್ಲಿ ವಿಷ್ಣು ಎದುರು ನಾಯಕಿ ಯಾರು? ಎಂಬ ಪ್ರಶ್ನೆ ಶುರುವಾಯಿತು. ಮೊದಲಿಗೆ ಈ ಸಿನಿಮಾದಲ್ಲಿ ನೂಪುರ್ ಸನೋನ್ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೆ, ಶ್ರೀಕಾಳಹಸ್ತಿಯಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿಯೂ ಸಹ ನೂಪರ್‌ ಕಾಣಿಸಿಕೊಂಡಿದ್ದರು. ಆದರೆ... ಡೇಟ್ಸ್ ಅಡ್ಜೆಸ್ಟ್ ಆಗದ ಕಾರಣ ನೂಪುರ್ ಸನನ್ ಈ ಸಿನಿಮಾ ಮಾಡುತ್ತಿಲ್ಲ ಎಂದು ವಿಷ್ಣು ಮಂಚು ಟ್ವೀಟ್ ಮಾಡಿದ್ದರು. ಸದ್ಯದಲ್ಲೇ ನಾಯಕಿಯ ಆಯ್ಕೆ ಆಗಬೇಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News